ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್ ಜೊತೆ ರಕುಲ್‌

Last Updated 25 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಭೂಷಣ್‌ಕುಮಾರ್‌ ನಿರ್ಮಾಣದ ಮುಂದಿನ ಚಿತ್ರದಲ್ಲಿ ಅರ್ಜುನ್‌ ಕಪೂರ್‌ ಹಾಗೂ ರಕುಲ್‌ ಪ್ರೀತ್‌ ಸಿಂಗ್‌ ಜೋಡಿಯಾಗಿ ನಟಿಸಲಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರದ ಶೂಟಿಂಗ್‌ ಆರಂಭವಾಗಿದ್ದು, ತಮ್ಮ ಶೂಟಿಂಗ್‌ ಮೋಡ್‌ ಫೋಟೊಗಳನ್ನು ರಕುಲ್‌ ಹಾಗೂ ಅರ್ಜುನ್‌ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಅರ್ಜುನ್‌ ಹಾಗೂ ರಕುಲ್‌ ಒಟ್ಟಿಗೆ ನಟಿಸುತ್ತಿದ್ದಾರೆ. ನ.6ರಂದು ಈ ಸಿನಿಮಾ ಬಗ್ಗೆ ಘೋಷಣೆ ಮಾಡಿದ್ದರು.

ಈ ಚಿತ್ರವನ್ನು ಕಾಶ್ವಿ ನಾಯರ್‌ ನಿರ್ದೇಶನ ಮಾಡಲಿದ್ದಾರೆ. ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಭೂಷಣ್‌ಕುಮಾರ್‌ ಸಹ ಚಿತ್ರದ ಸೆಟ್‌ನಿಂದ ಕೆಲ ಪೋಟೊಗಳನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರವು ಕೌಟುಂಬಿಕ ಪ್ರಧಾನ ಕತೆ ಹೊಂದಿದ್ದು, ಡ್ರಾಮೆಡಿ (ಡ್ರಾಮಾ+ಕಾಮೆಡಿ) ಎಂದು ಚಿತ್ರತಂಡ ಹೇಳಿಕೊಂಡಿದೆ.

ಅರ್ಜುನ್‌ ಕಪೂರ್‌ ಆಶುತೋಷ್‌ ಗೋವರಿಕರ್‌ ಅವರ ಐತಿಹಾಸಿಕ ಚಿತ್ರ ‘ಪಾಣಿಪತ್‌’ನಲ್ಲಿ ಸಹ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿ ಕೃತಿ ಸನೊನ್‌, ಸಂಜಯ್‌ ದತ್‌, ಪದ್ಮಿನಿ ಕೊಲ್ಹಾಪುರೆ ಹಾಗೂ ಜೀನತ್‌ ನಟಿಸುತ್ತಿದ್ದಾರೆ. ರಕುಲ್‌ ನಟಿಸಿರುವ ‘ಮರ್‌ಜಾವಾ’ ಚಿತ್ರವು ಈಚೆಗೆ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT