ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಕೇಸ್: ರವಿ ತೇಜಾ, ರಾಣಾ, ರಾಕುಲ್ ಪ್ರೀತ್ ಸೇರಿ 12 ಮಂದಿಗೆ ಇ.ಡಿ ಸಮನ್ಸ್

Last Updated 26 ಆಗಸ್ಟ್ 2021, 2:23 IST
ಅಕ್ಷರ ಗಾತ್ರ

ಹೈದರಾಬಾದ್: 4 ವರ್ಷಗಳ ಹಿಂದಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ 12 ಮಂದಿ ನಟ, ನಟಿಯರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಮಾಡಿರುವುದಾಗಿ ವರದಿಯಾಗಿದೆ.

ಡ್ರಗ್ಸ್ ಸೇವನೆ, ಸರಬರಾಜು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಸಮನ್ಸ್ ನೀಡಲಾಗಿದೆ.

ನಟರಾದ ರಾಣಾ ದಗ್ಗುಬಾಟಿ, ರವಿತೇಜಾ, ನವದೀಪ್, ನಂದು, ತರುಣ್, ನಟಿಯರಾದ ರಾಕುಲ್ ಪ್ರೀತ್, ಚಾರ್ಮಿ ಕೌರ್, ಮುಮೈತ್ ಖಾನ್, ನಿರ್ದೇಶಕ ಪುರಿ ಜಗನ್ನಾಥ್ ಸೇರಿ 12 ಮಂದಿಗೆ ಸೆಪ್ಟೆಂಬರ್ 2ರಿಂದ 22ರ ಒಳಗೆ ವಿಚಾರಣೆಗೆ ಹಾಜರಾಗಲು ಇಡಿ ಸೂಚಿಸಿದೆ ಎಂದುಟೈಮ್ಸ್‌ ಆಫ್ ಇಂಡಿಯಾ ವರದಿ ತಿಳಿಸಿದೆ.

ನಟ ರವಿತೇಜಾ ಅವರ ಕಾರಿನ ಡ್ರೈವರ್ ಮತ್ತು ಎಫ್–ಕ್ಲಬ್‌ನ ವ್ಯವಸ್ಥಾಪಕ ನಿರ್ದೇಶಕರಿಗೂ ಸಮನ್ಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ, ತೆಲಂಗಾಣ ಅಬಕಾರಿ ಇಲಾಖೆಯ ವಿಶೇಷ ತನಿಖಾ ತಂಡವು (ಎಸ್‌ಐಟಿ) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ,ನಟಿಯರ ವಿರುದ್ಧ 12 ಕೇಸ್ ದಾಖಲಿಸಿ ವಿಚಾರಣೆ ನಡೆಸಿತ್ತಾದರೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಕೈಬಿಟ್ಟಿತ್ತು.

‘ತೆಲಂಗಾಣ ಅಬಕಾರಿ ಇಲಾಖೆಯಿಂದ ಸುಮಾರು 12 ಪ್ರಕರಣಗಳನ್ನು ದಾಖಲಿಸಲಾಗಿತ್ತು. 11 ಚಾರ್ಜ್ ಶೀಟ್‌ಗಳನ್ನು ಸಲ್ಲಿಸಲಾಗಿದೆಯಾದರೂ ಅದರಲ್ಲಿ ಕೆಳ ಹಂತದ ಡ್ರಗ್ಸ್ ಸರಬರಾಜುದಾರರ ಹೆಸರು ಉಲ್ಲೇಖಿಸಲಾಗಿದೆ. ನಮಗೆ ಪುರಾವೆ ಸಿಗುವವರೆಗೂ ಟಾಲಿವುಡ್ ಸೆಲೆಬ್ರಿಟಿಗಳನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಗುತ್ತದೆ. ತನಿಖೆಯಲ್ಲಿ ಅವರ ಹೆಸರುಗಳು ಪತ್ತೆಯಾಗಿವೆ’ ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೆಪ್ಟೆಂಬರ್ 6 ರಂದು ರಾಕುಲ್ ಪ್ರೀತ್ ಸಿಂಗ್, ಸೆಪ್ಟೆಂಬರ್ 8 ರಂದು ರಾಣಾ ದಗ್ಗುಬಾಟಿ ಮತ್ತು ಸೆಪ್ಟೆಂಬರ್ 9 ರಂದು ರವಿತೇಜಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಮುಮೈತ್ ಖಾನ್ ಅವರಿಗೆ ನವೆಂಬರ್ 15 ರಂದು ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT