ಬಾಲಿವುಡ್ ನಟ ರಜತ್ ಬೇಡಿ ತಮ್ಮ ವಿರುದ್ಧದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಸಲ ಮಾಧ್ಯಮಗಳ ಎದುರು ಮಾತನಾಡಿದ್ದಾರೆ.

ಸೆ. 6ರ ರಾತ್ರಿ ರಜತ್ ಬೇಡಿ ಚಲಾಯಿಸುತ್ತಿದ್ದ ಕಾರು ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದಿತ್ತು. ಕೂಡಲೇ ಆ ವ್ಯಕ್ತಿಯನ್ನು ರಜತ್ ಆಸ್ಪತ್ರೆಗೆ ದಾಖಲಿಸಿದರಾದರೂ ಆ ವ್ಯಕ್ತಿ ಬದುಕುಳಿಯಲಿಲ್ಲ.

ಇಲ್ಲಿನ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ರಜತ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು ತನಿಖೆ ಪ್ರಗತಿಯ ಹಂತದಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

’ಈ ಅಪಘಾತದಲ್ಲಿ ನನ್ನ ತಪ್ಪಿಲ್ಲ, ಆದರೂ ಮೃತ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ’ ರಜತ್ ಹೇಳಿದ್ದಾರೆ. ಮೃತರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಪತ್ನಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿರುವ ರಜತ್, ಆಕೆಯ ಮಗಳ ಹೆಸರಲ್ಲಿ ಎಫ್‌ಡಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಈ ಪ್ರಕರಣದತನಿಖೆ ನಡೆಯುತ್ತಿದ್ದು, ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಲಾಗುವುದು ಎಂದು ರಜತ್ ಹೇಳಿದ್ದಾರೆ.

ರಜತ್ ಬೇಡಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದಾರೆ. ನಟ ದರ್ಶನ್ ಅಭಿನಯದ ’ಜಗ್ಗು ದಾದ’ ಸಿನಿಮಾದಲ್ಲಿ ರಜತ್ ಬೇಡಿ ನಟಿಸಿದ್ದರು. ಇವರಿಗೆ ಹಿಂದಿಯ ’ಕೊಯಿ ಮಿಲ್ ಗಯಾ’ ಸಿನಿಮಾ ಹೆಚ್ಚು ಖ್ಯಾತಿ ತಂದುಕೊಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.