ಮಂಗಳವಾರ, ಸೆಪ್ಟೆಂಬರ್ 21, 2021
20 °C

₹22 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ ರಣವೀರ್‌–ದೀಪಿಕಾ ದಂಪತಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್ ತಾರಾ ದಂಪತಿ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ದಕ್ಷಿಣ ಮುಂಬೈನ ಆಲಿಬಾಗ್‌ ಬೀಚ್ ಬಳಿ ₹22 ಕೋಟಿ ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿರುವುದಾಗಿ ವರದಿಯೊಂದು ತಿಳಿಸಿದೆ.

2.25 ಎಕರೆ ವಿಶಾಲ ಪ್ರದೇಶದಲ್ಲಿ ಸುಮಾರು 18,000 ಚದರ ಅಡಿ ವ್ಯಾಪ್ತಿಯಲ್ಲಿ ಈ ಬಂಗಲೆಯನ್ನು ನಿರ್ಮಿಸಲಾಗಿದ್ದು, ಇದು ಎವರ್ ಸ್ಟೋನ್ ಗ್ರುಪ್ ಮಾಲೀಕ ರಾಜೇಶ್ ಜಗ್ಗಿ ಅವರ ಒಡೆತನದಲ್ಲಿತ್ತು ಎನ್ನಲಾಗಿದೆ.

ಐದು ಬೆಡ್‌ರೂಮ್‌ಗಳ ವಿಶಾಲ ಬಂಗಲೆಯಾಗಿರುವ ಈ ಮನೆ ಕಿಹಿಮ್ ಬೀಚ್‌ಗೆ ಕೇವಲ 10 ನಿಮಿಷದ ಪ್ರಯಾಣದ ಅಂತರದಲ್ಲಿದೆ. ಈ ಪ್ರದೇಶದಲ್ಲಿ ಶಾರುಖ್‌ ಖಾನ್‌ ಸೇರಿದಂತೆ ಅನೇಕ ಕೋಟ್ಯಾದೀಶರು ಮನೆ ಮಾಡಿದ್ದಾರೆ. 

ಬಂಗಲೆ ಖರೀದಿ ಬಗ್ಗೆ ರಣವೀರ್ ಕಚೇರಿ ಯಾವುದೇ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ಆದರೆ, ರಣವೀರ್ ಹಾಗೂ ದೀಪಿಕಾ ಒಡೆತನದ ಸಂಸ್ಥೆಗಳೇ ಇದನ್ನು ಖರೀದಿಸಿವೆ ಎಂಬುದು ಬಹಿರಂಗವಾಗಿದೆ. ಸೆ.13 ರಂದು ದೀಪಿಕಾ–ರಣವೀರ್ ಹೆಸರಿಗೆ ಬಂಗಲೆ ನೋಂದಣಿಯಾಗಿದ್ದು, ₹1.32 ಕೋಟಿ ಮುಂಗಡ ಪಾವತಿಸಲಾಗಿದೆ ಎಂದು ಮನಿ ಕಂಟ್ರೋಲ್.ಕಾಮ್ ತಿಳಿಸಿದೆ.

ಸದ್ಯ ರಣವೀರ್–ದೀಪಿಕಾ ಮುಂಬೈನ ಸ್ವಾಂಕಿ ಅಪಾರ್ಟ್‌ಮೆಂಟ್‌ನಲ್ಲಿ 2018 ರಿಂದ ನೆಲೆಸಿದ್ದಾರೆ.

1983 ರಲ್ಲಿ ಭಾರತ ಕ್ರಿಕೆಟ್ ವಿಶ್ವಕಪ್ ಗೆದ್ದಿರುವ ಹಾಗೂ ಕಪಿಲ್ ದೇವ್ ಕುರಿತು ಕಥೆ ಹೊಂದಿರುವ ಮುಂಬರುವ ‘83‘ ಸಿನಿಮಾದಲ್ಲಿ ರಣವೀರ್ ಹಾಗೂ ದೀಪಿಕಾ ಒಟ್ಟಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟಿ ನಿಖಿತಾ ರಾವಲ್‌ಗೆ ಗನ್ ತೋರಿಸಿ ₹7ಲಕ್ಷ ದೋಚಿದ ದರೋಡೆಕೋರರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು