ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಕೀಯ: ಅಭ್ಯರ್ಥಿಗಳಾಗುವವರಿಗೆ ಉಪ್ಪಿ ಷರತ್ತು

Last Updated 22 ಜುಲೈ 2020, 12:00 IST
ಅಕ್ಷರ ಗಾತ್ರ

ಪ್ರಜಾಕೀಯ ಪಕ್ಷದಿಂದ ಮುಂಬರುವ ಚುನಾವಣೆಗಳಲ್ಲಿ ಅಖಾಡ‌ಕ್ಕೆ ಇಳಿಯಲು ಬಯಸುವಅಭ್ಯರ್ಥಿಗಳಿಗೆ ಪಕ್ಷದ ಸಂಸ್ಥಾಪಕ ಮತ್ತು ನಟ ಉಪೇಂದ್ರ ಅರ್ಹತೆಗಳನ್ನು ನಿಗದಿಪಡಿಸಿದ್ದಾರೆ. ಉಪ್ಪಿಯ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳಾಗುವವರಿಗೆ ಪ್ರಮುಖವಾಗಿ ಈ ಮೂರು ಅರ್ಹತೆಗಳು ಇರಲೇಬೇಕಂತೆ.

ನಾನು ಸಮಾಜವನ್ನು ಉದ್ಧಾರ ಮಾಡುತ್ತೇನೆ, ನನಗೆ ಹೆಸರು ಬರಬೇಕು ಎಂಬ ಅಹಂ, ಸುಳ್ಳು ಸ್ವಾರ್ಥ ಇರಬಾರದು; ಪ್ರಜೆಗಳು (owners) ಹೇಳಿದಂತೆ ಕೆಲಸ ಮಾಡಿ ಅದಕ್ಕೆ ತಕ್ಕ ಪ್ರತಿಫಲ ಸಂಬಳದ ರೂಪದಲ್ಲಿ ಪಡೆಯುತ್ತೇನೆ ಎಂಬ ಸತ್ಯವಾದ ಸ್ವಾರ್ಥವಿರಬೇಕು;ಪ್ರಜೆಗಳು (owners) ತಿರಸ್ಕರಿಸದರೆ ಅವಮಾನ ಎಂದು ತಿಳಿಯದೇ ತನ್ನ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೆಳಗಿಳಿಯುವ ಬಲಿದಾನಕ್ಕೆ ಸಿದ್ಧರಿರಬೇಕು.ಏನಂತೀರಾ? ಇದಕ್ಕೆ ಎಷ್ಟು ಜನ ರೆಡಿ ಇದ್ದೀರಾ? ಎಂದು ಉಪ್ಪಿ ಉತ್ತಮ ಪ್ರಜಾಕೀಯ ಪಕ್ಷದಿಂದ ಅಭ್ಯರ್ಥಿಗಳಾಗುವವರ ಮುಂದೆ ಈ ಪ್ರಶ್ನೆಗಳನ್ನು ಇಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT