ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಬಾಯ್‌ಫ್ರೆಂಡ್ ಮುಖ ತೋರಿಸಿದ ಗರ್ಭಿಣಿ ಇಲಿಯಾನಾ!

ಗೋವಾ ಮೂಲದ ಇಂಡಿಯಾ–ಪೋರ್ಚುಗೀಸ್ ನಟಿ ಇಲಿಯಾನಾ ಡಿಕ್ರೂಜ್ ಈಗ ತುಂಬು ಗರ್ಭಿಣಿ. ಆದರೆ, ತಂದೆ ಯಾರು ಎಂಬುದು ಬಹಿರಂಗವಾಗಿರಲಿಲ್ಲ
Published 18 ಜುಲೈ 2023, 13:02 IST
Last Updated 18 ಜುಲೈ 2023, 13:02 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ ಹಾಗೂ ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಸಿನಿ ರಸಿಕರ ಮನ ಗೆದ್ದಿದ್ದ ಗೋವಾ ಮೂಲದ ಇಂಡಿಯಾ–ಪೋರ್ಚುಗೀಸ್ ನಟಿ ಇಲಿಯಾನಾ ಡಿಕ್ರೂಜ್ ಈಗ ತುಂಬು ಗರ್ಭಿಣಿ.

ಆದರೆ, ಇಲಿಯಾನಾ ಇನ್ನೂ ಮದುವೆಯಾಗಿಲ್ಲ. ಲೀವ್ ಇನ್ ರಿಲೇಷನ್‌ಶಿಫ್‌ನಲ್ಲಿ ಮುಂದುವರಿದಿದ್ದಾರೆ. ತಮ್ಮ ಬಾಯ್‌ಫ್ರೆಂಡ್ ಯಾರು ಎನ್ನುವುದನ್ನೂ ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಆ ಮಗುವಿನ ತಂದೆ ಯಾರಮ್ಮಾ? ಎಂದು ನೆಟ್ಟಿಗರು ಆಗಾಗ ಇಲಿಯಾನಾರನ್ನು ಚುಚ್ಚುತ್ತಿದ್ದರು.

ಅಂತೂ ಇಲಿಯಾನಾ ತನ್ನ ಬಾಯ್‌ಫ್ರೆಂಡ್ ಹಾಗೂ ತನ್ನ ಹುಟ್ಟೋ ಮಗುವಿನ ತಂದೆ ಯಾರು ಎಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಒಂದನ್ನು ಹಾಕಿಕೊಂಡಿರುವ ಅವರು, ‘ಡೇಟ್ ನೈಟ್’ ಎಂದು ಹೇಳಿ ಬಾಯ್‌ಫ್ರೆಂಡ್ ಮುಖ ತೋರಿಸಿದ್ದಾರೆ.

ಯುರೋಪಿಯನ್ ವ್ಯಕ್ತಿ ತರ ಕಾಣುತ್ತಿರುವ ಅವರ ಹೆಸರನ್ನು ಇಲಿಯಾನಾ ಬಹಿರಂಗಪಡಿಸಿಲ್ಲ.

ಕೊನೆಗೂ ಬಾಯ್‌ಫ್ರೆಂಡ್ ಮುಖ ತೋರಿಸಿದ ಗರ್ಭಿಣಿ ಇಲಿಯಾನಾ!
ಕೊನೆಗೂ ಬಾಯ್‌ಫ್ರೆಂಡ್ ಮುಖ ತೋರಿಸಿದ ಗರ್ಭಿಣಿ ಇಲಿಯಾನಾ!Manjunath C. Bhadrashetti

18ನೇ ವರ್ಷದಲ್ಲೇ ಮಾಡೆಲಿಂಗ್ ಮತ್ತು ಸಿನಿಜಗತ್ತಿಗೆ ಪದಾರ್ಪಣೆ ಮಾಡಿದ ಇಲಿಯಾನಾ ಏಪ್ರಿಲ್‌ನಲ್ಲಿ ತಾವು ಗರ್ಭಿಣಿಯಾಗಿದ್ದೇನೆ ಎಂದು ಹೇಳಿಕೊಂಡಿದ್ದರು. ನಟಿ ಕತ್ರಿನಾ ಕೈಫ್ ಸಹೋದರನ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇಲಿಯಾನಾ ಡೇಟಿಂಗ್ ಮಾಡುತ್ತಿರುವುದು ಕತ್ರಿನಾ ಸಹೋದರ ಅಲ್ಲ ಎಂಬುದು ಖಚಿತವಾಗಿದೆ.

ಸದ್ಯ ಈ ನಟಿ ಅನ್‌ಫೇರ್ ಆ್ಯಂಡ್ ಲವ್ಲಿ ಹಾಗೂ ಲವರ್ಸ್ ಎನ್ನುವ ಎರಡು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದು ಸದ್ಯದಲ್ಲಿ ಅವು ಬಿಡುಗಡೆಯಾಗಲಿವೆ.

ಇಲಿಯಾನಾ
ಇಲಿಯಾನಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT