ನ.18ರಂದು ತಂದೆ ಮಗನ ಬಾಂಧವ್ಯದ ‘ಅಬ್ಬರ’ ತೆರೆಗೆ

ಕೆ.ರಾಮ್ ನಾರಾಯಣ್ ಅವರ ನಿರ್ದೇಶನದಲ್ಲಿ ಪ್ರಜ್ವಲ್ ದೇವರಾಜ್ ನಾಯಕನಾಗಿ ನಟಿಸಿರುವ ಚಿತ್ರ ಅಬ್ಬರ ನ.18ರಂದು ಬಿಡುಗಡೆಯಾಗುತ್ತಿದೆ.
‘ಟೈಸನ್, ಕ್ರ‍್ಯಾಕ್ ನಂತರ ರಾಮ್‌ನಾರಾಯಣ್ ನಿರ್ದೇಶಿಸಿರುವ ಚಿತ್ರ ಇದಾಗಿದೆ. ಸಿ ಆ್ಯಂಡ್ ಎಂ ಮೂವೀಸ್ ಲಾಂಛನದಲ್ಲಿ ಬಸವರಾಜ್ ಮಂಚಯ್ಯ ಅವರು ನಿರ್ಮಿಸಿದ್ದಾರೆ. ಆ್ಯಕ್ಷನ್, ಫ್ಯಾಮಿಲಿ ಬಾಂಡಿಂಗ್, ಕಾಮಿಡಿ ಎಂಟರ್‌ಟೈನರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತಂದೆ ಮಗನ ನಡುವಿನ ಭಾವನಾತ್ಮಕ ಸಂಬಂಧ ಹಾಗೂ ಅದರ ಮಹತ್ವದ ಕುರಿತಂತೆ ಹೇಳಲಾಗಿದೆ ಎಂದಿದೆ ಚಿತ್ರತಂಡ.
‘ಪ್ರಜ್ವಲ್ ಜೊತೆ ರಾಜಶ್ರೀ ಪೊನ್ನಪ್ಪ, ನಿಮಿಕಾ ರತ್ನಾಕರ್ ಹಾಗೂ ಲೇಖಾಚಂದ್ರ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಾಯಕ ತನ್ನ ಫ್ಯಾಮಿಲಿಗೋಸ್ಕರ ಏನೆಲ್ಲ ಮಾಡುತ್ತಾನೆ ಅನ್ನುವುದನ್ನು ಪ್ರೇಕ್ಷಕರ ಮನಮುಟ್ಟುವ ಹಾಗೆ ನಿರೂಪಿಸಲಾಗಿದೆ. ತಂದೆ ಒಂದು ಒಂದು ತಪ್ಪು ಮಾಡುತ್ತಾನೆ. ಅದನ್ನು ಸರಿಪಡಿಸುವುಕ್ಕೆ ಹೋಗಿ ಮತ್ತೊಂದು ತಪ್ಪು ಮಾಡಿದ. ನಂತರ ಮಗ ಅದನ್ನು ಹೇಗೆ ಸರಿಪಡಿಸುತ್ತಾನೆ ಅನ್ನುವುದೇ ಈ ಚಿತ್ರದ ಎಳೆ. ತಾನು ನಡೆಯುವ ದಾರಿ ಹೀಗೇ ಇರಬೇಕು ಅಂದುಕೊಂಡಿದ್ದರೂ ಅದು ಹೋಗುತ್ತಾ ಹೋಗುತ್ತಾ ಕಳೆದುಹೋಗುತ್ತದೆ. ಮನುಷ್ಯ ಯಾವಾಗಲೂ ಜಾಗೃತನಾಗಿರಬೇಕು ಎನ್ನುವುದೇ ಅಬ್ಬರ ಚಿತ್ರದ ಸಂದೇಶ’ ಎಂದಿದೆ ಚಿತ್ರತಂಡ.
ನಾಯಕ ಪ್ರಜ್ವಲ್ ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಲ್ಲದೆ ಎರಡು ಡ್ಯುಯೆಟ್ ಹಾಡುಗಳನ್ನು ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಶೋಭರಾಜ್, ರವಿಶಂಕರ್, ಶಂಕರ್ ಅಶ್ವಥ್, ವಿಕ್ಟರಿವಾಸು, ಕೋಟೆ ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ ರವಿ ಬಸ್ರೂರು ಅವರ ಸಂಗೀತ, ಜೆ.ಕೆ.ಗಣೇಶ್ ಅವರ ಛಾಯಾಗ್ರಹಣವಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.