ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನಟ ರಾಮ್‌ ಚರಣ್‌ ತೇಜ–ಉಪಾಸನಾ ಅವರ ಹೆಣ್ಣು ಮಗುವಿಗೆ ನಾಮಕರಣ– ಕ್ಲೀಂ ಕಾರ ಎಂದು ಹೆಸರು

ನಟ ರಾಮ್‌ ಚರಣ್‌ ತೇಜ ಅವರ ಪತ್ನಿ ಉಪಾಸನಾ ಕೊನಿಡೇಲಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕೊನಿಡೇಲಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.
Published 1 ಜುಲೈ 2023, 4:53 IST
Last Updated 1 ಜುಲೈ 2023, 4:53 IST
ಅಕ್ಷರ ಗಾತ್ರ

ಹೈದರಾಬಾದ್‌: ನಟ ರಾಮ್‌ ಚರಣ್‌ ತೇಜ ಅವರ ಪತ್ನಿ ಉಪಾಸನಾ ಕೊನಿಡೇಲಾ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಕೊನಿಡೇಲಾ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಇದೀಗ ಮಗುವಿಗೆ ‘ಕ್ಲೀಂ ಕಾರ‘ (Klin Kaara Konidela) ಎಂದು ನಾಮಕರಣ ಮಾಡಲಾಗಿದೆ.

ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಗುವಿನ ತಾತ ಹಾಗೂ ನಟ ಚಿರಂಜೀವಿ ಅವರು, 'ಮಗುವಿಗೆ ಕ್ಲೀಂ ಕಾರ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರನ್ನು ಲಲಿತಾ ಸಹಸ್ರನಾಮದಿಂದ ತೆಗೆದುಕೊಳ್ಳಲಾಗಿದೆ. ಒಳ್ಳೆಯ ಉದ್ದೇಶಕ್ಕೆ ಪರಿವರ್ತನೆಯಾಗುವಂತ ಶಕ್ತಿಯನ್ನು ನೀಡುವುದು ಹಾಗೂ ಆಧ್ಯಾತ್ಮಿಕ ಜಾಗೃತಿಯನ್ನುಂಟುಮಾಡುವುದು ಇದರ ಅರ್ಥ ಎಂದು ತಿಳಿಸಿದ್ದಾರೆ.

‘ನಮ್ಮ ಪುಟ್ಟ ರಾಜಕುಮಾರಿ ಈ ಗುಣಗಳನ್ನು ಹೊಂದುತ್ತಾಳೆ ಎಂದು ನಮಗೆ ಅಚಲ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ!

‘ಉಪಾಸನಾ ಕೊನಿಡೇಲಾ ಅವರು 20 ಜೂನ್ 2023ರಂದು ಹೈದರಾಬಾದ್‌ ಅಪೋಲೋ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

2012 ರಲ್ಲಿ ಉಪಾಸನಾ ಜೊತೆ ರಾಮ್‌ಚರಣ್ ತೇಜ ಮದುವೆಯಾಗಿದ್ದರು. ಖ್ಯಾತ ನಿರ್ದಶಕ ರಾಜಮೌಳಿ ಅವರ ಆರ್‌ಆರ್‌ಆರ್‌ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಹೊಸ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಮ್‌ ಚರಣ್‌ ತೇಜ ತಮ್ಮ ಮುಂದಿನ ಚಿತ್ರ ‘ಗೇಮ್ ಚೆಂಜರ್‘ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ನಿರ್ದೇಶಕ ಶಂಕರ್‌ ನಿರ್ದೇಶಿಸುತ್ತಿದ್ದು, ಕಿಯಾರಾ ಅಡ್ವಾಣಿ ಚಿತ್ರದ ನಾಯಕಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT