ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಣವ್ ಆಡಿಯೋ ಕಂಪನಿ ಆರಂಭ

Last Updated 8 ಮೇ 2022, 9:52 IST
ಅಕ್ಷರ ಗಾತ್ರ

ಸಂತೃಪ್ತಿ ಕಂಬೈನ್ಸ್‌ನ ಅವರ ಪ್ರಣವ್ ಆಡಿಯೋ ಕಂಪನಿ ಸಹ ಇತ್ತೀಚೆಗೆ ಆರಂಭವಾಗಿದೆ. ಕಂಪನಿಯ ಮೊದಲ ಹೆಜ್ಜೆಯಾಗಿ ‘ಸ್ಯಾಟರ್ಡೇ ನೈಟಲಿ’ ಎಂಬ ಆಲ್ಬಂ ಹಾಡುಬಿಡುಗಡೆಯಾಗಿದೆ.

‘ನನಗೆ ಪ್ರತಿಭೆಗಳನ್ನು ಪ್ರೋತ್ಸಾಹಿಸುವುದಷ್ಟೇ ಉದ್ದೇಶ. ನಮ್ಮ ಪ್ರಣವ್ ಆಡಿಯೋ ಕಂಪನಿಯ ಮೊದಲ ಪ್ರಯತ್ನವಾಗಿ ಈ ಆಲ್ಬಂ ಸಾಂಗ್ ಹೊರತಂದಿದ್ದೇವೆ. ಮುಂದೆ ಸಿನಿಮಾ ನಿರ್ಮಾಣ ಮಾಡುವ ಉದ್ದೇಶವಿದೆ.‌ ಸದ್ಯದಲ್ಲೇ ಈ ಕುರಿತು ಮಾಹಿತಿ ನೀಡುತ್ತೇನೆ’ ಎಂದರು ಪ್ರಣವ್ ಆಡಿಯೋ ಮಾಲೀಕರಾದ ವಿರೂಪಾಕ್ಷಿ.

‘ಸ್ಯಾಟರ್ಡೇ ನೈಟಲಿ’ ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಚರ್ಚ್ ರಸ್ತೆಯಲ್ಲಿ ಚಿತ್ರೀಕರಣವಾದ ಹಾಡು. ಮುಂದೆ ಚಿತ್ರ ಮಾಡುವ ಉದ್ದೇಶವಿದೆ. ಅದಕ್ಕೂ ಮುಂಚೆ ಈ‌ ಆಲ್ಬಂ ಸಾಂಗ್ ನಿರ್ದೇಶನ ಮಾಡಿದ್ದೀನಿ. ‘ಇರುವುದೆಲ್ಲವ ಬಿಟ್ಟು’ ಸಿನಿಮಾ ಖ್ಯಾತಿಯ ಶ್ರೀ ಹಾಗೂ ಪೂಜಾ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಸಿದ್ದಾರ್ಥ್ ಹಾಡು ಬರೆದು ನಿರ್ಮಾಣ ಮಾಡಿದ್ದಾರೆ. ಪ್ರೇಮ್ ಭರತ್ ಸಂಗೀತ ನೀಡಿದ್ದಾರೆ. ನಾಗರಾಜ್ ಛಾಯಾಗ್ರಹಣ ಮಾಡಿದ್ದಾರೆ. ಶ್ರೇಯಸ್ಸ್ ಭೈರವ್ ನೃತ್ಯ ನಿರ್ದೇಶನದ ಈ ಹಾಡನ್ನು ಅನಿರುದ್ಧ್ ಶಾಸ್ತ್ರಿ ಹಾಡಿದ್ದಾರೆ’ ಎಂದು ಆಲ್ಬಂ ಸಾಂಗ್ ನಿರ್ದೇಶಕ ರವಿಕುಮಾರ್ ಮಾಹಿತಿ ನೀಡಿದರು.

‘ನಾನು ‘ಇರುವುದೆಲ್ಲವ ಬಿಟ್ಟು’ ಹಾಗೂ ‘ಗಜಾನನ ಗ್ಯಾಂಗ್’ ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ನಾನು ನಟಿಸಿರುವ ಮೊದಲ ಆಲ್ಬಂ ಸಾಂಗ್. ಒಳ್ಳೆಯ ತಂಡದೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ’ ಎಂದರು ನಾಯಕ ಶ್ರೀ.

‘ನಾನು ಮೂಲತಃ ಸಿವಿಲ್ ಎಂಜಿನಿಯರ್. ಹಾಡು ಬರೆಯುವುದು ನನ್ನ ಹವ್ಯಾಸ.‌ ಅನೇಕ ಹಾಡುಗಳನ್ನು ಬರೆದಿದ್ದೇನೆ.‌ ಆದರೆ‌ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಆಲ್ಬಂ ಸಾಂಗನ್ನು ನಾನೇ ನಿರ್ಮಾಣ ಕೂಡ ಮಾಡಿದ್ದೇನೆ’ ಎನ್ನುತ್ತಾರೆ ಸಿದ್ದಾರ್ಥ್.

ನಾಯಕಿ ಪೂಜಾ, ಸಂಗೀತ ನಿರ್ದೇಶಕ ಪ್ರೇಮ್ ಭರತ್, ನಿರ್ಮಾಣ ಉಸ್ತುವಾರಿ ವಹಿಸಿಕೊಂಡಿರುವ ಪ್ರೇಮ್ ಹೊಸ್ಮನಿ, ಪ್ರಣವ್ ಆಡಿಯೋ ಕಂಪನಿ ಬ್ಯುಸಿನೆಸ್ ಹೆಡ್ ರಶ್ಮಿತಾ ಹಾಗೂ ನೃತ್ಯ ನಿರ್ದೇಶಕ ಶ್ರೇಯಸ್ಸ್ ಭೈರವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT