ಬುಧವಾರ, ಜೂನ್ 3, 2020
27 °C
'ಬಲ್ಲಾಳದೇವ'ನ ನಿಶ್ಚಿತಾರ್ಥ

'It's Official' ರಾನಾ ದಗ್ಗುಬಾಟಿ-ಮಿಹಿಕಾ ಬಜಾಜ್ ನಿಶ್ಚಿತಾರ್ಥ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

'ಬಾಹುಬಲಿ'ಯ ಬಲ್ಲಾಳದೇವ ರಾನಾ ದಗ್ಗುಬಾಟಿ ತನ್ನ ಪ್ರೇಯಸಿ ಮಿಹಿಕಾ ಬಜಾಜ್‌ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 'It's Official' ಒಕ್ಕಣೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಅವರು ಹಂಚಿಕೊಂಡಿರುವ ಚಿತ್ರ ವೈರಲ್ ಆಗಿದೆ. ಸಿನಿ ತಾರೆಯರು ಜೋಡಿಗೆ ಮನದುಂಬಿ ಅಭಿನಂದಿಸಿದ್ದಾರೆ.

ಪಿಂಕ್ ಮತ್ತು ತೆಳು ಕಿತ್ತಳೆ ಬಣ್ಣದ ಸೀರೆಯಲ್ಲಿ ಮಿಹಿಕಾ ಮಿಂಚುತ್ತಿದ್ದರೆ, ಬಿಳಿ ಷರ್ಟು-ಪಂಚೆಯಲ್ಲಿ ರಾನಾ ಮನದುಂಬಿ ನಗುತ್ತಿದ್ದಾರೆ. ರಾನಾ ಅವರ ಈ ಭಂಗಿ 'ನೇನು ರಾಜು ನೇನೆ ಮಂತ್ರಿ'ಯ ಜೋಗೇಂದ್ರನನ್ನು ನೆನಪಿಸುವಂತಿದೆ.

ರಾನಾ ಅವರ It's Official ಪೋಸ್ಟ್‌ಗೆ ನಟರಾದ ವರುಣ್‌ ತೇಜ್ ಮತ್ತು ಶಿವಕಾರ್ತಿಕೇಯನ್ ಆರಂಭದಲ್ಲಿ ಅಭಿನಂದಿಸಿದ್ದರು. ಸೈನಾ ನೆಹ್ವಾಲ್ ಸೇರಿದಂತೆ ಹಲವು ಖ್ಯಾತನಾಮರ ಪ್ರತಿಕ್ರಿಯೆಗಳು ಇದೀಗ ಕಾಣಿಸಿಕೊಳ್ಳುತ್ತಿವೆ.

ವಾರದ ಹಿಂದಷ್ಟೇ ರಾನಾ ತಾವು ಮಿಹಿಕಾ ಅವರೆದುರು ಪ್ರೇಮ ಪ್ರಸ್ತಾಪವಿಟ್ಟ ವಿಚಾರವನ್ನು ಟ್ವೀಟ್ ಮಾಡಿದ್ದರು. 'she said yes' ಒಕ್ಕಣೆಯೊಂದಿಗೆ ಅವರು ಮಾಡಿದ್ದ ಪೋಸ್ಟ್‌ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಈಗಲೂ ಅದೆ ಜಾಣತನ ತೋರಿರುವ ರಾನಾ, 'And it's official' ಒಕ್ಕಣೆಯೊಂದಿಗೆ ಪಟಾಕಿಯ ಇಮೋಜಿಗಳನ್ನು ಹಾಕಿದ್ದಾರೆ.

 
 
 
 

 
 
 
 
 
 
 
 
 

And it’s official!! 💥💥💥💥

Rana Daggubati (@ranadaggubati) ರಿಂದ ಹಂಚಲಾದ ಪೋಸ್ಟ್ ಅವರು ರಂದು

ತಮನ್ನಾ ಭಾಟಿಯಾ, ಸಮಂತಾ ರುತ್ ಪ್ರಭು, ಶ್ರುತಿ ಹಾಸನ್, ಕಿಯಾರಾ ಅಡ್ವಾಣಿ ಮತ್ತು ಇತರರು ನಿಶ್ಚಿತಾರ್ಥದ ಪೋಸ್ಟ್‌ಗೆ ಅಭಿನಂದಿಸಿ ಮೆಸೇಜ್ ಮಾಡಿದ್ದರು. ಮಿಹಿಕಾರ ಆತ್ಮೀಯ ಗೆಳತಿ ಸೋನಂ ಕಪೂರ್ ರಾನಾರ ಕುಟುಂಬವನ್ನು ಸ್ವಾಗತಿಸಿದ್ದಾರೆ. 'ನನ್ನ ಹೈದರಾಬಾದ್ ಮಗನಿಗೆ ಅಭಿನಂದನೆಗಳು. ನನಗೆ ತುಂಬಾ ಖುಷಿಯಾಗಿದೆ. ನಿಮ್ಮಬ್ಬರಿಗೂ ಇನ್ನಷ್ಟು ಒಳಿತಾಗಲಿ' ಎಂದು ಸೋನಂರ ತಂದೆ ಅನಿಲ್ ಕಪೂರ್ ಬರೆದಿದ್ದರು.

'ಲಾಕ್‌ಡೌನ್‌ನಿಂದ ಕೆಲವರಿಗೆ ವೆಡ್‌ಲಾಕ್ ಸಾಧ್ಯವಾಗುತ್ತದೆ' ಎಂದು ಪ್ರೇಮ ಪ್ರಸ್ತಾವದ ಚಿತ್ರಕ್ಕೆ ತೆಲುಗು ಚಿತ್ರಜಗತ್ತಿನ ಮೆಗಾಸ್ಟಾರ್ ಚಿರಂಜೀವಿ ಅಭಿನಂದಿಸಿದ್ದರು. ಈ ಮೆಸೇಜ್ ಸಹ ವೈರಲ್ ಆಗಿತ್ತು.

'ಇದೇ ವರ್ಷ ಮದುವೆ ಸಮಾರಂಭ ನಡೆಯಲಿದೆ. ಮಾಹಿತಿಯನ್ನು ಶೀಘ್ರ ನೀಡುತ್ತೇವೆ. ಲಾಕ್‌ಡೌನ್ ಕಾಲವನ್ನು ನಮ್ಮ ಮಕ್ಕಳು ಚೆನ್ನಾಗಿ ಬಳಸಿಕೊಂಡರು. ಮುಂದಿನ ದಿನಗಳಲ್ಲಿ ನಾವು ಮದುವೆ ಸಿದ್ಧತೆಯಲ್ಲಿ ಬ್ಯುಸಿ ಆಗುತ್ತೇವೆ' ಎಂಬ ರಾನಾರ ತಂದೆ ಸುರೇಶ್‌ ಬಾಬು ಅವರ ಮಾತನ್ನು ತೆಲುಗು ಚಿತ್ರಜಗತ್ತಿನ ಮಾಹಿತಿ ಕೊಡುವ ಕೆಲ ಜಾಲತಾಣಗಳು ವರದಿ ಮಾಡಿವೆ.

 
 
 
 

 
 
 
 
 
 
 
 
 

And she said Yes :) ❤️#MiheekaBajaj

Rana Daggubati (@ranadaggubati) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

 
 
 
 

 
 
 
 
 
 
 
 
 

#familylife ♥️♥️ #photoshoot @ranadaggubati 🌸🌸#ranamiheeka #ranheeka #ranadaggubati #miheekabajaj #miheekabajajoffical #miheekabajajdaggubati #telugumemes #ktm #duke #edits #love #lovecouple #marriage #wedding #repost #vijaydevarakonda #miheekapics #prabhas #alluarjun #maheshbabu #ramcharan #rashmikamandanna #rrr#venkateshdaggubati #chiranjeevi #nagachaitanya #ntr #tiktok@ranadaggubati @ranadaggubatifc_ @rana_daggubati_updates @ranadaggubatif @team_rana_ @ranadaggubati__ @rana_merasathi

Miheekabajaj Daggubati (@miheekadaggubati) ರಿಂದ ಹಂಚಲಾದ ಪೋಸ್ಟ್ ಅವರು ರಂದು

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು