ಬುಧವಾರ, ಮಾರ್ಚ್ 3, 2021
30 °C
ರವೀನಾ ಟಂಡನ್‌ ಆಯ್ಕೆ ಬಾಲಿವುಡ್‌ ಆಗಿರಲಿಲ್ಲ

ರವೀನಾ ಟಂಡನ್‌ಗೆ ಬೇಡವಾಗಿತ್ತು ಬಾಲಿವುಡ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

1991ರಲ್ಲಿ ಬಿಡುಗಡೆಯಾದ ‘ಪತ್ಥರ್‌ ಕೆ ಫೂಲ್’‌ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರವೇಶಿಸಿದವರು ನಟಿ ರವೀನಾ ಟಂಡನ್‌. ಮೊದಲ ಚಿತ್ರದಲ್ಲಿ ಸಲ್ಮಾನ್ ಖಾನ್‌ ಜೊತೆ ನಾಯಕಿಯಾಗಿ ನಟಿಸುವ ಅವಕಾಶ. 29 ವರ್ಷಗಳ ಕೆರಿಯರ್‌ನಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಹಳಷ್ಟು ಜನರಿಗೆ ಗೊತ್ತಿರದ ತಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ವಿಚಾರಗಳನ್ನು ರವೀನಾ ಈಚೆಗೆ ಆನ್‌ಲೈನ್‌ ಚಾಟ್‌ ಷೊದಲ್ಲಿ ಹಂಚಿಕೊಂಡಿದ್ದಾರೆ.     

ನಿಮಗೆ ಗೊತ್ತೆ... ರವೀನಾ ಟಂಡನ್ ಎಂದಿಗೂ ನಟಿಯಾಗಬೇಕು ಎಂಬ ಕನಸು ಕಂಡವರಲ್ಲ. ಬಾಲಿವುಡ್‌ ಬಗ್ಗೆ ಕಿಂಚಿತ್ತೂ ಆಸಕ್ತಿ ಇರಲಿಲ್ಲ. ತಾವಾಯಿತು, ತಮ್ಮ ಕೆಲಸವಾಯಿತು ಎಂದು ಜಾಹೀರಾತು, ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಕೋಲು ಮುಖದ ರೂಪದರ್ಶಿ, ನಟನೆಯತ್ತ ಹೊರಳಿದ್ದೇ ಆಕಸ್ಮಿಕ. ಅದು ಮೊದಲ ಸಿನಿಮಾದಲ್ಲಿಯೇ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಜೊತೆ ನಾಯಕಿಯಾಗುವ ಅದೃಷ್ಟ. ಆ ಎಲ್ಲ ಅನುಭವಗಳನ್ನು ರವೀನಾ ಟಂಡನ್‌ ಮಾತುಗಳಲ್ಲೇ ಕೇಳಿ...

ನಾನು ನಟಿಯಾಗಬೇಕು ಎಂದು ಅಂದುಕೊಂಡಿರಲಿಲ್ಲ. ಆದರೆ ಅದೃಷ್ಟದಲ್ಲಿ ಹಾಗೇ ನಡೆಯಬೇಕು ಎಂದು ಇರುವಾಗ ಅದಕ್ಕೆ ಪೂರಕವಾದ ಘಟನೆಗಳು ನಡೆಯುತ್ತ ಹೋಗುತ್ತವೆ. ಖ್ಯಾತ ಮಾಡೆಲಿಂಗ್‌ ಗುರು ಪ್ರಹ್ಲಾದ್‌ ಕಕ್ಕರ್‌ ಬಳಿ ನಾನು ಮಾಡೆಲಿಂಗ್‌ ಕೆಲಸ ಮಾಡುತ್ತಿದ್ದೆ. ಅವರ ಕೆಲವು ಪ್ರಾಜೆಕ್ಟ್‌ಗಳಿಗೆ ರೂಪದರ್ಶಿಯಾಗಿದ್ದೆ. ಆಗ ಸ್ನೇಹಿತರು ‘ನೀನೇಕೆ ಚಿತ್ರಗಳಲ್ಲಿ ನಟಿಸಬಾರದು’ ಎಂದು ಕೇಳುತ್ತಿದ್ದರು. ಆದರೆ ನಟನೆ ಬಗ್ಗೆ ನನಗೆ ಎಳ್ಳಷ್ಟೂ ಆಸಕ್ತಿ ಇರಲಿಲ್ಲ.  

ಒಂದು ದಿನ ಬಾಂದ್ರಾದಲ್ಲಿ ಮಾಡೆಲಿಂಗ್‌ಗಾಗಿ ಶೂಟಿಂಗ್‌ ಮಾಡುತ್ತಿದ್ದೆ. ಆಗ ಅಲ್ಲಿಗೆ ಬಂದ ನನ್ನ ಸ್ನೇಹಿತ ಮತ್ತು ನಿರ್ದೇಶಕ ಬಂಟಿ , ಶೂಟಿಂಗ್‌ ಸ್ಪಾಟ್‌ನಿಂದ ಹೊರಗೆ ಬರುವಂತೆ ಕರೆದ. ಬಂಟಿ ಜತೆ ಕೆಲ ಜಾಹೀರಾತುಗಳಲ್ಲಿ ನಾನು ಕೆಲಸ ಮಾಡಿದ್ದೆ. ಬಂಟಿಯನ್ನು ಭೇಟಿ ಮಾಡಲು ಹೊರಗೆ ಬಂದು ಕಾರಿನಲ್ಲಿ ಇಣುಕಿದರೆ ಬಂಟಿ ಜೊತೆ ಸಲ್ಮಾನ್‌ ಕೂಡ‌ ಕಾರಿನಲ್ಲಿದ್ದರು.

‘ನಾವಿಬ್ಬರು ಹೀಗೆ ಕಾರಿನಲ್ಲಿ ಹೋಗುತ್ತಿದ್ದೆವು. ನಿನ್ನನ್ನು ಭೇಟಿಯಾಗಿ ಹಾಯ್ ಹೇಳಿ ಹೋಗುವ‌ ಎಂದು ಕರೆದೆ’ ಎಂದು ಬಂಟಿ ಮಾತಿಗೆಳೆದ.‘ಫತ್ಥರ್‌ ಕೆ ಫೂಲ್’‌ ಸಿನಿಮಾ ನಾಯಕಿ ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದ ಸಲ್ಮಾನ್‌ಗೆ ಆ ಸಿನಿಮಾದ ನಿರ್ದೇಶಕ ಜಿ.ಪಿ.ಸಿಪ್ಪಿ ಹಾಗೂ ಬಂಟಿ ಇಬ್ಬರೂ, ‘ನೀನೊಮ್ಮೆ ಏಕೆ ರವೀನಾ ಟಂಡನ್‌ ಅವರನ್ನು ನೋಡಬಾರದು?’ ಎಂದು ಸಲ್ಮಾನ್‌‌ಗೆ ಶಿಫಾರಸು ಮಾಡಿದ್ದರಂತೆ. ಬಹಳ ದಿನಗಳ ನಂತರ ಬಂಟಿ ನನ್ನೆದಿರು ಈ ವಿಷಯ ಬಾಯ್ಬಿಟ್ಟ.

ನನಗೆ ಸಲ್ಮಾನ್‌ ಜೊತೆ ನಟಿಸುವ ಆಫರ್‌ ಬಂದ ವಿಚಾರ ಕೇಳಿ ನನ್ನ ಸ್ನೇಹಿತರು ನನಗಿಂತಲೂ ಹೆಚ್ಚು ಖುಷಿಯಾಗಿದ್ದರು. ಈ ಚಿತ್ರದ ನಂತರ ನಿನಗೆ ಇನ್ನೊಂದು ಚಿತ್ರ ಮಾಡಲು ಇಷ್ಟವಿಲ್ಲದಿದ್ದರೆ ಬೇಡ. ಆದರೆ,ಇದೊಂದು ಚಿತ್ರ ಮಾತ್ರ ಮಾಡು ಎಂದು ಒತ್ತಾಯಿಸಿದ್ದರು.ಆ ಬಳಿಕ ಸಲ್ಮಾನ್‌‌ ಸಿನಿಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದೆ. ಮೊದಲ ಸಿನಿಮಾ ದಿನದಿಂದ ಶುರುವಾದ ಸಲ್ಮಾನ್‌ ಹಾಗೂ ನನ್ನ ಸ್ನೇಹ ಇಂದಿಗೂ ಅದೇ ರೀತಿ ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು