ಶನಿವಾರ, ಜನವರಿ 22, 2022
16 °C

ರಾಮಾಚಾರಿಯ ಬೆನ್ನುಹತ್ತಿದ ನಟ ತೇಜ್‌: ರಾಮಾಚಾರಿ 2.0

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಿವೈಂಡ್‌’ ಚಿತ್ರದ ಬಳಿಕ ರಾಮಾಚಾರಿಯ ಬೆನ್ನು ಹತ್ತಿದ್ದಾರೆ ನಟ, ನಿರ್ದೇಶಕ ತೇಜ್‌. ಅಂದಹಾಗೆ ‘ರಾಮಾಚಾರಿ 2.0’ ಇದು ತೇಜ್‌ ನಿರ್ಮಾಣ, ನಿರ್ದೇಶನ ಹಾಗೂ ನಾಯಕನಾಗಿ ನಟನೆಯ ಎರಡನೇ ಚಿತ್ರ. 

ಅದೇ ‘ನಾಗರಹಾವಿ’ನ ರಾಮಾಚಾರಿಯೇ ಇಲ್ಲಿ ಎರಡನೇ ಬಾರಿಗೆ ಅವತಾರ ಎತ್ತಿದ್ದಾನೆ. ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್‌ ರಾಮಾಚಾರಿ ಆಗಿ ಕಾಣಿಸಿಕೊಂಡಿದ್ದರು. ಈಗ ರಾಮಾಚಾರಿ, ಜಲೀಲ, ಮಾರ್ಗರೆಟ್‌ ಮತ್ತು ನಂದಿನಿ (ರವಿಚಂದ್ರನ್‌ ಅಭಿನಯದ ರಾಮಾಚಾರಿಯ ನಂದಿನಿ ಪಾತ್ರ) ಮತ್ತೆ ಒಟ್ಟಾಗಿದ್ದಾರೆ.

‘ಇಲ್ಲಿ  ರಾಮಾಚಾರಿ ತುಂಬಾ ಬುದ್ಧಿವಂತ, ಆಧುನಿಕವಾಗಿ ಯೋಚಿಸಬಲ್ಲವನು. ಪ್ರಸ್ತುತ ಕಾಲದ ಕೃತಕ ಬುದ್ಧಿಮತ್ತೆ, ಹ್ಯಾಕಿಂಗ್‌, ಕ್ರಿಪ್ಟೋಕರೆನ್ಸಿ ಸುತ್ತ ಕಥೆ ಹೆಣೆಯಲಾಗಿದೆ’ ಎಂದರು ತೇಜಸ್‌. 

ಮಾರ್ಗರೆಟ್‌ ಆಗಿ ‘ನನ್ನರಸಿ ರಾಧೆ’ ಖ್ಯಾತಿಯ ಕೌಸ್ತುಭಮಣಿ ಕಾಣಿಸಿಕೊಂಡಿದ್ದಾರೆ. ಜಲೀಲನಾಗಿ ವಿಜಯ್‌ ಚೆಂಡೂರು ಇದ್ದಾರೆ. ಉಳಿದಂತೆ ಸ್ಪರ್ಶರೇಖಾ, ಅಶ್ವಿನಿ ಹಾಸನ್‌, ದಿವ್ಯಾ ಸುಂದರರಾಜ್‌, ಚಿಲ್ಲರ್ ಮಂಜು ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರಗಳಲ್ಲಿ ಚಿತ್ರೀಕರಣ ನಡೆಯಲಿದೆ. 40 ದಿನಗಳ ಕಾಲ ಚಿತ್ರೀಕರಣದ ಯೋಜನೆ ಇದೆ. ಮುಂದಿನ ಜುಲೈ ವೇಳೆಗೆ ರಾಮಾಚಾರಿ 2.0 ತೆರೆ ಮೇಲೆ ಕಾಣಿಸಿಲಿದ್ದಾನೆ ಎಂದರು ತೇಜ್‌. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು