ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾದಲ್ಲಿ ಅತ್ಯಾಚಾರದ ಪಾತ್ರಗಳಿಗೆ ಆಫರ್‌: ನಟಿ ರೇಣುಕಾ ಬೇಸರ

Last Updated 1 ಜನವರಿ 2022, 7:38 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ ಹಾಗೂ ಕಿರುತೆರೆ ನಟಿ ರೇಣುಕಾ ಶಹಾನೆ ಅವರು ಸಿನಿಮಾರಂಗದಲ್ಲಿ ತಮಗೆ ಬರುತ್ತಿರುವಅತ್ಯಾಚಾರ ಪಾತ್ರಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮರಾಠಿ, ಹಿಂದಿ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಅವರುಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮಗೆ ಬರುತ್ತಿರುವ ಪಾತ್ರಗಳ ಬಗ್ಗೆ ಹೇಳಿಕೆ ನೀಡಿದ್ದಾರೆ.

ವಯಸ್ಸು ಆದಂತೆ ನಟಿಯರಿಗೆ ಅವಕಾಶಗಳು ಕಡಿಮೆಎಂದಿರುವ ಅವರು, ನನಗೆ ಇತ್ತೀಚಿನ ದಿನಗಳಲ್ಲಿ ನಾಯಕನ ತಂಗಿ, ಅಕ್ಕ ಅಥವಾ ಪೋಷಕ ಪಾತ್ರಗಳಲ್ಲಿ ನಟಿಸುವ ಅವಕಾಶಗಳು ಬರುತ್ತಿವೆ ಎಂದಿದ್ದಾರೆ.

ಇನ್ನು ಕೆಲವು ನಿರ್ದೇಶಕರು ಅತ್ಯಾಚಾರದಂತಹ ಪಾತ್ರಗಳನ್ನು ನೀಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ನನಗೆ ಅಂತಹ ಪಾತ್ರಗಳಲ್ಲಿ ನಟನೆ ಮಾಡಲು ಇಷ್ಟವಿಲ್ಲ, ಅಂತಹ ದೃಶ್ಯಗಳನ್ನು ಕಲ್ಪಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ ಎಂದು ರೇಣುಕಾ ಹೇಳಿದ್ದಾರೆ.

ಹಿಂದಿಯ ಪ್ರಮುಖ ಧಾರಾವಾಹಿಗಳಲ್ಲಿ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 2019ರಲ್ಲಿ ಅವರು ಮರಾಠಿ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT