ಮಂಗಳವಾರ, ಜನವರಿ 28, 2020
29 °C

27 ವರ್ಷಗಳ ಬಳಿಕ ರಜನಿ ಪೊಲೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜನಿಕಾಂತ್‌ ಮತ್ತೆ ತೆರೆಗೆ ಅಪ್ಪಳಿಸಿದ್ದಾರೆ. ಈ ಸಲ ಪೊಲೀಸ್‌ ಅಧಿಕಾರಿ ರೂಪದಲ್ಲಿ. ರಜನಿ ಪೊಲೀಸ್‌ ಪಾತ್ರ ವಹಿಸದೇ 27 ವರ್ಷಗಳಾಗಿವೆ.

ಈ ಹಿಂದೆ 1992ರಲ್ಲಿ ಪಾಂಡ್ಯನ್‌ ಎನ್ನುವ ಚಿತ್ರದಲ್ಲಿ ಅವರು ಪೊಲೀಸ್‌ ಅಧಿಕಾರಿಯ ಪಾತ್ರ ವಹಿಸಿದ್ದರು. ಇನ್ನೆರಡು ದಿನದಲ್ಲಿ ‘ದರ್ಬಾರ್‌’ ಚಿತ್ರ ಬಿಡುಗಡೆಯಾಗಲಿದ್ದು, ಅದರಲ್ಲಿ ಕ್ರಿಮಿನಲ್‌ಗಳನ್ನು ನಡುಗಿಸುವ ಪಿಸ್ತೂಲ್‌ಧಾರಿ ಅಧಿಕಾರಿಯ ಪಾತ್ರ ರಜನಿಯದು.

‘ದರ್ಬಾರ್‌’ ಟೈಟಲ್‌ನ ಅಡಿಬರಹ ಕೂಡ ಆಕರ್ಷಕವಾಗಿದೆ. ‘ನಾನು ಒಳ್ಳೆಯವನಾಗಬೇಕೋ, ಕೆಟ್ಟವನಾಗಬೇಕೋ ಅಥವಾ ಅತಿ ಕೆಟ್ಟವನಾಗಬೇಕೋ ನೀವೇ ನಿರ್ಧರಿಸಿ’ ಎನ್ನುವುದು ಅಡಿಬರಹ. ಕ್ರಿಮಿನಲ್‌ಗಳನ್ನು ಸಾಲಾಗಿ ಗುಂಡಿಕ್ಕಿ ಕೊಲ್ಲುವ ತುಪಾಕಿ ರಾಜನಾಗಿ ರಜನಿ ಈ ಚಿತ್ರದಲ್ಲಿ ಮಿಂಚಿದ್ದಾರೆ.

ಪ್ರೇಕ್ಷಕರ ಮುಂದೆ ಸದಾ ನಯನಮನೋಹರಿಯಾಗಿರುವ ನಯನತಾರಾ ಈ ಚಿತ್ರದಲ್ಲಿ ಸಖತ್ತಾಗಿ ಮಿಂಚಿದ್ದಾರೆ ಎಂಬ ಸುದ್ದಿ ಇದೆ.

ಚಿತ್ರಕ್ಕೆ ಕೋರ್ಟ್‌ನಿಂದ ತಡೆಯಾಜ್ಞೆ ತರಲು ವಿತರಣಾ ಕಂಪನಿಯೊಂದು ನಡೆಸಿದ ಯತ್ನಕ್ಕೆ ಯಶ ಸಿಕ್ಕಿಲ್ಲ. ಸುನಿಲ್‌ ಶೆಟ್ಟಿ ರಜನಿಗೆ ಎದುರಾಗಿ ದುಷ್ಟನ ಪಾತ್ರದಲ್ಲಿ ಮಿಂಚಿರುವುದು ವಿಶೇಷ. ಸ್ಮಿತಾ ಪಾಟೀಲ್‌ ಮಗ ಪ್ರತೀಕ್‌ ಬಬ್ಬರ್‌ಗೂ ಒಂದು ಮುಖ್ಯಪಾತ್ರವಿದೆ.

 ಈ ಚಿತ್ರ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಸಿನಿಮಾದಲ್ಲಿ ರಜನಿಯ ಮೇಕಪ್‌ 10 ವರ್ಷ ಹಿಂದಕ್ಕೆ ಹೋಗಿರುವುದು ಕುತೂಹಲ ಕೆರಳಿಸುವಂತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು