ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಮೌಳಿ ಅದ್ದೂರಿತನಕ್ಕೆ ಮತ್ತೊಂದು ಉದಾಹರಣೆ; ಮೂರು ದೃಶ್ಯಕ್ಕೆ ₹85 ಕೋಟಿ!

Last Updated 11 ಜುಲೈ 2019, 10:34 IST
ಅಕ್ಷರ ಗಾತ್ರ

ಬಾಹುಬಲಿ ಸಿನಿಮಾ ನಂತರ ಎಸ್‌.ಎಸ್‌ ರಾಜಮೌಳಿ ಕೈಗೆತ್ತಿಕೊಂಡಿರುವ ಮತ್ತೊಂದು ಅತಿ ದೊಡ್ಡ ಬಜೆಟ್‌ ಚಿತ್ರ ‘ಆರ್‌ಆರ್‌ಆರ್‌’. ಈ ಸಿನಿಮಾದಲ್ಲಿ ಜೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ ಚರಣ್‌ ನಟಿಸುತ್ತಿದ್ದಾರೆ. ಈ ಸಿನಿಮಾದ ಮೂರೇ ಮೂರು ದೃಶ್ಯಗಳ ಚಿತ್ರೀಕರಣಕ್ಕೆ ಖರ್ಚಾಗಿರುವ ಮೊತ್ತ ₹85 ಕೋಟಿ!

ಇಂಥ ಕುತೂಹಲಕಾರಿ ವರದಿಗಳಿಂದ ಚಿತ್ರ ಅಪಾರ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಭಾರಿ ವೆಚ್ಚ ಮಾಡಿ ಹೈದರಾಬಾದ್‌ನಲ್ಲಿ ಹಾಕಿರುವ
ಸೆಟ್‌ನಲ್ಲಿ ಸಿನಿಮಾದ ಪ್ರಮುಖ ದೃಶ್ಯಗಳ ಚಿತ್ರೀಕರಣ ಮುಗಿದಿದೆ. ಮುಂದಿನ ಚಿತ್ರೀಕರಣವು ಅಹಮದಾಬಾದ್‌ನಲ್ಲಿ ನಡೆಯಲಿದೆ.

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮರಾಜು ಹಾಗೂ ಕೋಮರಂ ಭೀಮ್‌ ಅವರ ಕತೆಯನ್ನಾಧರಿಸಿದ ಚಿತ್ರವಿದು. ಅಲ್ಲುರಿ ಸೀತಾರಾಮರಾಜು ಪಾತ್ರವನ್ನುರಾಮ್‌ ಚರಣ್‌ ನಿರ್ವಹಿಸುತ್ತಿದ್ದಾರೆ. ಆರಂಭಿಕ ದೃಶ್ಯಗಳ ಶೂಟಿಂಗ್‌ ಮುಗಿದಿದೆ. ಇದಕ್ಕೆಂದೇ ₹25 ಕೋಟಿ ಖರ್ಚು ಮಾಡಲಾಗಿದೆ.

ಜೂನಿಯರ್‌ ಎನ್‌ಟಿಆರ್‌, ಕೋಮರಂ ಭೀಮ್‌ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಆರಂಭಿಕ ದೃಶ್ಯಗಳ ಚಿತ್ರೀಕರಣಕ್ಕೆ ತಯಾರಿ ನಡೆಯುತ್ತಿದೆ. ಇದಕ್ಕೆಂದು ₹15 ಕೋಟಿ ಖರ್ಚಾಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಶೂಟಿಂಗ್‌ ಆರಂಭಕ್ಕೂ ಮೊದಲು ₹350ರಿಂದ ₹ 400 ಕೋಟಿ ಅಂದಾಜು ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ ಎಂದು ಚಿತ್ರತಂಡ ತಿಳಿಸಿತ್ತು. ಇದೀಗ ಬರಿಯ ಮೂರು ದೃಶ್ಯಕ್ಕೆ ₹85 ಕೋಟಿ ಖರ್ಚು ಮಾಡಿದ್ದನ್ನು ಗಮನಿಸಿದರೆ ಚಿತ್ರದ ಒಟ್ಟು ಬಜೆಟ್‌ ₹500 ಕೋಟಿಯನ್ನು ಮೀರಲಿದೆ ಎಂದು ಅಂದಾಜಿಸಲಾಗುತ್ತಿದೆ. ಚಿತ್ರ 2020ರ ಜುಲೈ 30ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT