ಶನಿವಾರ, ಮೇ 8, 2021
19 °C

ನಟಿ ರಶ್ಮಿಕಾ ಮಂದಣ್ಣರ ಚಾಲೆಂಜ್‌ ಪೂರೈಸಿದ ರಾಶಿ ಖನ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

‘ಗ್ರೀನ್‌ ಇಂಡಿಯಾ ಚಾಲೆಂಜ್’ನ ಭಾಗವಾಗಿ ತೆಲುಗು ನಟಿ ಸಮಂತಾ ಅಕ್ಕಿನೇನಿ ನೀಡಿದ್ದ ಸವಾಲನ್ನು ಕನ್ನಡದ ನಟಿ ರಶ್ಮಿಕಾ ಮಂದಣ್ಣ ಸ್ವೀಕರಿಸಿ ಗಿಡವೊಂದನ್ನು ನೆಟ್ಟು ನೀರೆರೆಯುವ ಮೂಲಕ ಗಮನ ಸೆಳೆದಿದ್ದರು. ನಂತರ ಈ ಸವಾಲನ್ನು ನಟಿಯರಾದ ರಾಶಿ ಖನ್ನಾ, ಕಲ್ಯಾಣಿ ಪ್ರಿಯದರ್ಶನ್ ಮತ್ತು ಆಶಿಕಾ ರಂಗನಾಥ್ ಅವರಿಗೆ ದಾಟಿಸಿದ್ದರು. 

ರಶ್ಮಿಕಾ ಸವಾಲು ಸ್ವೀಕರಿಸಿದ ರಾಶಿ ಖನ್ನಾ ತಮ್ಮ ಮನೆಯ ಗಾರ್ಡನ್ನಿನಲ್ಲಿ ಎರಡು ಗಿಡಗಳನ್ನು ನೆಟ್ಟಿದ್ದಾರೆ. ರಶ್ಮಿಕಾಗೆ ಧನ್ಯವಾದ ಹೇಳಿ, ಈ ಸವಾಲನ್ನು ನಟಿಯರಾದ ರಕುಲ್‌ ಪ್ರೀತ್‌ ಸಿಂಗ್‌, ಕಾಜಲ್‌ ಅಗರ್‌ವಾಲ್‌ ಹಾಗೂ ತಮನ್ನಾಗೆ ದಾಟಿಸಿದ್ದಾರೆ.

ಹೂವಿನ ಮತ್ತು ಅಲಂಕಾರದ ಗಿಡಗಳನ್ನು ನೆಟ್ಟು ನೀರೆರೆಯುತ್ತಿರುವ ಫೋಟೊಗಳನ್ನು ರಾಶಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಶಿಯ ಈ ಕೆಲಸಕ್ಕೆ ಅವರ ಅಭಿಮಾನಿಗಳು ಮತ್ತು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸಿ, ಈ ಚಾಲೆಂಜ್‌ನ ಸರಪಳಿಯನ್ನು ಮುಂದಕ್ಕೆ ಕೊಂಡೊಯ್ಯಿರಿ. ಸವಾಲಿಗೆ ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಜೋಡಿಸಿ ಎಂದು ರಾಶಿ ಒತ್ತಾಯಿಸಿದ್ದಾರೆ.

ಆಂಧ್ರದ ರಾಜ್ಯಸಭಾ ಸದಸ್ಯ ಜೋಗಿನಿಪಲ್ಲಿ ಸಂತೋಷ್ ಕುಮಾರ್ ಆರಂಭಿಸಿದ ‘ಗ್ರೀನ್ ಇಂಡಿಯಾ ಚಾಲೆಂಜ್’ ಯಶಸ್ವಿಯಾಗಿ ಮುಂದುವರೆದಿದೆ. ಗ್ರೀನ್ ಇಂಡಿಯಾ ಚಾಲೆಂಜ್ ಭಾಗವಾಗಿ ಸೆಲೆಬ್ರಿಟಿಗಳು ಗಿಡಗಳನ್ನ ನಡುವ ಮೂಲಕ ಮತ್ತೆ ಮೂವರಿಗೆ ಗಿಡಗಳನ್ನ ನೆಡುವಂತೆ ಚಾಲೆಂಜ್ ನೀಡುತ್ತಿದ್ದಾರೆ. ರಾಶಿ ಖನ್ನಾ ಅವರ ಬೆಂಬಲಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ರಾಶಿ ಗಿಡ ನೆಡುತ್ತಿರುವ ವಿಡಿಯೊವನ್ನು ಜೋಗಿನಿಪಲ್ಲಿ ಸಂತೋಷ್ ಕುಮಾರ್ ಕೂಡ ಟ್ವೀಟ್‌ ಮಾಡಿದ್ದಾರೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು