ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್ ಸರಣಿ 'ಆಶ್ರಮ್ 3' ಸೆಟ್‌ ಮೇಲೆ ಬಜರಂಗದಳ ಕಾರ್ಯಕರ್ತರಿಂದ ದಾಳಿ

Last Updated 25 ಅಕ್ಟೋಬರ್ 2021, 4:33 IST
ಅಕ್ಷರ ಗಾತ್ರ

ಭೋಪಾಲ: ವೆಬ್ ಸರಣಿ 'ಆಶ್ರಮ್ 3' ಸೆಟ್‌ ಮೇಲೆ ಬಜರಂಗದಳದ ಕಾರ್ಯಕರ್ತರು ಭಾನುವಾರ ದಾಳಿ ನಡೆಸಿದ್ದಾರೆ.

'ಭೋಪಾಲದ ಹೊರವಲಯದಲ್ಲಿ ಆಶ್ರಮ್‌ 3 ವೆಬ್‌ ಸರಣಿಯ ಶೂಟಿಂಗ್‌ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಬಜರಂಗದಳದ ಕಾರ್ಯಕರ್ತರು ಸೆಟ್‌ ಅನ್ನು ಧ್ವಂಸಗೊಳಿಸಿದ್ದಾರೆ. ನಿರ್ದೇಶಕ ಪ್ರಕಾಶ್‌ ಝಾ ಅವರ ಮೇಲೆ ಮಸಿ ಎರಚಿದ್ದಾರೆ' ಎಂದು ವಿಡಿಯೊ ಸಹಿತ ಸುದ್ದಿಯನ್ನು ಎನ್‌ಡಿಟಿವಿ ಪ್ರಕಟಿಸಿದೆ.

ಬಜರಂಗದಳದ ಕಾರ್ಯಕರ್ತರು ಸಿಬ್ಬಂದಿಯನ್ನು ಬೆನ್ನಟ್ಟಿ, ಮೆಟಲ್‌ ಲೈಟ್‌ ಸ್ಟ್ಯಾಂಡ್‌ನಿಂದ ಓರ್ವ ವ್ಯಕ್ತಿಯ ಮೇಲೆ ದಾಳಿ ನಡೆಸಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.

ಬಾಬ್ಬಿ ಡಿಯೋಲ್‌ ನಟಿಸಿರುವ ಪ್ರಕಾಶ್‌ ಝಾ ನಿರ್ದೇಶನದ ವೆಬ್‌ ಸರಣಿಯು ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಆಕ್ರಮಣವಾಗಿದೆ. ವೆಬ್‌ ಸರಣಿಯ ಶೀರ್ಷಿಕೆಯನ್ನು ಬದಲಿಸುವವರೆಗೂ ಚಿತ್ರೀಕರಣಕ್ಕೆ ಒಪ್ಪಿಗೆ ನೀಡುವುದಿಲ್ಲ ಎಂಬುದಾಗಿ ಬಜರಂಗದಳದ ಸದಸ್ಯರು ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಆಶ್ರಮ್ ವೆಬ್‌ಸರಣಿಯಲ್ಲಿ ಹಿಂದೂ ಸಂತರನ್ನು ವಿವಾದಾತ್ಮಕವಾಗಿ ಚಿತ್ರೀಕರಿಸಿದ್ದಾರೆ ಎಂಬ ಕಾರಣಕ್ಕೆ ನಿರ್ದೇಶಕ ಪ್ರಕಾಶ್ ಝಾ ಹಾಗೂ ನಟ ಬಾಬ್ಬಿ ಡಿಯೋಲ್‌ ಅವರಿಗೆ ಜೋಧ್‌ಪುರ ನ್ಯಾಯಾಲಯ ನೋಟಿಸ್ ನೀಡಿತ್ತು. ಆಶ್ರಮ್ ಚಾಪ್ಟರ್‌ 2: ದಿ ಡಾರ್ಕ್ ಸೈಡ್ ವೆಬ್ ಸರಣಿಯು ನವೆಂಬರ್‌ 11 ರಂದು ಬಿಡುಗಡೆಯಾಗಿತ್ತು.

ಎಮ್‌ಎಕ್ಸ್ ಪ್ಲೇಯರ್‌ನಲ್ಲಿ ಪ್ರಸಾರವಾದ ಈ ವೆಬ್‌ಸರಣಿಯಲ್ಲಿ ರಾಜಸ್ಥಾನದ ಜೋಧ್‌ಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷೆಗೆ ಗುರಿಯಾದ ಹಾಗೂ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೆಲವು ಸ್ವಯಂ ಘೋಷಿತ ದೇವಮಾನವರ ಕಥೆಗೆ ಹೋಲುವಂತೆ ಚಿತ್ರೀಕರಿಸಲಾಗಿತ್ತು. ಬಾಬ್ಬಿ ಡಿಯೋಲ್‌ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT