ಸೋಮವಾರ, ಜನವರಿ 17, 2022
26 °C

ಅನುಷ್ಕಾ ಜತೆ ನದಿ ತೀರದಲ್ಲಿ ಸಂಜೆ: ವಿರಾಟ್ ಕೊಹ್ಲಿ ಭಾವನಾತ್ಮಕ ಪೋಸ್ಟ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

VIRAT KOHLI Instagram Post

ಬೆಂಗಳೂರು: ಪತ್ನಿ ಅನುಷ್ಕಾ ಶರ್ಮಾ ಜತೆಗೆ ನದಿ ತೀರದಲ್ಲಿ ಕಲ್ಲಿನ ಮೇಲೆ ಕುಳಿತುಕೊಂಡಿರುವ ಸುಂದರ ಫೋಟೊ ಒಂದನ್ನು ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.

ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ದಂಪತಿ ಅಭಿಮಾನಿಗಳೊಂದಿಗೆ ಸಾಮಾಜಿಕ ತಾಣಗಳ ಮೂಲಕ ಸಂಪರ್ಕದಲ್ಲಿರುತ್ತಾರೆ.

ನೀನು ನನ್ನ ಜತೆಗಿರುವಾಗ, ನಾನು ಎಲ್ಲಿದ್ದರೂ ಮನೆಯಲ್ಲಿರುವಂತೆ ಅನ್ನಿಸುತ್ತಿದೆ ಎಂಬ ಅಡಿಬರಹದೊಂದಿಗೆ ಹೃದಯದ ಎಮೋಜಿ ಬಳಸಿ, ಅನುಷ್ಕಾ ಶರ್ಮಾ ಅವರನ್ನು ಟ್ಯಾಗ್ ಮಾಡಿ ವಿರಾಟ್ ಕೊಹ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್‌ಗೆ ಅನುಷ್ಕಾ ಶರ್ಮಾ ಕೂಡ ಕಾಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದು, ಗ್ರೇಟ್, ಯಾಕೆಂದರೆ ನೀನು ಮನೆಯಲ್ಲಿರುವುದೇ ಅಪರೂಪ ಎಂಬರ್ಥದಲ್ಲಿ ನಗುವಿನ ಎಮೋಜಿ ಬಳಸಿದ್ದಾರೆ..

 

ವಿರಾಟ್ ಕೊಹ್ಲಿಯ ಇನ್‌ಸ್ಟಾಗ್ರಾಂ ಪೋಸ್ಟ್ ಅನ್ನು 41 ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು