ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಆರಣ್ಯಕ್‌' ಮೂಲಕ ಡಿಜಿಟಲ್ ವೇದಿಕೆಗೆ ಕಾಲಿಡಲಿದ್ದಾರೆ ನಟಿ ರವೀನಾ ಟಂಡನ್‌

Last Updated 4 ಮಾರ್ಚ್ 2021, 12:45 IST
ಅಕ್ಷರ ಗಾತ್ರ

ಬಾಲಿವುಡ್ ಬ್ಯೂಟಿ ರವೀನಾ ಟಂಡನ್‌ ಡಿಜಿಟಲ್‌ ವೇದಿಕೆಗೆ ಕಾಲಿಡಲು ಸಜ್ಜಾಗಿದ್ದಾರೆ. ಅತೀಂದ್ರಿಯ ಅಪರಾಧ ಕತೆಯನ್ನು ಹೊಂದಿರುವ ವೆಬ್‌ಸರಣಿಯಲ್ಲಿ ನಟಿಸುತ್ತಿದ್ದಾರೆ ಈ ಬೆಡಗಿ. ಈ ಸರಣಿಗೆ ವಿನಯ್‌ ವೈಕುಲ್‌ ನಿರ್ದೇಶನವಿದೆ. ರಾಯ್‌ ಕಪೂರ್ ಫಿಲ್ಮ್ಸ್‌ ಹಾಗೂ ರಮೇಶ್ ಸಿಪ್ಪಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಯಡಿ ರೋಹನ್ ಸಿಪ್ಪಿ ಹಣ ಹೂಡಿಕೆ ಮಾಡಿದ್ದಾರೆ. ಈ ವೆಬ್‌ಸರಣಿಯೂ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಆರಣ್ಯಕ್‌ ಸರಣಿಯಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿರುವ ರವೀನಾ ‘ಆರಣ್ಯಕ್‌ ಹಿಮಾಚಲದಲ್ಲಿ ನಡೆಯುವ ನಿಗೂಢ ಹಾಗೂ ಕುತೂಹಲಕಾರಿ ಕತೆಯಾಗಿದೆ. ಇದರಲ್ಲಿ ನನ್ನದು ಕಸ್ತೂರಿ ದೊಗ್ರಾ ಎಂಬ ಪಾತ್ರ. ನಮ್ಮ ಸಮಾಜದ ಹಲವು ಮಹಿಳೆಯರಂತೆ ಕಸ್ತೂರಿ ವೈಯಕ್ತಿಕ ಹಾಗೂ ವೃತ್ತಿ ಜೀವನವನ್ನು ಸರಿದೂಗಿಸಿಕೊಂಡು ಹೋಗಲು ಹೆಣಗಾಡುವ ಮಹಿಳೆ. ಇದು ಅವಳ ಕಥೆ’ ಎಂದು ವಿವರಣೆ ನೀಡಿದ್ದಾರೆ.

ಚಾರುದತ್ತ್ ಆಚಾರ್ಯ ಕಥೆ ಬರೆದಿರುವ ಈ ಸರಣಿಯಲ್ಲಿ ಪರಂಬ್ರತ ಚಟರ್ಜಿ, ಅಶುತೋಷ್ ರಾಣಾ, ಝಾಕಿರ್ ಹುಸೈನ್‌ ಹಾಗೂ ಮೆಗ್ನಾ ಮಲಿಕ್ ಮೊದಲಾದವರು ರವೀನಾ ಜೊತೆ ತೆರೆ ಹಂಚಿಕೊಂಡಿದ್ದಾರೆ.

ರಿಚಿ ಮೆಹ್ತಾರ ಡೆಲ್ಲಿ ಕ್ರೈಮ್ ಸೀಸನ್‌ 2, ಕೋಟಾ ಫ್ಯಾಕ್ಟರಿ 2, ಏ ಕಾಲಿ ಕಾಲಿ ಆಂಕೆ, ಮಿಸ್‌ಮ್ಯಾಚ್ಡ್‌ ಸೀಸನ್‌ 2 ಸೇರಿದಂತೆ ಇನ್ನೂ ಅನೇಕ್ ಸರಣಿಗಳು ನೆಟ್‌ಫಿಕ್ಸ್‌ನಲ್ಲಿ ಮುಂದಿನ ತಿಂಗಳುಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT