ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮಾಯಾ ದರ್ಪಣ್‌’ ಖ್ಯಾತಿಯ ನಿರ್ದೇಶಕ ಕುಮಾರ್ ಶಹಾನಿ ನಿಧನ

Published 25 ಫೆಬ್ರುವರಿ 2024, 9:26 IST
Last Updated 25 ಫೆಬ್ರುವರಿ 2024, 9:26 IST
ಅಕ್ಷರ ಗಾತ್ರ

ಮುಂಬೈ: ಮಾಯಾ ದರ್ಪಣ್, ತರಂಗ್‌ ಮುಂತಾದ ಸಿನೆಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಕುಮಾರ್ ಶಹಾನಿ ವಯೋ ಸಹಜ ಕಾಯಿಲೆಯಿಂದ ನಿಧರಾಗಿದ್ದಾರೆ.

‘ಶನಿವಾರ ತಡರಾತ್ರಿ ಕೋಲ್ಕತ್ತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ’ ಎಂದು ಶಹಾನಿ ಆಪ್ತ ಸ್ನೇಹಿತೆ, ನಟಿ ಮಿತಾ ವಶಿಷ್ಠ ತಿಳಿಸಿದ್ದಾರೆ.

ಕುಮಾರ್ ಶಹಾನಿ1940 ಜನವರಿ 7ರಂದು ಸಿಂಧ್‌ನ ಲರ್ಕಾನಾದಲ್ಲಿ ಜನಿಸಿದ್ದರು. 1947 ರ ದೇಶ ವಿಭಜನೆಯ ನಂತರ ಶಹಾನಿ ಕುಟುಂಬ ಬಾಂಬೆಗೆ ಸ್ಥಳಾಂತರಗೊಂಡಿತ್ತು.

ಬಾಲ್ಯದಲ್ಲಿ ಸಿನಿಮಾ ಕುರಿತು ಆಸಕ್ತಿ ಬೆಳೆಸಿಕೊಂಡಿದ್ದ ಶಹಾನಿ, ಖ್ಯಾತ ನಿರ್ದೇಶಕ ಮಣಿ ಕೌಲ್ ಅವರೊಂದಿಗೆ ಪುಣೆಯ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ’ದಲ್ಲಿ ಅಧ್ಯಯನ ನಡೆಸಿದ್ದರು.

1972ರಲ್ಲಿ ಚಿತ್ರರಂಗ ಪ್ರವೇಶಿಸಿದ ಶಹಾನಿ, ಮೊದಲ ಚಿತ್ರ ‘ಮಾಯಾ ದರ್ಪಣ್‌‘ ಮೂಲಕ ಭರವಸೆ ನಿರ್ದೇಶಕ ಎನಿಸಿಕೊಂಡಿದ್ದರು. 1984ರಲ್ಲಿ ನಿರ್ದೇಶಿಸಿದ ‘ತರಂಗ್’ ಚಿತ್ರವು ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿತ್ತು. ಖಯಾಲ್ ಗಾಥಾ ಮತ್ತು ಕಸ್ಬಾ ಚಿತ್ರವೂ ಅಪಾರ ಜನಮನ್ನಣೆ ಗಳಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT