ಮಂಗಳವಾರ, ಜುಲೈ 27, 2021
21 °C

39ನೇ ವಸಂತಕ್ಕೆ ಕಾಲಿಟ್ಟ ಪ್ರಿಯಾಂಕಾ: ಅಭಿಮಾನಿಗಳಿಂದ ಟ್ರೆಂಡ್‌ ಆದ 'ಪಿಗ್ಗಿ'

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನಟನೆ, ಗಾಯನ, ಚಿತ್ರ ನಿರ್ಮಾಣಗಳಲ್ಲಿ ಯಶಸ್ಸು ಪಡೆದಿರುವ ಬಹುಮುಖ ಪ್ರತಿಭೆ ಪ್ರಿಯಾಂಕಾ ಚೋಪ್ರಾ ಅವರು ಸದ್ಯ ಲಂಡನ್‌ನಲ್ಲಿ ನಡೆಯುತ್ತಿರುವ ಸಿಟಾಡೆಲ್‌ ಡ್ರಾಮಾ ಸಿರೀಸ್‌ನ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ.

ಭಾನುವಾರ 39ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಿಯಾಂಕಾ ಲಂಡನ್‌ನಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹಾಟ್‌ ಚಿತ್ರವನ್ನೂ ಹಂಚಿಕೊಂಡಿದ್ದಾರೆ.

ಪ್ರಿಯಾಂಕಾ ಹುಟ್ಟುಹಬ್ಬದ ಅಂಗವಾಗಿ ಬಾಲಿವುಡ್‌ ನಟ–ನಟಿಯರು ಸೇರಿದಂತೆ ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.

ಬಾಜಿರಾವ್ ಮಸ್ತಾನಿ, ಮೇರಿ ಕೋಮ್, ಬರ್ಫಿ, ಫ್ಯಾಶನ್, ಡಾನ್ ಸಿಕ್ವೆಲ್‌, ಕಾಮಿನಿ, ಎತ್ರಾಜ್‌ನಂತಹ ಸೂಪರ್‌ಹಿಟ್ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸಿದ್ದಾರೆ.

‘ಬೇವಾಚ್‌’ ಚಿತ್ರದ ಮೂಲಕ ಹಾಲಿವುಡ್‌ಗೆ ಪ್ರವೇಶಿಸಿದ ಅವರು ಅಮೆರಿಕಾದ ‘ಕ್ವಾಂಟಿಕೋ’ ಟಿ.ವಿ ಸಿರೀಯಲ್‌ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತರಾಗಿದ್ದಾರೆ.

‌2018ರಲ್ಲಿ ಅಮೆರಿಕ ಮೂಲದ ನಟ, ಹಾಡುಗಾರ ನಿಕೊಲಾಸ್ ಜೆರ‍್ರಿ ಜೋನಾಸ್ ಅವರನ್ನು ವಿವಾಹವಾಗಿರುವ ಪ್ರಿಯಾಂಕಾ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು