ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

7
ಲವ್‌ ಬ್ರೇಕಪ್‌ ಬಗೆಗಿನ ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟ

ರಶ್ಮಿಕಾ ಮಂದಣ್ಣ ಬಗ್ಗೆ ನಿಮಗಿಂತ ಚೆನ್ನಾಗಿ ನನಗೆ ಗೊತ್ತು –ರಕ್ಷಿತ್‌ ಶೆಟ್ಟಿ

Published:
Updated:

ಬೆಂಗಳೂರು: ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಲವ್‌ ಬ್ರೇಕಪ್‌ಗೆ ಸಂಬಂಧಿಸಿದ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ದಿನದಿನಕ್ಕೂ ಹೆಚ್ಚಾಗುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ನಟ ರಕ್ಷಿತ್‌ ಫೇಸ್‌ಬುಕ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

ವಿಚಾರಕ್ಕೆ ಸಂಬಂಧಿಸಿದ ಎಲ್ಲ ಗೊಂದಲಗಳು ಶೀಘ್ರದಲ್ಲೇ ಬಗೆಹರಿಯಲಿದ್ದು, ವದಂತಿಗಳತ್ತ ಗಮನಕೊಡಬಾರದು ಎಂದು ಮನವಿ ಮಾಡಿದ್ದಾರೆ. ಅವರು ಬರೆದ ಫೇಸ್‌ಬುಕ್‌ ಈ ರೀತಿ ಇದೆ.

‘ಬೇರೆ ವಿಚಾರಗಳತ್ತ ಗಮನ ಹರಿಸುವ ಸಲುವಾಗಿ ನಾನು ಈಗಾಗಲೇ ಸಾಮಾಜಿಕ ಜಾಲತಾಣಗಳಿಂದ ಹೊರಗುಳಿದಿದ್ದೇನೆ. ಆದರೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಕೆಲ ವಿಚಾರಗಳನ್ನು ಸ್ಪಷ್ಟಪಡಿಸುವ ಸಲುವಾಗಿ ಮತ್ತೆ ಬಂದಿದ್ದೇನೆ.

‘ನೀವು ಈಗಾಗಲೇ ರಶ್ಮಿಕಾ ಅವರ ಬಗೆಗೆ ಒಂದು ನಿಲುವು ತಾಳಿದ್ದೀರಿ. ಆ ಕುರಿತು ನಿಮ್ಮಲ್ಲಿ ಯಾರನ್ನೂ ನಾನು ದೂರುವುದಿಲ್ಲ. ನೋಡಿದ್ದನ್ನು ಹಾಗೂ ಕೇಳಿದ್ದನ್ನು ಪ್ರತಿಯೊಬ್ಬರೂ ನಂಬುತ್ತೇವೆ. ಅದು ಸತ್ಯವೇ ಆಗಿರಬೇಕು ಎಂದೇನು ಇಲ್ಲ. ಹಲವು ಸಂದರ್ಭಗಳಲ್ಲಿ ನಾವು ಬೇರೊಂದು ಆಯಾಮದಲ್ಲಾದರೂ ಚಿಂತಿಸದೆ ನಮ್ಮದೇ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ.

‘ನಾನು ರಶ್ಮಿಕಾರನ್ನು ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ನೋಡಿದ್ದೇನೆ. ಜೊತೆಗೆ ನಿಮ್ಮೆಲ್ಲರಿಗಿಂತ ಚೆನ್ನಾಗಿ ಅವರ ಬಗ್ಗೆ ಗೊತ್ತಿದೆ. ಹಲವು ವಿಚಾರಗಳು ಮಹತ್ವ ಪಡೆದುಕೊಳ್ಳುತ್ತಿವೆ. ಅವರ ಬಗ್ಗೆ ನಿರ್ಣಯ ತೆಗೆದುಕೊಳ್ಳುವುದನ್ನು ದಯವಿಟ್ಟು ನಿಲ್ಲಿಸಿ. ದಯವಿಟ್ಟು ಅವರನ್ನು ಶಾಂತವಾಗಿರಲು ಬಿಡಿ. ಎಲ್ಲ ಗೊಂದಲಗಳೂ ಶೀಘ್ರದಲ್ಲೇ ಅಂತ್ಯಕಾಣಲಿವೆ ಎಂಬ ಭರವಸೆ ಇದೆ. ನೀವೂ ವಾಸ್ತವವನ್ನು ಅರಿಯಲಿದ್ದೀರಿ.

ಇದನ್ನೂ ಓದಿ: ರಕ್ಷಿತ್– ರಶ್ಮಿಕಾ ಸಂಬಂಧ ಮುರಿದುಹೋಯ್ತಾ?

‘ಯಾವುದೇ ಮಾಧ್ಯಮದಲ್ಲಿ ಪ್ರಸಾರವಾಗುವ ವಿಚಾರದ ಹಿಂದೆ ಹೋಗದಿರಿ. ನನ್ನಿಂದ ಆಗಲೀ.. ರಶ್ಮಿಕಾ ಅವರಿಂದ ಆಗಲಿ ಪಡೆದ ಮೂಲ ಮಾಹಿತಿ ಯಾರೊಬ್ಬರ ಬಳಿಯೂ ಇಲ್ಲ. ಹಲವರು ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮದೇ ರೀತಿಯಲ್ಲಿ ಸುದ್ದಿಗಳನ್ನು ಸೃಷ್ಟಿಸುತ್ತಿದ್ದಾರೆ. ಕಲ್ಪನೆಗಳು ವಾಸ್ತವಗಳಾಗುವುದಿಲ್ಲ.

‘ಈ ಸಂದೇಶವನ್ನು ಎಲ್ಲರಿಗೆ ಮುಟ್ಟಿಸುವ ಸಲುವಾಗಿ ಈ ಪುಟವನ್ನು ಇನ್ನೂ ಕೆಲವು ದಿನಗಳವರೆಗೆ ನಿರ್ವಹಿಸಲಿದ್ದೇನೆ. ಖಂಡಿತ ಅವಶ್ಯಕತೆ ಇದೆ ಎನಿಸಿದಾಗ ಮತ್ತೆ ಬರಲಿದ್ದೇನೆ. ನನ್ನ ಕೆಲಸಗಳ ಮೇಲೆ ಗಮನಹರಿಸುವ ಸಲುವಾಗಿ ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿದಿದ್ದೇನೆ ಅಷ್ಟೇ’

ಎಂದು ಬರೆದುಕೊಳ್ಳುವ ಮೂಲಕ ರಕ್ಷಿತ್‌ ಶೆಟ್ಟಿ ಅವರು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳತ್ತ ಗಮನಹರಿಸದಂತೆ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 26

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !