ಬೆಂಗಳೂರು: 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ತೀರ್ಮಾನಕ್ಕೆ ನಟ, ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಪ್ರತಿರೋಧ ವ್ಯಕ್ತಪಡಿಸಿದರು.

ವಿಧಾನಸೌಧದ ಪೂರ್ವದ್ವಾರದ ಮುಂಭಾಗದಲ್ಲಿ ಗುರುವಾರ(ಜ.29) ನಡೆದ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ಯಾಲೆಸ್ಟೀನ್ನ ‘ಯುದ್ಧಗಳು ಕೊನೆಗೊಳ್ಳುತ್ತವೆ, ನಾಯಕರು ಕೈಕುಲುಕಿ ತೆರಳುತ್ತಾರೆ ಆದರೆ ಆ ವೃದ್ಧೆ ತನ್ನ ಮಗನಿಗಾಗಿ ಕಾಯುತ್ತಿರುತ್ತಾಳೆ....’ ಎಂಬ ಪದ್ಯ ಓದಿ ಪ್ರತಿರೋಧಿಸಿದರು.

ಚಿತ್ರೋತ್ಸವಕ್ಕೆ ಆಯ್ಕೆಯಾದ ಐದು ಪ್ಯಾಲೆಸ್ಟೀನ್ ಸಿನಿಮಾಗಳ ಪೈಕಿ ‘ಆಲ್ ದಾಟ್ಸ್ ಲೆಫ್ಟ್ ಆಫ್ ಯು’, ‘ದಿ ವಾಯ್ಸ್ ಆಫ್ ಹಿಂದ್ ರಜಬ್’, ‘ಪುಟ್ ಯುವರ್ ಸೋಲ್ ಆನ್ ಯುವರ್ ಹ್ಯಾಂಡ್ ಆ್ಯಂಡ್ ವಾಕ್’ ಹಾಗೂ ‘ಯಸ್’ ಎಂಬ ನಾಲ್ಕು ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ.

ಈ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್, ‘ಚಿತ್ರೋತ್ಸವಗಳು ಮಾನವೀಯ ಬಾಂಧವ್ಯ ಬೆಳೆಯಲು ಕಾರಣವಾಗುತ್ತವೆ. ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ರಾಜಕೀಯ ಪ್ರವೇಶ ಮಾಡಿದೆ. ಈ ವರ್ಷ ಪ್ಯಾಲೆಸ್ಟೀನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿಲ್ಲ. ಇದರ ವಿರುದ್ಧ ಗಟ್ಟಿಯಾದ ನಿಲುವನ್ನು ಮುಖ್ಯಮಂತ್ರಿಯವರು ತೆಗೆದುಕೊಳ್ಳಬೇಕು’ ಎಂದರು.

‘ನಮ್ಮ ಮಣ್ಣಿನ ‘ಎದೆಯ ಹಣತೆ’ ಬೇರೆ ಭಾಷೆಗೆ ತರ್ಜುಮೆಯಾಗಿ ಬುಕರ್ ಪ್ರಶಸ್ತಿ ಬಂದಾಗ ಸಂಭ್ರಮಿಸುವ ನಾವು, ನಮ್ಮ ನೆಲಕ್ಕೆ ಇನ್ನೊಬ್ಬರ ಕಥೆಗಳನ್ನು ತರುವುದಕ್ಕೆ ಆಗುವುದಿಲ್ಲ ಎನ್ನುವ ನಿರ್ಬಂಧವನ್ನು ಒಪ್ಪಿಕೊಳ್ಳಲು ಹೇಗೆ ಸಾಧ್ಯ? ಕೇರಳದ ಚಿತ್ರೋತ್ಸವದಲ್ಲೂ ಹೀಗೆ ಮಾಡಿದಾಗ ಅಲ್ಲಿನ ಸರ್ಕಾರ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿತು. ನಿಮ್ಮ ರಾಜಕೀಯ ಹುನ್ನಾರ ನಡೆಯುವುದಿಲ್ಲ ಎನ್ನುವುದನ್ನು ನಮ್ಮ ಸರ್ಕಾರ, ಚಲನಚಿತ್ರ ಅಕಾಡೆಮಿ ಪ್ರತಿಭಟಿಸಬೇಕು’ ಎಂದರು ಪ್ರಕಾಶ್ ರಾಜ್.

ಶಾಸಕ ರಿಜ್ವಾನ್ ಅರ್ಷದ್ ಮಾತನಾಡಿ, ‘ಪ್ಯಾಲೆಸ್ಟೀನ್ ಸಿನಿಮಾಗಳನ್ನು ನಮ್ಮ ವೇದಿಕೆ ಮೇಲೆ ಪ್ರದರ್ಶನ ಮಾಡುತ್ತೇವೆ. ಅದು ಸಿದ್ದರಾಮಯ್ಯನವರ ಸರ್ಕಾರದಲ್ಲಿ ಆಗದೇ ಇದ್ದರೆ ಎಲ್ಲೂ ಆಗುವುದಿಲ್ಲ’ ಎಂದರು.

ನಟಿ ರುಕ್ಮಿಣಿ ವಸಂತ್, ಸಭಾಪತಿ ಬಸವರಾಜ ಹೊರಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ. ಕಾವೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ನಿಂಬಾಳ್ಕರ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಪಿ.ಬಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಎಂ. ಇದ್ದರು.

ಭಾಗವಹಿಸುವಿಕೆ ಹೆಚ್ಚಳ: ಉದ್ಘಾಟನಾ ಕಾರ್ಯಕ್ರಮದಲ್ಲಿ ಈ ವರ್ಷ ಭಾಗವಹಿಸಿದ ಸಿನಿಮಾ ಕ್ಷೇತ್ರದ ಗಣ್ಯರ ಸಂಖ್ಯೆ ಹೆಚ್ಚಿತ್ತು.

‘ಅಸಮಾನತೆ ತೊಲಗಲಿ’

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಸಿನಿಮಾಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಆಗಬೇಕು. ಸಮಾಜದಲ್ಲಿ ಅಸಮಾನತೆ ಬಡತನ ಇದೆ. ಇವುಗಳನ್ನು ಹೋಗಲಾಡಿಸುವ ಕೆಲಸವನ್ನು ಸಿನಿಮಾಗಳು ಮಾಡಬೇಕು’ ಎಂದರು.

‘ಬೇರೆ ದೇಶಗಳ ಜನಜೀವನ ರಾಜಕೀಯ ಸಮಾಜ ಅರ್ಥ ಮಾಡಿಕೊಳ್ಳಲು ಇಂಥ ಅಂತರರಾಷ್ಟ್ರೀಯ ಚಿತ್ರೋತ್ಸವ ಮಾಡುತ್ತಿದ್ದೇವೆ. ಸಮಸಮಾಜ ಕಟ್ಟಲು ಇದರಿಂದ ಸಾಧ್ಯ’ ಎಂದರು.

‘ಶೋಷಿತರ ಹಿಂದುಳಿದವರ ರೈತರ ಸಮಸ್ಯೆಗಳಿಗೆ ಧ್ವನಿಯಾಗಿ ಪ್ರಕಾಶ್ ರಾಜ್ ಕೆಲಸ ಮಾಡುತ್ತಿದ್ದಾರೆ’ ಎಂದು ಮುಖ್ಯಮಂತ್ರಿ ಶ್ಲಾಘಿಸಿದರು.

ಆದರೆ ಪ್ರಕಾಶ್ ರಾಜ್ ಅವರ ಆಗ್ರಹಕ್ಕೆ ವೇದಿಕೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ನಿರ್ಮಾಪಕರಿಗೆ ಸಹಾಯವಾಗುವಂತೆ ಚಿತ್ರೀಕರಣದ ಅನುಮತಿಗಳಿಗಾಗಿ ಏಕಗವಾಕ್ಷಿ ತರಬೇಕು. ಇದರಿಂದ ನಿರ್ಮಾಪಕರ ಹಣ ಸಮಯ ಉಳಿತಾಯವಾಗಲಿದೆ.
– ಸಾಧುಕೋಕಿಲ ಚಲನಚಿತ್ರ ಅಕಾಡೆಮಿ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.