ಮಂಗಳವಾರ, ಅಕ್ಟೋಬರ್ 15, 2019
29 °C

ರಜನಿಕಾಂತ್‌ ಹೊಸ ಸಿನಿಮಾ ಸಿರುತೈಶಿವ

Published:
Updated:
Prajavani

ಸೂಪರ್‌ಸ್ಟಾರ್‌ ರಜನಿಕಾಂತ್‌ ಸದ್ಯ ‘ದರ್ಬಾರ್‌’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು, ಈಗ ಮತ್ತೊಂದು ಸಿನಿಮಾಕ್ಕೆ ಸಹಿ ಮಾಡಿದ್ದಾರೆ.

ಸಿರುತೈ ಶಿವ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ರಜನಿಕಾಂತ್‌ ಅವರು ನಾಯಕನಾಗಿ ನಟಿಸಲಿದ್ದು, ಚಿತ್ರಕ್ಕೆ ಈಗಾಗಲೇ ಅವರು ಸಹಿ ಮಾಡಿದ್ದಾರೆ.

ತಿಂಗಳ ಹಿಂದೆ ಸಿರುತೈ ಶಿವ ಅವರು ರಜನಿಕಾಂತ್‌ ಅವರ ಜೊತೆ ಚಿತ್ರಕತೆ ಬಗ್ಗೆ ಮಾತುಕತೆ ನಡೆಸಿದ್ದರು. ಚಿತ್ರದಲ್ಲಿ ನಟಿಸಲು ಉತ್ಸಾಹ ತೋರಿಸಿದ ರಜನಿಕಾಂತ್‌,‌ ಚಿತ್ರಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವಂತೆ ಆಗ ತಿಳಿಸಿದ್ದಾರೆನ್ನಲಾಗಿದೆ. ಅವರು ತಿಳಿಸಿದಂತೆ ಬದಲಾವಣೆ ಮಾಡಿಕೊಂಡ ಶಿವ ಅವರು ಇತ್ತೀಚೆಗೆ ರಜನಿಕಾಂತ್‌ ಅವರನ್ನು ಚೆನ್ನೈನ ಗಾರ್ಡನ್‌ ರೆಸಿಡೆನ್ಸಿಯಲ್ಲಿನ ಅವರ ಮನೆಯಲ್ಲಿ ಭೇಟಿ ಮಾಡಿ ನಾಲ್ಕು ಗಂಟೆಗಳ ಕಾಲ ಚಿತ್ರಕತೆ ವಿವರಿಸಿದ್ದರು.

ಈ ಸಿನಿಮಾ ‘ದರ್ಬಾರ್‌’ ಚಿತ್ರದ ಕೆಲಸಗಳು ಮುಗಿದ ಕೂಡಲೇ ಸೆಟ್ಟೇರಲಿದೆ ಎಂಬ ಗಾಳಿ ಸುದ್ದಿ ಹಬ್ಬಿದೆ. ‘ದರ್ಬಾರ್‌’ ಸಿನಿಮಾದ ಚಿತ್ರೀಕರಣ ಮುಂಬೈನಲ್ಲಿ ನಡೆಯುತ್ತಿದ್ದು, ರಜನಿಕಾಂತ್‌ ತಮ್ಮ ಭಾಗದ ಚಿತ್ರೀಕರಣ ಮುಗಿಸಿ ಇತ್ತೀಚೆಗೆ ಚೆನ್ನೈಗೆ ವಾಪಸ್ಸಾಗಿದ್ದಾರೆ.

 ದರ್ಬಾರ್‌ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡುತ್ತಿದ್ದು, ಎ.ಆರ್‌ ಮುರುಗದಾಸ್‌ ನಿರ್ದೇಶಿಸುತ್ತಿದ್ದಾರೆ.  ಇದು ರಾಜಕೀಯ ವಿಚಾರಕ್ಕೆ ಸಂಬಂಧಿಸಿದ ಚಿತ್ರವಲ್ಲ. ಪಕ್ಕಾ ಕಮರ್ಷಿಯಲ್‌ ಸಿನಿಮಾ. ಎಲ್ಲಾ ವಯೋಮಾನದ ಜನರಿಗೂ ಈ ಚಿತ್ರ ಇಷ್ಟವಾಗಲಿದೆ ಎಂದು ಮುರುಗದಾಸ್‌ ಚಿತ್ರದ ಬಗ್ಗೆ ಹೇಳಿದ್ದಾರೆ.

ಇದನ್ನೂ ಓದಿ: ಶೀಘ್ರ ರಜನಿಕಾಂತ್‌– ಮುರುಗದಾಸ್‌ ಜೋಡಿಯ ಎರಡನೇ ಚಿತ್ರ

Post Comments (+)