ಭಾನುವಾರ, ಸೆಪ್ಟೆಂಬರ್ 20, 2020
23 °C

ಶೀಘ್ರ ರಜನಿಕಾಂತ್‌– ಮುರುಗದಾಸ್‌ ಜೋಡಿಯ ಎರಡನೇ ಚಿತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟ ರಜನಿಕಾಂತ್‌ ಸದ್ಯ ಎ.ಆರ್‌. ಮುರುಗದಾಸ್‌ ನಿರ್ದೇಶನದ ‘ದರ್ಬಾರ್‌’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ಇನ್ನೊಂದು ಹೊಸ ಚಿತ್ರದಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಲಿದ್ದಾರೆ ಎಂಬ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದೆ.  

ಮುರುಗದಾಸ್‌ ಅವರು ಮತ್ತೊಂದು ಹೊಸ ಚಿತ್ರಕತೆಯನ್ನು ಸಿದ್ಧಪಡಿಸಿ, ರಜನಿಕಾಂತ್‌ ಅವರ ಬಳಿ ಚರ್ಚೆ ನಡೆಸಿದ್ದಾರೆ. ಅದಕ್ಕೆ ರಜನಿಕಾಂತ್‌ ಮೆಚ್ಚುಗೆ ವ್ಯಕ್ತಪಡಿಸಿ, ನಟಿಸಲು ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಅದು ರಾಜಕೀಯ ಕುರಿತಾದ ಸಿನಿಮಾ. 

ಈ ಹೊಸ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್‌ ಬಂಡವಾಳ ಹೂಡಲಿದೆ. ಆದರೆ ಚಿತ್ರದ ಆರಂಭದ ಬಗ್ಗೆ ಇನ್ನೂ ಯಾವುದೇ ರೀತಿಯ ಸ್ಪಷ್ಟನೆಯನ್ನು ಚಿತ್ರತಂಡ ನೀಡಿಲ್ಲ. ಇನ್ನೊಂದೆಡೆ ನಿರ್ದೇಶಕ ಶಿವ ಅವರ ಚಿತ್ರದಲ್ಲೂ ರಜನಿಕಾಂತ್‌ ನಟಿಸಲಿದ್ದಾರೆ. 

‘ದರ್ಬಾರ್‌’ ಚಿತ್ರದ ಬಹುತೇಕ ಶೂಟಿಂಗ್‌ ಮುಗಿದಿದ್ದು, ಈಗ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದರಲ್ಲಿ ನಯನತಾರಾ, ಸುನಿಲ್‌ ಶೆಟ್ಟಿ, ನಿವೇತಾ ಥಾಮಸ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು