ಶನಿವಾರ, ಜನವರಿ 25, 2020
22 °C

ಬಿಎಂಟಿಸಿಗೆ ಪುನೀತ್‌ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಂಟಿಸಿ 'ನಿಮ್ಮ ಬಸ್‌' ಯೋಜನೆಗೆ ಪುನೀತ್‌ ರಾಜ್‌ಕುಮಾರ್‌ ಪ್ರಚಾರ ರಾಯಭಾರಿ

ಬಿಎಂಟಿಸಿಯು ಇತ್ತೀಚೆಗೆ ಆರಂಭಿಸಿರುವ ಪ್ರತ್ಯೇಕ ಬಸ್‌ ಪಥ 'ನಿಮ್ಮ ಬಸ್‌' ಯೋಜನೆಯನ್ನು ಪ್ರಚುರಪಡಿಸಲು ಕನ್ನಡದ ಪ್ರಸಿದ್ಧ ನಟ ಪುನೀತ್‌ ರಾಜ್‌ಕುಮಾರ್‌ ಅವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಿದೆ.

'ಅಪ್ಪು ಸರ್‌ ಯಾವುದೇ ಸಂಭಾವನೆ ಪಡೆಯದೇ ಬಿಎಂಟಿಸಿಗೆ ರಾಯಭಾರಿಯಾಗಲು ಒಪ್ಪಿಗೆ ನೀಡಿದ್ದಾರೆ' ಎನ್ನುವ ಪ್ರಶಂಸೆಯ ಮಾತುಗಳು ಪುನೀತ್‌ ಫ್ಯಾನ್ಸ್‌ ಕ್ಲಬ್‌ನ ಟ್ವೀಟರ್‌ ಖಾತೆಯಲ್ಲಿ ಹರಿದಾಡುತ್ತಿವೆ.

ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರು ಇತ್ತೀಚೆಗಷ್ಟೇ, ಬಿಎಂಟಿಸಿ, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಪೊಲೀಸರ ಜಂಟಿ ಸಹಯೋಗದಲ್ಲಿ ಆರಂಭಿಸಿರುವ ನಿಮ್ಮ ಬಸ್‌ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ಸಿಗೆ ನಟ ಪುನೀತ್‌ರಾಜ್‌ ಕುಮಾರ್‌ ಅವರನ್ನು ಪ್ರಚಾರ ರಾಯಭಾರಿಯಾಗುವಂತೆ ಕೇಳಿಕೊಂಡಿದ್ದೇವೆ. ಅವರು ಒಪ್ಪಿದರೆ ಈ ಯೋಜನೆ ಯಶಸ್ವಿಯಾಗುವುದು ಖಚಿತವೆಂದು ಹೇಳಿದ್ದರು.

ನಗರದ ಕೆ.ಆರ್.ಪುರಂನಿಂದ ವೈಟ್ ಫೀಲ್ಡ್‌ವರೆಗೆ ‘ನಿಮ್ಮ ಬಸ್’ ಹೆಸರಿನಲ್ಲಿ ಬಿಎಂಟಿಸಿ ಬಸ್‌ಗಳನ್ನು ಕಳೆದ ನವೆಂಬರ್‌ 15ರಿಂದ ಪ್ರತ್ಯೇಕ ಪಥದಲ್ಲಿ ಓಡಿಸಲಾಗುತ್ತಿತ್ತು.

 ಪುನೀತ್‌ ರಾಜ್‌ಕುಮಾರ್‌ ಈ ಹಿಂದೆ ಕರ್ನಾಟಕ ಹಾಲು ಮಹಾಮಂಡಳದ ಉತ್ಪನ್ನಗಳ ಪ್ರಚಾರ ರಾಯಭಾರಿ ಆಗಿದ್ದರು.

ಈ ನಡುವೆ ಪುನೀತ್‌ ಮತ್ತು ಸಂತೋಷ್‌ ಆನಂದರಾಮ್‌ ಕಾಂಬಿನೇಷನ್ನಿನಲ್ಲಿ ಮೂಡಿ ಬರುತ್ತಿರುವ ‘ಯುವರತ್ನ’ ಚಿತ್ರದ ಟಾಕಿ ಪೋರ್ಷನ್ ಚಿತ್ರೀಕರಣ ಮುಗಿದಿದ್ದು, ಹಾಡುಗಳ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ರೆಡಿಯಾಗುತ್ತಿದೆ. ಇದೇ 31ಕ್ಕೆ ಪುನೀತ್‌ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕಾದಿದೆ ಎನ್ನುವ ಕುತೂಹಲವನ್ನು ಚಿತ್ರತಂಡ ಮೂಡಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು