ಮಂಗಳವಾರ, ಆಗಸ್ಟ್ 4, 2020
26 °C

ರಾಕೇಶ್‌ ಶರ್ಮಾ ಬಯೋಪಿಕ್‌ನಲ್ಲಿ ಫರ್ಹಾನ್‌ ಅಖ್ತರ್‌ ನಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಮೊದಲ ಭಾರತೀಯ. ರಷ್ಯಾದ ಅಂತರಿಕ್ಷ ನೌಕೆ ಸೋಯಜ್ ಟಿ– 11ರಲ್ಲಿ ಪ್ರಯಾಣಿಸಿದ ಅವರು ಸುಮಾರು ಎಂಟು ದಿನಗಳ ಕಾಲ ಅಂತರಿಕ್ಷದಲ್ಲಿದ್ದರು. ಬೆಳ್ಳಿಪರದೆ ಮೇಲೆ ಅವರ ಜೀವನಗಾಥೆ ಮೂಡಿಬರಲಿದೆ ಎಂದು ಹಲವು ವರ್ಷಗಳ ಹಿಂದೆಯೇ ಬಾಲಿವುಡ್‌ನಲ್ಲಿ ಸುದ್ದಿಯಾಗಿತ್ತು. ನಿರ್ಮಾಪಕರು ರಾಕೇಶ್‌ ಶರ್ಮಾ ಅವರ ಬಯೋಪಿಕ್‌ನಲ್ಲಿ ನಟಿಸುವಂತೆ ಅಮೀರ್‌ ಖಾನ್‌ ಮತ್ತು ಶಾರುಕ್‌ ಖಾನ್‌ ಅವರೊಟ್ಟಿಗೆ ಚರ್ಚೆ ಕೂಡ ನಡೆಸಿದ್ದರು.

2018ರಲ್ಲಿ ಬಿಟೌನ್‌ನ ‘ಮಿಸ್ಟರ್ ಫರ್ಪೆಕ್ಟ್‌’ ಅಮೀರ್‌ ಖಾನ್‌, ರಾಕೇಶ್ ಶರ್ಮಾ ಅವರ ಬಯೋಪಿಕ್‌ ಘೋಷಿಸುವ ಜೊತೆಗೆ ಅದರಲ್ಲಿ ತಾವು ನಟಿಸುವುದಾಗಿಯೂ ಹೇಳಿದ್ದರು. ಆದರೆ, ಶಾರುಕ್‌ ಕೂಡ ಇದೇ ಬಯೋಪಿಕ್‌ ಮಾಡುವ ಯೋಚನೆಯಲ್ಲಿದ್ದಾರೆ ಎಂದು ತಿಳಿದ ಅಮೀರ್‌, ಆ ಯೋಜನೆಯಿಂದ ಹಿಂದೆ ಸರಿದಿದ್ದರು. ಗಲ್ಲಾಪೆಟ್ಟಿಗೆಯಲ್ಲಿ ‘ಜೀರೊ’ ಸಿನಿಮಾ ನೆಲಕಚ್ಚಿದ ಪರಿಣಾಮ ಈ ಬಯೋಪಿಕ್‌ನಲ್ಲಿ ನಟಿಸುವುದನ್ನು ಶಾರುಕ್‌ ಕೈಬಿಟ್ಟಿದ್ದಾರಂತೆ.

ಈಗ ರಾಕೇಶ್‌ ಶರ್ಮಾ ಬಯೋಪಿಕ್‌ನಲ್ಲಿ ನಟ ಫರ್ಹಾನ್ ಅಖ್ತರ್ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ. ಈ ಬಯೋಪಿಕ್‌ಗೆ ‘ಸಾರೇ ಜಹಾಂಸೆ ಅಚ್ಛಾ’ ಎಂಬ ಟೈಟಲ್‌ ಇಡಲು ನಿರ್ಧರಿಸಲಾಗಿದೆಯಂತೆ. ರಷ್ಯಾದಲ್ಲಿಯೇ ಈ ಚಿತ್ರದ ಶೂಟಿಂಗ್‌ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಅಂದಹಾಗೆ ಮಹೇಶ್ ಮಥಾಯ್ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಫರ್ಹಾನ್‌ ಅಖ್ತರ್‌ ಕಳೆದ ವರ್ಷ ‘ಸ್ಕೈ ಇನ್‌ ಪಿಂಕ್‌’ ಚಿತ್ರದಲ್ಲಿ ನಟಿಸಿದ್ದರು. ಅವರು ನಟಿಸಿರುವ ಬಾಕ್ಸಿಂಗ್‌ ಸುತ್ತ ಕಥೆ ಹೆಣೆದಿರುವ ‘ತೂಫಾನ್‌’ ಚಿತ್ರ ಬಿಡುಗಡೆಯ ಹಂತದಲ್ಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು