ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಕಥೆ ಹೊತ್ತು ಬಂದ ಪೃಥ್ವಿ

Published 30 ನವೆಂಬರ್ 2023, 20:19 IST
Last Updated 30 ನವೆಂಬರ್ 2023, 20:19 IST
ಅಕ್ಷರ ಗಾತ್ರ

‘ದಿಯಾ’ ಸಿನಿಮಾ ಮೂಲಕ ಚಂದನವನದಲ್ಲಿ ಛಾಪು ಮೂಡಿಸಿದ ನಟ ಪೃಥ್ವಿ ಅಂಬಾರ್ ಅಭಿನಯದ ಹೊಸ ಸಿನಿಮಾವೊಂದು 2024ರ ಜನವರಿಗೆ ತೆರೆಗೆ ಬರಲಿದೆ. ವೈಭವ್ ಮಹಾದೇವ್ ಸಾರಥ್ಯದ ‘ಜೂನಿ’ ಶೀರ್ಷಿಕೆಯ ಈ ಸಿನಿಮಾ ಮೂಲಕ ಮತ್ತೊಂದು ಪ್ರೇಮಕಥೆ ಹೊತ್ತು ಬಂದಿದ್ದಾರೆ. 

‘ಜನ್ನಿ’ ಎಂಬ ಕಿರುಚಿತ್ರ ನಿರ್ದೇಶಿಸಿದ್ದ ವೈಭವ್ ಮಹಾದೇವ್ ‘ಜೂನಿ’ ಸಿನಿಮಾ ಮೂಲಕ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆಯೂ ಅವರದ್ದೇ. ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆಗೆ ನಾಯಕಿ ರಿಷಿಕಾ ನಾಯಕ್ ಬಣ್ಣಹಚ್ಚಿದ್ದಾರೆ.

 ‘ಜೂನಿ’ ರೊಮ್ಯಾಂಟಿಕ್ ಕಥಾಹಂದರದ ಸಿನಿಮಾ. ತ್ರಿಶೂಲ ಕ್ರಿಯೇಷನ್ಸ್‌ನಡಿ ಮೋಹನ್ ಕುಮಾರ್ ಎಸ್. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆದಿದೆ. ನಕುಲ್ ಅಭ್ಯಂಕರ್ ಸಂಗೀತ, ಶಶಾಂಕ್ ನಾರಾಯಣ ಸಂಕಲನ, ಅಜಿನ್ ಬಿ., ಜಿತಿನ್ ದಾಸ್ ಛಾಯಾಚಿತ್ರಗ್ರಹಣ, ನವೀನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಚಿತ್ರದ ಫಸ್ಟ್‌ಲುಕ್‌ ಬಿಡುಗಡೆ ಮಾಡಿರುವ ಚಿತ್ರತಂಡ ಹಂತಹಂತವಾಗಿ ಟೀಸರ್, ಟ್ರೇಲರ್ ಬಿಡುಗಡೆಗೆ ನಿರ್ಧರಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT