ಶುಕ್ರವಾರ, ಆಗಸ್ಟ್ 19, 2022
22 °C

ಅಮೆರಿಕದಲ್ಲಿ ₹ 15 ಕೋಟಿ, ವಿಶ್ವದಾದ್ಯಂತ ₹ 229 ಕೋಟಿ ಗಳಿಕೆ ಕಂಡ ’ಪುಷ್ಪ‘

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಐದು ಭಾಷೆಗಳಲ್ಲಿ ತೆರೆ ಕಂಡ ಚಿತ್ರ ‘ಪುಷ್ಪ’ ದೇಶ ಮತ್ತು ವಿದೇಶಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

ಮೊದಲ ವಾರ ಮುಗಿಸಿ ಎರಡನೇ ವಾರಕ್ಕೆ  ಕಾಲಿಟ್ತಿದ್ದು, ವಿಶ್ವದಾದ್ಯಂತ ₹ 229 ಕೋಟಿ ಗಳಿಕೆ ಕಂಡಿದೆ ಎಂದು ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

 

ಇದೀಗ, ಚಿತ್ರದ ನಿರ್ಮಾಪಕರೇ ಅಮೆರಿಕದಲ್ಲಿ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಘೋಷಿಸಿದ್ದು, 2 ಮಿಲಿಯನ್ ಡಾಲರ್ ಕ್ಲಬ್ ಸೇರಿರುವುದಾಗಿ ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದ್ದು, ‘2021ರಲ್ಲಿ ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಗಳಿಸಿದ ಮೊದಲ ದಕ್ಷಿಣ ಭಾರತದ ಸಿನಿಮಾ ಎಂಬ ಖ್ಯಾತಿಗೆ ಪುಷ್ಪ ಪಾತ್ರವಾಗಿದೆ’ ಎಂದು ಬರೆಯಲಾಗಿದೆ.

ಅಲ್ಲು ಅರ್ಜುನ್ ಅವರೇ ನಟಿಸಿರುವ ‘ಅಲಾ ವೆಂಕಟಾಪುರಮುಲೊ’ಬಳಿಕ ಅಮೆರಿಕದಲ್ಲಿ 2 ಮಿಲಿಯನ್ ಡಾಲರ್ ಗಳಿಕೆ ಕಂಡ ಚಿತ್ರ ‘ಪುಷ್ಪ’ ಆಗಿದೆ.

ಶುಕ್ರವಾರ ಬಂದ ಅಮೆರಿಕ ವರದಿ ಪ್ರಕಾರ, ಪುಷ್ಪ ಚಿತ್ರವು 20,01,022 ಡಾಲರ್ (ಸುಮಾರು ₹ 15 ಕೋಟಿ) ಗಳಿಸಿದೆ.

ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ಪುಷ್ಪ ಗೆದ್ದಿದೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು