ರಕ್ಷಿತ್– ರಶ್ಮಿಕಾ ಸಂಬಂಧ ಮುರಿದುಹೋಯ್ತಾ?

7

ರಕ್ಷಿತ್– ರಶ್ಮಿಕಾ ಸಂಬಂಧ ಮುರಿದುಹೋಯ್ತಾ?

Published:
Updated:

‘ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಲವ್‌ ಬ್ರೇಕಪ್‌ ಆಗಿದೆ’ ಹೀಗೊಂದು ಸುದ್ದಿ ಕೆಲವು ದಿನಗಳ ಹಿಂದೆ, ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಆದರೆ ಅದಾದ ಕೆಲವೇ ದಿನಗಳಲ್ಲಿ ಸ್ವತಃ ರಶ್ಮಿಕಾ ಅವರೇ ಅದು ಸುಳ್ಳು ಸುದ್ದಿ ಎಂದು ಹೇಳಿದ್ದರು. ಹಾಗೆಯೇ ರಶ್ಮಿಕಾ ಅವರ ಫೇಸ್‌ಬುಕ್‌ ಪುಟದಲ್ಲಿ ಇಬ್ಬರೂ ಲೈವ್ ಬರುವುದರ ಮೂಲಕ ‘ನಮ್ಮ ನಡುವಿನ ಸಂಬಂಧಕ್ಕೆ ಧಕ್ಕೆಯಾಗಿಲ್ಲ’ ಎಂಬ ಸಂದೇಶ ದಾಟಿಸಿದ್ದರು.

ಆದರೆ ಈ ಬ್ರೇಕಪ್ ಪುರಾಣ ಸದ್ಯಕ್ಕೆ ತಣ್ಣಗಾಗುವಂತೆ ಕಾಣುತ್ತಿಲ್ಲ. ಈಗ ಮತ್ತೆ ಈ ಬ್ರೇಕಪ್ ಸುದ್ದಿ ‘ಆಡುವವರ ಬಾಯಿ’ಯಲ್ಲಿ ಜೋರು ಓಡಾಡುತ್ತಿದೆ. ‘ಇಬ್ಬರ ಪ್ರೇಮಸಂಬಂಧ ಕೊನೆಗೊಂಡಿದೆ’ ಎಂದು ಅವರ ಆಪ್ತಮೂಲಗಳೇ ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಸಂಬಂಧ ಮುರಿದು ಬೀಳುವುದಕ್ಕೆ ಬಣ್ಣದ ಬುದುಕಿನ ಕಾರಣಗಳೇ ಮುಖ್ಯಪಾತ್ರ ವಹಿಸಿವೆ ಎಂದೂ ಹೇಳಲಾಗುತ್ತಿದೆ.

‘ಗೀತಗೋವಿಂದಂ’ ಚಿತ್ರದ ದೊಡ್ಡ ಯಶಸ್ಸಿನಿಂದ ರಶ್ಮಿಕಾ ವೃತ್ತಿಬದುಕಿನ ಗ್ರಾಫ್ ಒಮ್ಮಿಂದೊಮ್ಮೆಲೇ ಮೇಲೇರಿದೆ. ಕನ್ನಡ ಚಿತ್ರರಂಗದ ನಟಿ ಎಂಬ ಮಿತಿಯನ್ನು ಮೀರಿ ಅವರು ದಕ್ಷಿಣ ಭಾರತದ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ವಿಜಯ ದೇವರಕೊಂಡ ಅವರ ಜತೆ ತುಟಿಗೆ ತುಟಿ ಹಚ್ಚಿದ ಹಸಿ ಹಸಿ ದೃಶ್ಯ ಚಿತ್ರ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿ ಪಡ್ಡೆ ಹುಡುಗರ ಮೈಯನ್ನು ಬಿಸಿಯಾಗಿಸಿತ್ತು. ಆ ಸಂದರ್ಭದಲ್ಲಿಯೇ ರಶ್ಮಿಕಾ ಮತ್ತು ರಕ್ಷಿತ್ ದೂರವಾಗುತ್ತಿದ್ದಾರೆ ಎಂದೂ ಸುದ್ದಿಯಾಗಿತ್ತು. 

ಆದರೆ ಇತ್ತೀಚೆಗಿನ ಸುದ್ದಿ ಏನೆಂದರೆ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರ ಕುಟುಂಬದ ಹಿರಿಯರು ಕುಳಿತುಕೊಂಡು ಚರ್ಚಿಸಿಯೇ ಈ ನಿರ್ಧಾರಕ್ಕೆ ಬಂದಿದ್ದಾರಂತೆ. 2017 ಜುಲೈ 3ರಂದು ರಕ್ಷಿತ್ ಮತ್ತು ರಶ್ಮಿಕಾ ನಿಶ್ವಿತಾರ್ಥ ವಿರಾಜಪೇಟೆಯಲ್ಲಿ ನಡೆದಿತ್ತು.

ಈ ಬ್ರೇಕಪ್ ಸುದ್ದಿಗೆ ಇಬ್ಬರೂ ಪ್ರತಿಕ್ರಿಯಿಸಿಲ್ಲ. ರಕ್ಷಿತ್ ಅವರಂತೂ ಇತ್ತೀಚೆಗೆ ಟ್ವಿಟರ್ ಖಾತೆಯನ್ನೂ ಡಿಲೀಟ್ ಮಾಡಿ ಸಾಮಾಜಿಕ ಜಾಲತಾಣಗಳಿಂದಲೂ ದೂರವಾಗಿದ್ದಾರೆ. ರಶ್ಮಿಕಾ ಕುಟುಂಬದವರು ‘ಇದು ವೈಯಕ್ತಿಕ ವಿಷಯ ಆ ಕುರಿತು ಏನೂ ಹೇಳಲಾರೆ’ ಎಂಬ ಮಾತನ್ನಷ್ಟೇ ಹೇಳುತ್ತಾರೆ.

ನಿಜಕ್ಕೂ ಈ ಜೋಡಿ ಪ್ರೇಮ ವಿಮುಖರಾಗಿದ್ದಾರಾ, ಅಥವಾ ಅದು ಬರೀ ಸುಳ್ಳು ಸುದ್ದಿಯಾ?  ಸತ್ಯ ಏನು ಎನ್ನುವುದನ್ನು ತಿಳಿಯಲು ಸ್ವಲ್ಪ ಕಾಲ ಕಾಯಲೇಬೇಕು.

ಬರಹ ಇಷ್ಟವಾಯಿತೆ?

 • 15

  Happy
 • 3

  Amused
 • 8

  Sad
 • 4

  Frustrated
 • 14

  Angry

Comments:

0 comments

Write the first review for this !