ಸೋಮವಾರ, ಮಾರ್ಚ್ 20, 2023
30 °C

ಕ್ವಾರಂಟೈನ್‌ ಲೈಫ್‌ನಲ್ಲಿ 'ಡಿಯಾನಾ' ಜೊತೆ ನಟಿ ಪ್ರಿಯಾಂಕಾ ಚೋಪ್ರಾ!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Instagram/Priyanka Chopra

ಲಂಡನ್‌: ನಟಿ ಪ್ರಿಯಾಂಕಾ ಚೋಪ್ರಾ ಲಂಡನ್‌ನಲ್ಲಿ 'ಡಿಯಾನಾ' ಜೊತೆ ಸಮಯ ಕಳೆಯುತ್ತಿದ್ದಾರೆ. ಡಿಯಾನಾ ಭೇಟಿಯಾದ ಖುಷಿಯನ್ನು 'ರಿಯೂನಿಯನ್‌' ಎಂದು ಕರೆದಿರುವ ಪ್ರಿಯಾಂಕಾ 'ಕ್ವಾರಂಟೈನ್‌ಲೈಫ್‌' ಎಂದು ಪೋಸ್ಟ್‌ ಮಾಡಿದ್ದಾರೆ.

ಡಿಯಾನಾವನ್ನು ಮುದ್ದು ಮಾಡುತ್ತಿರುವ ಪ್ರಿಯಾಂಕಾರ ಫೋಟೊ ಅಭಿಮಾನಿಗಳ ಮನ ಗೆದ್ದಿದೆ. ತಮ್ಮ ಮುಂದಿನ ಚಿತ್ರ ಸಿಟೆಡಾಲ್‌ನ ಚಿತ್ರೀಕರಣ ನಡೆಯುತ್ತಿದ್ದು, ಕೆಲವು ತಿಂಗಳಿನಿಂದ ಪ್ರಿಯಾಂಕಾ ಲಂಡನ್‌ನಲ್ಲಿ ನೆಲೆಸಿದ್ದಾರೆ.

ಈ ನಡುವೆ ಕಳೆದ ವಾರ ನ್ಯೂಯಾರ್ಕ್‌ ಪ್ರವಾಸ ಮಾಡಿದ್ದ ಪ್ರಿಯಾಂಕಾ, ನಗರದ ಕೇಂದ್ರದಲ್ಲಿರುವ ತಮ್ಮ ಭಾರತೀಯ ರೆಸ್ಟೋರೆಂಟ್‌ ಸೋನಾಗೆ ಭೇಟಿ ನೀಡಿದ್ದರು. ಕಳೆದ ವರ್ಷ ರೆಸ್ಟೋರೆಂಟ್‌ ಆರಂಭದ ಕಾರ್ಯಕ್ರಮಕ್ಕೆ ಪ್ರಿಯಾಂಕಾ ಬಂದಿರಲಿಲ್ಲ. ಮೊದಲ ಬಾರಿಗೆ ತಮ್ಮದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದ ಪ್ರಿಯಾಂಕಾ ತಮಗೆ ಪ್ರಿಯವಾದ ಭಾರತೀಯ ತಿನಿಸುಗಳನ್ನು ಸವಿದಿದ್ದರು.

ನಾಯಿ ಪ್ರೇಮಿ ಸೆಲೆಬ್ರಿಟಿಗಳ ಪೈಕಿ ಗುರುತಿಸಿಕೊಂಡಿರುವ ಪ್ರಿಯಾಂಚಾ ಚೋಪ್ರಾಗೆ ಡಿಯಾನಾ ಎಂದರೆ ಅಚ್ಚುಮೆಚ್ಚು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು