ಗುರುವಾರ, 22 ಜನವರಿ 2026
×
ADVERTISEMENT
ADVERTISEMENT

ಈ ವರ್ಷ ನಾಲ್ಕೈದು ಸಿನಿಮಾ: ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಸಂದರ್ಶನ

Published : 22 ಜನವರಿ 2026, 21:42 IST
Last Updated : 22 ಜನವರಿ 2026, 21:42 IST
ಫಾಲೋ ಮಾಡಿ
Comments
ಪ್ರ

*‘ಟರ್ಬೊ’ ಬಳಿಕ ಖಳನಟನ ಪಾತ್ರ ಮಾಡುವಂತೆ ಕೇಳಿದಾಗ ನಿಮ್ಮ ಪ್ರತಿಕ್ರಿಯೆ ಹೇಗಿತ್ತು? 

ಒಂದು ಸಿನಿಮಾ ಬಳಿಕ ಅದೇ ರೀತಿಯ ಪಾತ್ರಗಳನ್ನು ಮಾಡಬೇಕು ಎನ್ನುವಂಥ ಯೋಚನೆ ಹೊಂದಿರುವವನು ನಾನಲ್ಲ. ನಮ್ಮಲ್ಲಿರುವ ಕ್ಷಮತೆ, ಸಾಮರ್ಥ್ಯಕ್ಕೆ ಸವಾಲು ಹಾಕುವ ಪಾತ್ರಗಳ ಹುಡುಕಾಟದಲ್ಲಿ ಸದಾ ಇರುತ್ತೇನೆ. ಖಳನಟನ ಪಾತ್ರ ಹಿಟ್‌ ಆದರೆ ಖಂಡಿತವಾಗಿಯೂ ಸಾಲು ಸಾಲು ಅಂತಹ ಪಾತ್ರಕ್ಕೇ ಕೇಳುತ್ತಾರೆ. ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಈಗಾಗಲೇ ನಿರ್ಧರಿಸಿಯಾಗಿದೆ. ಆದರೆ ‘ಲ್ಯಾಂಡ್‌ಲಾರ್ಡ್‌’ನಲ್ಲಿರುವ ಪಾತ್ರ ದೂರ ಉಳಿಯುವಂಥದ್ದಾಗಿರಲಿಲ್ಲ. ಇದು ಒಂದೇ ಆಯಾಮದ ನೆಗೆಟಿವ್‌ ಪಾತ್ರವಾಗಿಲ್ಲ. ಆತನಿಗೊಂದು ಕುಟುಂಬವಿದೆ, ಅವನದ್ದೇ ಆದ ಇಷ್ಟ–ಕಷ್ಟಗಳಿವೆ. ಅವನದ್ದೇ ಆದ ಸಿದ್ಧಾಂತವಿದೆ. ಎಂತಹುದೇ ಕೆಟ್ಟವನಿಗೂ ಒಂದು ಬದುಕಿದೆ ಅಲ್ಲವೇ? ಅವನೂ ಓರ್ವ ಮನುಷ್ಯನಲ್ಲವೇ? ಹೀಗಾಗಿ ಈ ಪಾತ್ರವನ್ನು ಒಪ್ಪಿಕೊಂಡೆ. 

ಸಮಾಜದಲ್ಲಿ ಓರ್ವ ಮನುಷ್ಯ ಹಲವು ಕಟ್ಟುಪಾಡುಗಳ ನಡುವೆಯೇ ಬದುಕುತ್ತಿರುತ್ತಾನೆ. ಒಳ್ಳೆಯವನಾಗಿಯೇ ಕಾಣಿಸಿಕೊಳ್ಳಬೇಕು, ಬಟ್ಟೆ ಹರಿದು ಕಿರುಚಲು ಸಾಧ್ಯವಿಲ್ಲ, ಸಿಟ್ಟಿನಲ್ಲಿ ಬೈಯಲು ಸಾಧ್ಯವಿಲ್ಲ. ಹೀಗೆ ಸುಪ್ತಭಾವಗಳನ್ನು ಹೊರಹಾಕಲು ಅವಕಾಶವೇ ಇಲ್ಲದ ಜೀವನ ನಮ್ಮದು. ನೆಗೆಟಿವ್‌ ಪಾತ್ರಗಳನ್ನು ಮಾಡುವಾಗ ಒಂದು ದೊಡ್ಡ ಸ್ವಾತಂತ್ರ್ಯವಿರುತ್ತದೆ. ಆ ಸ್ವಾತಂತ್ರ್ಯವನ್ನು ನಿರ್ದೇಶಕರಾದ ಜಡೇಶ್‌ ಚೆನ್ನಾಗಿ ಬರೆದಿದ್ದಾರೆ. ಹೀಗಾಗಿ ನೆಗೆಟಿವ್‌ ಪಾತ್ರಗಳನ್ನು ಮಾಡಲು ತುಂಬಾ ಜನ ಇಷ್ಟಪಡುತ್ತಾರೆ.

ಪ್ರ

*ಸಿನಿಮಾದೊಳಗೆ ನಿಮ್ಮ ಪಾತ್ರ ಹೇಗಿದೆ?

ಮಾತಿನ ಜೊತೆಗೆ ಅಬ್ಬರ, ಒಂದು ಗ್ರಾಫ್‌ ಹಾಗೂ ಅದ್ದೂರಿತನ ನಾನು ನಿಭಾಯಿಸಿದ ಪಾತ್ರಕ್ಕಿದೆ. ಇದನ್ನು ತೆರೆಯ ಮೇಲೆ ನೋಡಿಯೇ ಸಂಭ್ರಮಿಸಬೇಕು. ನನಗೆ ಭಾಷೆ ಬಹಳ ಇಷ್ಟ. ನಾನು ಕರ್ನಾಟಕದಲ್ಲಿರುವ ಬೇರೆ ಬೇರೆ ಭಾಗದ ಕನ್ನಡ ಭಾಷೆ ತೆರೆ ಮೇಲೆ ಬರಬೇಕು ಎನ್ನುವ ವಿಚಾರದ ಪ್ರತಿಪಾದಕ. ‘ಲ್ಯಾಂಡ್‌ಲಾರ್ಡ್‌’ನಲ್ಲಿ ಕೋಲಾರ ಭಾಗದ ಕನ್ನಡವಿದೆ. ಇದಕ್ಕೆ ಪೂರ್ವತಯಾರಿ ಬೇಕಾಯಿತು. ಸಂಭಾಷಣೆ ಕಲಿತು ನಟಿಸಿದ್ದೆ.   

ಪ್ರ

ಬರಹಗಾರರಾಗಿ ಜಡೇಶ್‌ ಅವರನ್ನು ಕಂಡ ಬಗೆ...

ಅವರಿಗೆ ಹೊಸ ಕಥೆಗಳನ್ನು ಜನರ ಮುಂದಿಡುವ ಹಂಬಲ ಇದೆ. ಜೊತೆಗೆ ಸಲಹೆ–ಸೂಚನೆಗಳಿಗೆ ಬಹಳ ತೆರೆದುಕೊಂಡಿರುವ ಬರಹಗಾರ. ಪ್ರಶ್ನಿಸುವ ಅವಕಾಶ ನೀಡುವ ನಿರ್ದೇಶಕ. ಒಂದು ಸಿನಿಮಾ ಚೆನ್ನಾಗಿ ತೆರೆ ಮೇಲೆ ಬರಬೇಕು ಎನ್ನುವುದಷ್ಟೇ ಅವರ ತುಡಿತ. ಈ ಸಿನಿಮಾ ಕೇವಲ ಒಬ್ಬ ಹೀರೊ ಹಾಗೂ ಖಳನಟನ ಸುತ್ತ ಸುತ್ತುವುದಿಲ್ಲ. ಪ್ರತಿ ಪಾತ್ರಕ್ಕೂ ಗಟ್ಟಿಯಾದ ಕಥೆ ಬರೆದಿದ್ದಾರೆ. ಸುಮಾರು 20–22 ಒಳ್ಳೆಯ ಕಲಾವಿದರನ್ನು ಕಲೆ ಹಾಕಿ ಪಾತ್ರ ಮಾಡಿಸಿದ್ದಾರೆ. ಈ ಸಿನಿಮಾ ಗೆದ್ದರೆ ಅವರಿಗೊಂದು ಶಕ್ತಿ ಸಿಗಲಿದೆ.

ಪ್ರ

ಈ ವರ್ಷ ನಿಮ್ಮ ಹೆಚ್ಚಿನ ಸಿನಿಮಾಗಳಿವೆ...

ಹೌದು. 2026 ಒಳ್ಳೆಯ ವರ್ಷ ಎಂದುಕೊಂಡಿದ್ದೇನೆ. ಒಳ್ಳೊಳ್ಳೆಯ ಸಿನಿಮಾಗಳು ಬರಲಿದ್ದು, ಇವುಗಳನ್ನು ಗೆಲ್ಲಿಸಿದರೆ ಸಿನಿಮಾ ಕೃಷಿ ಮುಂದುವರಿಯಲಿದೆ. ಸಿನಿಮಾಗಳ ಸೋಲು ಎನ್ನುವುದು ಜನರು ಸಿನಿಮಾ ನೋಡುವ ರೀತಿ ಬದಲಾಗಿದೆ ಎನ್ನುವುದನ್ನು ಸ್ಪಷ್ಟವಾಗಿ ಹೇಳುತ್ತದೆ. ನಮಲ್ಲಿ ಭಿನ್ನ ಆಲೋಚನೆಯ ಹೊಸ ನಿರ್ದೇಶಕರ ಸಿನಿಮಾಗಳು ಬರುತ್ತಿವೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಮಲಯಾಳ ಸಿನಿಮಾಗಳಿಗಿರುವಂತೆ ಪ್ರೇಕ್ಷಕರ ಒಂದು ಅಲೆ ನಿರಂತರವಾಗಿ ನಮ್ಮ ಚಿತ್ರಮಂದಿರದತ್ತ ಹರಿಯುವಂತೆ ಇವು ಮಾಡಲಿವೆ. ಈ ವರ್ಷ ನನ್ನ ನಾಲ್ಕೈದು ಸಿನಿಮಾಗಳು ತೆರೆಗೆ ಬರಲಿವೆ. ಮೊದಲಿಗೆ ಜ.23ಕ್ಕೆ ‘ಲ್ಯಾಂಡ್‌ಲಾರ್ಡ್‌’, ಫೆಬ್ರುವರಿ 6ಕ್ಕೆ ‘ರಕ್ಕಸಪುರದೋಳ್‌’, ನಂತರದಲ್ಲಿ ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ತೆರೆಗೆ ಬರಲಿದೆ. ನಾನು ನನ್ನ ನಿರ್ದೇಶನದ ಕೆಲಸಕ್ಕೆ ಕೊಂಚ ವೇಗ ನೀಡಿದರೆ ಅದೂ ಇದೇ ವರ್ಷ ಬರಬಹುದು.

ಪ್ರ

*ನಿಮ್ಮ ಹೊಸ ಪ್ರಾಜೆಕ್ಟ್‌ಗಳು ಯಾವುವು?

ನಾನೇ ಮುಖ್ಯಭೂಮಿಕೆಯಲ್ಲಿರುವ ಒಂದು ಸಿನಿಮಾ ಪೂರ್ಣಗೊಂಡಿದ್ದು ಇದು ಇದೇ ವರ್ಷ ತೆರೆಕಾಣಲಿದೆ. ಶೀಘ್ರದಲ್ಲೇ ಇದರ ಮಾಹಿತಿ ನೀಡುತ್ತೇನೆ. ಕಳೆದ ಎರಡು ತಿಂಗಳಲ್ಲಿ ಹೆಚ್ಚಿನ ಸಮಯ ಪ್ರಚಾರದಲ್ಲೇ ತೊಡಗಿಸಿಕೊಂಡಿದ್ದೆ. ನನ್ನ ನಿರ್ದೇಶನದ ಎರಡು ಸಿನಿಮಾಗಳ ಬರವಣಿಗೆ ಮುಂದುವರಿದಿದೆ. ಫೆಬ್ರುವರಿ ಅಂತ್ಯದೊಳಗೆ ಇವುಗಳನ್ನು ಮುಗಿಸುವ ಗುರಿ ಹಾಕಿಕೊಂಡಿದ್ದೇನೆ. ಇದರಲ್ಲಿ ಒಂದು ಥ್ರಿಲ್ಲರ್‌ ಸಿನಿಮಾವಾಗಿರಲಿದೆ. ಬೇರೆ ಭಾಷೆಗಳಿಂದ ವೆಬ್‌ಸರಣಿ ಆಫರ್‌ಗಳು ಬಂದಿದ್ದವು. ಆದರೆ ಸದ್ಯಕ್ಕೆ ಸಿನಿಮಾ ಮೇಲೆ ಹೆಚ್ಚಿನ ಗಮನಹರಿಸಿದ್ದೇನೆ. 

ನಾನೇ ಮುಖ್ಯಭೂಮಿಕೆಯಲ್ಲಿರುವ ಒಂದು ಸಿನಿಮಾ ಪೂರ್ಣಗೊಂಡಿದ್ದು ಇದು ಇದೇ ವರ್ಷ ತೆರೆಕಾಣಲಿದೆ. ಶೀಘ್ರದಲ್ಲೇ ಇದರ ಮಾಹಿತಿ ನೀಡುತ್ತೇನೆ. ಕಳೆದ ಎರಡು ತಿಂಗಳಲ್ಲಿ ಹೆಚ್ಚಿನ ಸಮಯ ಪ್ರಚಾರದಲ್ಲೇ ತೊಡಗಿಸಿಕೊಂಡಿದ್ದೆ. ನನ್ನ ನಿರ್ದೇಶನದ ಎರಡು ಸಿನಿಮಾಗಳ ಬರವಣಿಗೆ ಮುಂದುವರಿದಿದೆ. ಫೆಬ್ರುವರಿ ಅಂತ್ಯದೊಳಗೆ ಇವುಗಳನ್ನು ಮುಗಿಸುವ ಗುರಿ ಹಾಕಿಕೊಂಡಿದ್ದೇನೆ. ಇದರಲ್ಲಿ ಒಂದು ಥ್ರಿಲ್ಲರ್‌ ಸಿನಿಮಾವಾಗಿರಲಿದೆ. ಬೇರೆ ಭಾಷೆಗಳಿಂದ ವೆಬ್‌ಸರಣಿ ಆಫರ್‌ಗಳು ಬಂದಿದ್ದವು. ಆದರೆ ಸದ್ಯಕ್ಕೆ ಸಿನಿಮಾ ಮೇಲೆ ಹೆಚ್ಚಿನ ಗಮನಹರಿಸಿದ್ದೇನೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT