ಮಂಗಳವಾರ, ಡಿಸೆಂಬರ್ 6, 2022
22 °C

ಅಮೆರಿಕದ ಉಪಾಧ್ಯಕ್ಷರನ್ನು ಸಂದರ್ಶಿಸಿದ ಪ್ರಿಯಾಂಕ ಚೋಪ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಬಾಲಿವುಡ್ನ ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಶುಕ್ರವಾರ ಸಂದರ್ಶಿಸಿದ್ದಾರೆ. ಶ್ವೇತಭವನಕ್ಕೆ ಭೇಟಿ ನೀಡಿದ ಪ್ರಿಯಾಂಕ, ಸಂದರ್ಶನ ವೇಳೆ ಗರ್ಭಪಾತ ಕಾನೂನುಗಳು, ವೇತನ ಸಮಾನತೆ ಬಗ್ಗೆ ಹ್ಯಾರಿಸ್‌ ಅವರೊಂದಿಗೆ ಚರ್ಚಿಸಿದ್ದಾರೆ.
ಡೆಮಾಕ್ರಟಿಕ್ ರಾಷ್ಟ್ರೀಯ ಸಮಿತಿ ಮಹಿಳಾ ನಾಯಕತ್ವ ವೇದಿಕೆಯಲ್ಲಿ ಮಾತನಾಡಿದ ಅವರು, 22 ವರ್ಷಗಳ ವೃತ್ತಿಜೀವನದಲ್ಲಿ ಈ ವರ್ಷ ನಾನು ಮೊದಲ ಬಾರಿಗೆ ಪುರುಷ ಸಹ-ನಟನೊಂದಿಗಿನ ಕೆಲಸದಲ್ಲಿ ಸಮಾನ ವೇತನವನ್ನು ಪಡೆದಿದ್ದೇನೆ ಎಂದರು.

ಕಮಲಾ ಹ್ಯಾರಿಸ್ ಮಾತನಾಡಿ, ಅಧಿಕಾರದಲ್ಲಿರುವ ಮಹಿಳಾ ಡೆಮೋಕ್ರಟ್‌ಗಳು ಸಂತಾನೋತ್ಪಾದನೆ ಹಕ್ಕುಗಳಿಗಾಗಿ ಹೋರಾಡುವ ಕರ್ತವ್ಯವನ್ನು ನೆನಪಿಸಿದರು ಮತ್ತು ಮುಂಬರುವ ಮಧ್ಯಂತರ ಚುನಾವಣೆಯಲ್ಲಿ ಇನ್ನಿಬ್ಬರು ಡೆಮಾಕ್ರಟಿಕ್ ಸೆನೆಟರ್‌ಗಳನ್ನು ಆಯ್ಕೆ ಮಾಡುವುದು ಹೇಗೆ ಆ ಹೋರಾಟಕ್ಕೆ ನಿರ್ಣಾಯಕವಾಗಲಿದೆ ಎಂಬುದನ್ನು ವಿವರಿಸಿದರು.

ಈ ವಿಶೇಷ ಸಂವಾದದ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರು ವೈಟ್ ಹೌಸ್‌ನ ಚಿತ್ರಗಳನ್ನು ಹಂಚಿಕೊಂಡರೆ, ಅವರ ಪತಿ ಗಾಯಕ ನಿಕ್ ಜೋನಾಸ್ ನ್ಯೂಯಾರ್ಕ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಮಹಿಳೆಯರ ಹಕ್ಕುಗಳಿಗಾಗಿನ ಈ ವಿಶೇಷ ಸಭೆಯಲ್ಲಿ ಪ್ರಿಯಾಂಕಾ ಚೋಪ್ರಾ ಗರ್ಭಪಾತದ ಕಾನೂನಿನ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ. ಭಾರತದಲ್ಲಿ ಗರ್ಭಪಾತವನ್ನು ಕಾನೂನುಬದ್ಧಗೊಳಿಸುವ ಭಾರತದ ಸುಪ್ರೀಂ ಕೋರ್ಟ್ ತೀರ್ಪನ್ನು ಪ್ರಿಯಾಂಕಾ ಶ್ಲಾಘಿಸಿದ್ದರು. ಮೂರನೇ ವ್ಯಕ್ತಿಯನ್ನು ಸಂಪರ್ಕಿಸದೆ ಗರ್ಭಪಾತವನ್ನು ಪಡೆಯಲು ಮಹಿಳೆ “ಸಂತಾನೋತ್ಪತ್ತಿ ಸ್ವಾಯತ್ತತೆ” ಹೊಂದಿರಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಈ ಆದೇಶದ ಕುರಿತು ಪ್ರತಿಕ್ರಿಯಿಸಿದ್ದ ಪ್ರಿಯಾಂಕಾ, ಆಯ್ಕೆ ಮಾಡುವ ಹಕ್ಕು ಪ್ರಪಂಚದಾದ್ಯಂತ ಮಹಿಳೆಯರಿಗೆ ಇರಬೇಕಾದ ಏಕೈಕ ಹಕ್ಕಾಗಿದೆ. ಇದೊಂದು ಪ್ರಗತಿಪರ ಹೆಜ್ಜೆ ಎಂದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು