ಬುಧವಾರ, ಜನವರಿ 29, 2020
30 °C
Priyamani in Talaivi Movie

ಶಶಿಕಲೆಯಾಗಿ ‘ತಲೈವಿ’ ಚಿತ್ರತಂಡ ಸೇರಿದ ಪ್ರಿಯಾಮಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಯಲಲಿತಾ ಜೀವನಾಧಾರಿತ ಚಿತ್ರದಲ್ಲಿ ಕಂಗನಾ, ಜಯಲಲಿತಾ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅದಕ್ಕಾಗಿ ತಮಿಳು ಭಾಷೆಯನ್ನು ಅವರು ಈಚೆಗೆ ಕಲಿಯುತ್ತಿರುವುದು ಸುದ್ದಿಯಾಗಿತ್ತು.  ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಗೊಳ್ಳಲಿರುವ ‌ಈ ’ತಲೈವಿ‘ ಸಿನಿಮಾದ ಬಗ್ಗೆ ಭಾರಿ ಕುತೂಹಲ ಅಭಿಮಾನಿಗಳದ್ದು. 

ಜಯಲಲಿತಾ ಅವರ ಆಪ್ತ ಸ್ನೇಹಿತೆ ಶಶಿಕಲಾ ಅವರಿಲ್ಲದೇ ಈ ಸಿನಿಮಾ ಅಪೂರ್ಣ. ಆ ವಿವಾದಾತ್ಮಕ ಶಶಿಕಲಾ ಪಾತ್ರಕ್ಕೆ ನಟಿ ಪ್ರಿಯಾಮಣಿ ಜೀವ ತುಂಬಲಿದ್ದಾರೆ.  ಎಂಜಿ ರಾಮಚಂದ್ರನ್‌ ಪಾತ್ರಕ್ಕೆ ತಮಿಳು ನಟ ಅರವಿಂದ ಸ್ವಾಮಿ ಅವರನ್ನ ಆಯ್ಕೆ ಮಾಡಲಾಗಿದೆ.  ಈ ಸಿನಿಮಾವನ್ನು ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದ್ದು, ಫೆಬ್ರವರಿ 20, 2020ರಲ್ಲಿ ತೆರೆಮೇಲೆ ಬರಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು