ನವದೆಹಲಿ: ಬಾಲಿವುಡ್ ನಟ ರಾಜ್ಕುಮಾರ್ ರಾವ್ ಹಾಗೂ ನಟಿ ಪತ್ರಲೇಖಾ ದಂಪತಿ, ತಮ್ಮ ಪುತ್ರಿಗೆ ಪಾರ್ವತಿ ಪಾಲ್ ರಾವ್ ಎಂದು ಭಾನುವಾರ ನಾಮಕರಣ ಮಾಡಿದ್ದಾರೆ.

ಈ ಕುರಿತು ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅದರ ಅಡಿಬರಹದಲ್ಲಿ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.

11 ವರ್ಷಗಳಿಂದ ಪ್ರೀತಿಸುತ್ತಿದ್ದ ರಾಜ್ಕುಮಾರ್ ರಾವ್ ಹಾಗೂ ಪತ್ರಲೇಖಾ ಅವರು 2021ರ ನವೆಂಬರ್ನಲ್ಲಿ ಮದುವೆಯಾಗಿದ್ದರು. ಇವರ ನಾಲ್ಕನೇ ವಿವಾಹ ವಾರ್ಷಿಕೋತ್ಸವದಂದು (2025ರ ನ.15) ಹೆಣ್ಣು ಮಗು ಜನಿಸಿತ್ತು.

2025ರ ಏಪ್ರಿಲ್ನಲ್ಲಿ ಬಿಡುಗಡೆಯಾಗಿದ್ದ ಪ್ರತೀಕ್ ಗಾಂಧಿ ನಟನೆಯ ‘ಫುಲೆ’ಚಿತ್ರದಲ್ಲಿ ನಟಿ ಪತ್ರಲೇಖಾ ಅವರು ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಆ ಸಿನಿಮಾದಲ್ಲಿ ಸಾವಿತ್ರಿಬಾಯಿ ಫುಲೆ ಪಾತ್ರದಲ್ಲಿ ನಟಿಸಿದ್ದರು.

ರಾಜ್ಕುಮಾರ್ ರಾವ್ ನಟನೆಯ ಭೂಲ್ ಚುಕ್ ಮಾಫ್ ಮತ್ತು ಮಾಲಿಕ್ ಸಿನಿಮಾಗಳು ಇತ್ತೀಚೆಗೆ ಬಿಡುಗಡೆಯಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.