ರಾಧಿಕಾ ಆಪ್ಟೆ | ನಟನೆಯಷ್ಟೇ ಅಲ್ಲ, ಮಾತೂ ಪ್ರಬುದ್ಧ

ಸೋಮವಾರ, ಜೂನ್ 24, 2019
24 °C

ರಾಧಿಕಾ ಆಪ್ಟೆ | ನಟನೆಯಷ್ಟೇ ಅಲ್ಲ, ಮಾತೂ ಪ್ರಬುದ್ಧ

Published:
Updated:
Prajavani

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ಇತ್ತೀಚಿನ ಚಿತ್ರ ‘ಅಂಧಾಧುನ್’ ಹಾಗೂ ವೆಬ್ ಸರಣಿಯ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರಗಳಿಂದ ಸಾಕಷ್ಟು ಹೆಸರನ್ನೂ ಗಳಿಸಿರುವ ಅವರು ಸಮಾರಂಭವೊಂದರಲ್ಲಿ ತಮ್ಮ ಖಾಸಗಿ ಹಾಗೂ ವೃತ್ತಿಪರ ಬದುಕನ್ನು ಬಿಚ್ಚಿಟ್ಟಿದ್ದಾರೆ. 

ತಮ್ಮ ಪಾತ್ರಗಳು ಏಕೆ ವೈರುಧ್ಯದಿಂದ ಕೂಡಿರುತ್ತವೆ ಎಂಬುದಕ್ಕೆ ಅವರು ಉತ್ತರವನ್ನೂ ನೀಡಿದರು. ‘ನನ್ನ ಪಾತ್ರಗಳು ರೂಢಿಗಿಂತ ಭಿನ್ನವಾಗಿ, ಸಾದಾಸೀದಾ ನಟನೆಯನ್ನು ಬಯಸುತ್ತವೆ ಎಂದು ನನ್ನ ಅಭಿಮಾನಿಗಳು ಅಂದುಕೊಂಡಿದ್ದಾರೆ. ನನ್ನ ಪಾತ್ರಗಳು ಸಾಮಾನ್ಯ ನೆಲೆಯಲ್ಲೇ ಇವೆ. ನನ್ನ ಪಾತ್ರಗಳನ್ನು ಇಷ್ಟಪಡುವವರೇ ನನ್ನ ಸುತ್ತಲೂ ಇದ್ದಾರೆ’ ಎಂದು ಆಪ್ಟೆ ಹೇಳಿಕೊಂಡಿದ್ದಾರೆ. 

‘ಮುಖ್ಯವಾಹಿನಿಯ ಸಿನಿಮಾಗಳಿಂದ ತಮ್ಮ ಪಾತ್ರಗಳು ಬೇರೆಯೇ ಆಗಿರುತ್ತವೆ. ನನ್ನ ಆಯ್ಕೆಯೇ ಅದಕ್ಕೆ ಕಾರಣ. ವೃತ್ತಿಪರತೆ ಇರುವ ಪಾತ್ರಗಳನ್ನು ಆಯ್ಕೆ ಮಾಡುಕೊಳ್ಳುತ್ತೇನೆ. ಹೀಗಾಗಿ ಬಾಲಿವುಡ್ ಸಿನಿಮಾಗಳ ಛಾಯೆಗಿಂತ ಅವು ಬೇರೆಯೇ ಆಗಿರುತ್ತವೆ’ ಎಂದಿದ್ದಾರೆ. 

ಆಪ್ಟೆ ಅವರ ಈ ಮುಕ್ತ ಮಾತುಕತೆಯನ್ನು ಕೇಳಿಸಿಕೊಂಡವರಿಗೆ ಅವರು ಇನ್ನಷ್ಟು ಪ್ರಭಾವಿ ನಟಿ ಎಂದು ಅನ್ನಿಸದೇ ಇರಲಿಲ್ಲ. 

ಚೊಚ್ಚಲ ಸಿನಿಮಾದಿಂದಲೂ ಗಮನಿಸುತ್ತಾ ಹೋದರೆ, ಅವರ ಮಾತುಗಳಿಗಿಂತ ಅವರ ಪಾತ್ರಗಳು ಹೆಚ್ಚು ಪ್ರೌಢವಾಗಿ ಮಾತನಾಡಿವೆ. ಅವರ ನಟನೆಯ ‘ಅಂಧಾಧುನ್’ ಹಾಗೂ ‘ಪ್ಯಾಡ್ ಮ್ಯಾನ್’ ಸಿನಿಮಾಗಳು ಬಾಲಿವುಡ್‌ನ ಅಗ್ರಶ್ರೇಯದ ಪಟ್ಟಿಯಲ್ಲಿವೆ. ಅವರು ತೆರೆಯಲ್ಲಿ ಕಾಣಿಸಿಕೊಂಡ ಪಾತ್ರಗಳಂತೆಯೇ ಅವರ ಮಾತೂ ಹರಿತ. 

ನವಾಜುದ್ದೀನ್ ಸಿದ್ಧಿಕಿ ಅವರ ಜೊತೆ ಮುಂದಿನ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !