ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದ ರಾಧಿಕಾ ಕುಮಾರಸ್ವಾಮಿ: ನೆಟ್ಟಿಗರು ಏನಂದ್ರು?

Last Updated 1 ಆಗಸ್ಟ್ 2022, 10:58 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದಿದ್ದಾರೆ. ಅವರೇ ಹಂಚಿಕೊಂಡಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಕಳೆದ ಎರಡು ದಶಕಗಳಿಂದ ಸಿನಿಮಾರಂಗದಲ್ಲಿ ಇರುವ ಅವರು ಅಪಾರ ಪ್ರಮಾಣದಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಅವರು ಡ್ಯಾನ್ಸ್‌ ಮಾಡುವಾಗ ಜಾರಿ ಬಿದ್ದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ಗಮನಿಸಿರುವ ಅಭಿಮಾನಿಗಳು ಬಗೆಬಗೆಯ ಕಾಮೆಂಟ್‌ ಮಾಡುತ್ತಿದ್ದಾರೆ.

ರಾಧಿಕಾ ಕುಮಾರಸ್ವಾಮಿ ನೋಡಿಕೊಂಡು, ಜಾಗ್ರತೆಯಿಂದ ಡ್ಯಾನ್ಸ್‌ ಮಾಡಬೇಕು ಎಂದು ಕೆಲವರು ಹೇಳಿದ್ದಾರೆ. ಸೋಂಟಕ್ಕೆ ಗಾಯವಾದರೆ ಸಮಸ್ಯೆಯಾಗಬಹುದು ಆದ್ದರಿಂದ ಅತಿಯಾದ ಉತ್ಸಾಹ ಬೇಡ ಎಂದು ಕೆಲವರು ಹೇಳಿದ್ದಾರೆ. ಡ್ಯಾನ್ಸ್‌ ಮಾಡುವಾಗ ಕಾಲುಗಳು ಜಾರದಂತೆ ಇರುವ ನೆಲಹಾಸು ಹಾಕಿ ಕೊಳ್ಳಬೇಕು ಎಂದು ಕೆಲ ನೆಟ್ಟಿಗರು ಸಲಹೆ ಮಾಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಕ್ರೇಜ್‌ ಹೊಂದಿರುವ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗಾಗಿ ವಿಡಿಯೊ, ಫೋಟೊಗಳನ್ನು ಹಂಚಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT