ಭಾನುವಾರ, ಅಕ್ಟೋಬರ್ 24, 2021
28 °C

ಮಾಲ್ಡೀವ್ಸ್ ಪ್ರವಾಸದಲ್ಲಿ ಪರಿಣಿತಿ ಚೋಪ್ರಾ: ಸಹೋದರಿಗೆ ಪ್ರಿಯಾಂಕಾ ಹೇಳಿದ್ದೇನು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Parineeti Chopra

ಬೆಂಗಳೂರು: ಬಾಲಿವುಡ್ ನಟ-ನಟಿಯರ ನೆಚ್ಚಿನ ತಾಣ ಮಾಲ್ಡೀವ್ಸ್‌ಗೆ ಸದಾ ಒಬ್ಬರಾದ ಬಳಿಕ ಮತ್ತೊಬ್ಬರಂತೆ ಪ್ರವಾಸ ತೆರಳುತ್ತಾ ಇರುತ್ತಾರೆ. ಈ ಬಾರಿ ಪರಿಣಿತಿ ಚೋಪ್ರಾ ಅವರ ಸರದಿ.

ನಟಿ ಪರಿಣಿತಿ ಚೋಪ್ರಾ ಅವರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿರುವ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಸೂರ್ಯನ ಬಿಸಿಲಿಗೆ ಮೈಯೊಡ್ಡಿ ಕುಳಿತಿರುವ ಫೋಟೊ ಕಂಡು ಪರಿಣಿತಿ ಅಭಿಮಾನಿಗಳು ಕೂಡ ಖುಷಿಪಟ್ಟಿದ್ದರು.

ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ ಮಾತ್ರ, ಈ ಬಾರಿಯೂ ಕಾಲೆಳೆಯಲು ಮುಂದಾಗಿದ್ದು, ಇನ್‌ಸ್ಟಾಗ್ರಾಂ ಫೋಟೊಗೆ ಕಮೆಂಟ್ ಮಾಡಿದ್ದಾರೆ.. ಅಲ್ಲದೆ, ನನ್ನನ್ನು ನೋಡಿ ಸ್ಫೂರ್ತಿ ಹೊಂದಿರುವಂತಿದೆ ಎಂದಿದ್ದಾರೆ.

ಇತ್ತೀಚೆಗಷ್ಟೇ ಪ್ರಿಯಾಂಕಾ ಚೋಪ್ರಾ ಅವರ ಪೋಸ್ಟ್‌ಗೆ ಪರಿಣಿತಿ ಚೋಪ್ರಾ ಕಮೆಂಟ್ ಮಾಡಿ ಗೋಳು ಹೊಯ್ದುಕೊಂಡಿದ್ದರು. ಹೀಗಾಗಿ ಈ ಬಾರಿ ಪ್ರಿಯಾಂಕಾ ಚೋಪ್ರಾ ಕೂಡ ಪರಿಣಿತಿಯ ಫೋಟೊಗೆ ಕಮೆಂಟ್ ಮಾಡಿದ್ದಾರೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು