ಬುಧವಾರ, ಜುಲೈ 28, 2021
21 °C

ಚಿರಂಜೀವಿ ಸರ್ಜಾ ಅದ್ಭುತ ನಟನೆಯ 5 ಜನಪ್ರಿಯ ಚಿತ್ರಗಳು

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

chiranjeevi sarja

ಬೆಂಗಳೂರು: ಯುವ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ ಆದರೆ ಅವರ ಸಿನಿಮಾಗಳ ಮೂಲಕ ಸದಾ ಅಭಿಮಾನಿಗಳ ಹೃದಯದಲ್ಲಿ ನೆನಪಾಗಿ ಉಳಿಯಲಿದ್ದಾರೆ.

ಒಟ್ಟು 22 ಸಿನಿಮಾಗಳಲ್ಲಿ ನಟಿಸಿದ್ದ ಚಿರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.ಅವರ ನಗು, ಅಂಗಸೌಷ್ಠವ ಪ್ಲಸ್ ಪಾಯಿಂಟ್ ಆಗಿತ್ತು. ಸ್ಯಾಂಡಲ್‌ವುಡ್‌ನ ಈ ಯುವ ಪ್ರತಿಭೆ ನಟಿಸಿದ್ದ 5 ಜನಪ್ರಿಯ ಚಿತ್ರಗಳು ಇಲ್ಲಿವೆ.

ಅಮ್ಮ ಐ ಲವ್ ಯೂ  ( 2018) 
 
ಬಾಕ್ಸ್ ಆಫೀಸಲ್ಲಿ ಹಿಟ್ ಆಗಿದ್ದ ಅಮ್ಮಾ ಐ ಲವ್ ಯೂ ತಮಿಳು ಸಿನಿಮಾ ಪಿಚ್ಚೈಕ್ಕಾರನ್ ರಿಮೇಕ್,  ಚಿರಂಜೀವಿ ಸರ್ಜಾ ಅವರಲ್ಲಿನ ನಟನ ಸಾಮರ್ಥ್ಯ ಎತ್ತಿ ತೋರಿಸಿದ ಸಿನಿಮಾ ಇದು.

ರುದ್ರ ತಾಂಡವ  (2015)
 ಚಿರು ಅವರ ಜೀವನದಲ್ಲಿ ಚಾಲೆಂಜಿಂಗ್ ಸಿನಿಮಾ ಆಗಿತ್ತು ರುದ್ರ ತಾಂಡವ,  ಸಹೋದರನ ಸಾವಿಗೆ ಪ್ರತೀಕಾರ ತೀರಿಸುವ ಯುವಕನ ಪಾತ್ರದಲ್ಲಿ ಮಿಂಚಿದ್ದರು ಚಿರು. 2013ರಲ್ಲಿ ತೆರೆಕಂಡ ತಮಿಳು ಚಿತ್ರ ವಿಶಾಲ್ ನಟನೆಯ ಪಾಂಡಿಯ ನಾಡು ಸಿನಿಮಾದ ರಿಮೇಕ್ ಆಗಿದೆ ಇದು.  ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದರು.

ಚಂದ್ರಲೇಖ  (2014)
ಹಾರರ್- ಕಾಮಿಡಿ ಚಿತ್ರವಾಗಿದ್ದ ಚಂದ್ರಲೇಖಾದಲ್ಲಿ ಚಿರಂಜೀವಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದರು, ಇದು ತೆಲುಗು ಸಿನಿಮಾ ಪ್ರೇಮ ಕಥಾ ಚಿತ್ರಂನ ರಿಮೇಕ್.

ವಿಶಿಲ್  ( 2013)
 ತಮಿಳು ಚಿತ್ರ ಪಿಜ್ಜಾದ ರಿಮೇಕ್ ಆಗಿರುವ ವಿಶಿಲ್ ಸಿನಿಮಾದಲ್ಲಿ ಚಿರು ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ವರದನಾಯಕ (2013)
ಚಿರಂಜೀವಿ ವೃತ್ತಿ ಜೀವನದಲ್ಲಿನ ಪ್ರಮುಖ ಸಿನಿಮಾ ಆಗಿತ್ತು ವರದ ನಾಯಕ. ಗೋಪಿಚಂದ್ ಅವರ ಲಕ್ಷ್ಯಂ ಸಿನಿಮಾದ ರಿಮೇಕ್ ಚಿತ್ರವಾದ ವರದನಾಯಕದಲ್ಲಿ  ಬಾಲಿವುಡ್ ನಟಿಯರಾದ ಸಮೀರಾ ರೆಡ್ಡಿ ಮತ್ತು ನಿಕೇಶಾ ಪಟೇಲ್ ನಾಯಕಿಯರಾಗಿದ್ದರು.

ಇದನ್ನೂ ಓದಿಮಧುರ ನೆನಪು ಬಿಟ್ಟು ಹೋದ ಚಂದನವನದ ಹಸನ್ಮುಖಿ ನಟ ಚಿರಂಜೀವಿ ಸರ್ಜಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು