ಶುಕ್ರವಾರ, ಡಿಸೆಂಬರ್ 13, 2019
26 °C

‘ಆ್ಯಕ್ಷನ್’ ಹಾಡಿನಲ್ಲಿ ರಾನಾ ದಗ್ಗುಬಾಟಿ ಸ್ಟೆಪ್ಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕತ್ತಿ ಸಂಡೈ’ ಚಿತ್ರದಲ್ಲಿ ನಟ ವಿಶಾಲ್‌ ಹಾಗೂ ತಮನ್ನಾ ಜೋಡಿಯಾಗಿ ನಟಿಸಿದ್ದರು. ಆದರೆ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷಿತ ಲಾಭ ಗಳಿಸಲಿಲ್ಲ. ಈಗ ಈ ಜೋಡಿಯ ಹೊಸ ಚಿತ್ರ ಸೆಟ್ಟೆರುತ್ತಿದೆ. ಇದನ್ನು ಸುಂದರ್‌ ಸಿ. ನಿರ್ದೇಶಿಸುತ್ತಿದ್ದು, ವಿಶಾಲ್‌, ತಮನ್ನಾ ನಾಯಕ, ನಾಯಕಿಯಾಗಿ ಮಿಂಚಲಿದ್ದಾರೆ.

ಈ ಹೊಸ ಚಿತ್ರಕ್ಕೆ ‘ಆ್ಯಕ್ಷನ್‌’ ಎಂದು ಹೆಸರಿಡಲಾಗಿದೆ.  ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ನಟ ವಿಶಾಲ್‌ಗೆ ಭಾರಿ ಅಭಿಮಾನಿಗಳಿದ್ದು, ಈ ಚಿತ್ರ ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ತೆಲುಗು ಆವೃತ್ತಿಯಲ್ಲಿ ರಾನಾ ದಗ್ಗುಬಾಟಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕೆ ಹಿಪ್‌ ಹಾಪ್‌ ಗಾಯಕ ಆದಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ‘ಸಾಂಗ್‌ ಲೈಟ್ಸ್‌, ಕ್ಯಾಮೆರಾ ಆ್ಯಕ್ಷನ್‌’ ಎಂಬ ರ‍್ಯಾಪ್‌ ಹಾಡಿನಲ್ಲಿ ರಾನಾ ಕಾಣಿಸಿಕೊಳ್ಳಲಿದ್ದಾರೆ.  ಹೈದಾರಾಬಾದ್‌ನಲ್ಲಿರುವ ಆದಿ ಸ್ಟುಡಿಯೊದಲ್ಲಿ ಈ ಹಾಡಿನ ಚಿತ್ರೀಕರಣದಲ್ಲಿ ರಾನಾ ದಗ್ಗುಬಾಟಿ ದೃಶ್ಯಗಳನ್ನು ಈಗಾಗಲೇ ಚಿತ್ರೀಕರಣ ನಡೆಸಲಾಗಿದೆಯಂತೆ.  ಈ ಫೋಟೊಗಳನ್ನು ಆದಿ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಹಂಚಿಕೊಂಡಿದ್ದಾರೆ. 

 ‘ಆ್ಯಕ್ಷನ್‌’ ಚಿತ್ರದ ಟ್ರೇಲರ್‌ ಈಗಾಗಲೇ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಹೆಚ್ಚು ಪ್ರಶಂಸೆ ಗಿಟ್ಟಿಸಿಕೊಂಡಿದೆ. ಕೆಲ ದಿನಗಳ ಕಾಲ ಈ ಟ್ರೇಲರ್‌ ಟಾಪ್‌ ಟ್ರೆಂಡಿಂಗ್‌ನಲ್ಲಿತ್ತು.

ಇದನ್ನೂ ಓದಿ: ರಾನಾ ಜೊತೆ ರಾಕುಲ್‌ ಡೇಟಿಂಗ್‌?

ಟ್ರೈಡೆಂಟ್‌ ಆರ್ಟ್ಸ್‌ನ ಆರ್‌. ರವೀಂದ್ರನ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ಛಾಯಾ ಸಿಂಗ್‌, ಐಶ್ವರ್ಯಾ ಲಕ್ಷ್ಮಿ, ಅಕಾಂಕ್ಷಾ ಪುರಿ, ಕಬೀರ್‌ ದುಹಾನ್ ಸಿಂಗ್‌, ಯೋಗಿ ಬಾಬು ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು