ಬುಧವಾರ, ಮೇ 27, 2020
27 °C

ಬಿಡುಗಡೆ ಮುಂದಕ್ಕೆ, ಮೇ 1ಕ್ಕೆ ‘ರಾಬರ್ಟ್‌’ ಚಿತ್ರದ ಬಿಡುಗಡೆಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ಸೋಂಕಿನ ಬಿಸಿ ಮಾರ್ಚ್‌ ಅಂತ್ಯದಲ್ಲಿ ಮತ್ತು ಏಪ್ರಿಲ್‌ ಮೊದಲ ವಾರದಲ್ಲಿ ಬಿಡುಗಡೆಗೆ ಸಿದ್ಧತೆ ನಡೆಸಿದ್ದ ಸ್ಟಾರ್‌ ನಟರ ಹಲವು ಚಿತ್ರಗಳಿಗೆ ತಟ್ಟಿದೆ.

ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಕೊನೆಯ ಹಾಡಿನ ಚಿತ್ರೀಕರಣ ಪೂರ್ಣಗೊಳಿಸಿಕೊಂಡು ತರುಣ್‌ ಸುಧೀರ್‌ ನಿರ್ದೇಶನದ ದರ್ಶನ್‌ ನಟನೆಯ ‘ರಾಬರ್ಟ್‌’ ಚಿತ್ರತಂಡ ಬೆಂಗಳೂರಿಗೆ ಹಿಂದಿರುಗಿತ್ತು. ಪೋಸ್ಟ್ ಪ‍್ರೊಡಕ್ಷನ್‌ ಕೆಲಸ ಮುಗಿಸಿರುವ ಈ ಚಿತ್ರ ಏಪ್ರಿಲ್‌ 9ರಂದು ತೆರೆ ಕಾಣಬೇಕಿತ್ತು. ಕೊರೊನಾ ಸೋಂಕಿನ ಭೀತಿಯಿಂದಾಗಿ ಮೇ 1ರಂದು ಚಿತ್ರ ಬಿಡುಗಡೆಗೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ನಿರ್ಧರಿಸಿದ್ದಾರೆ.

‘ದುನಿಯಾ’ ವಿಜಯ್‌ ನಿರ್ದೇಶನದ ‘ಸಲಗ’ ಶೂಟಿಂಗ್‌ ಪೂರ್ಣಗೊಂಡಿದೆ. ಮಾರ್ಚ್‌ ಅಂತ್ಯದಲ್ಲಿ ಅಥವಾ ಏಪ್ರಿಲ್‌ ಮೊದಲ ವಾರದಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ನಿರ್ಧರಿಸಿತ್ತು. ಇದರ ಬಿಡುಗಡೆಯೂ ಮುಂದೂಡಿಕೆಯಾಗಿದೆ.

ಬೇಸಿಗೆ ರಜೆ ವೇಳೆಗೆ ಸಂತೋಷ್‌ ಆನಂದ್‌ರಾಮ್‌ ನಿರ್ದೇಶನದ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಯುವರತ್ನ’ ಹಾಗೂ ತರುಣ್‌ ಸುಧೀರ್‌ ನಿರ್ದೇಶನದ ಧ್ರುವ ಸರ್ಜಾ ನಟನೆಯ ‘ಪೊಗರು’ ಚಿತ್ರಗಳನ್ನು ತೆರೆಗೆ ತರಲು ಆಯಾ ಚಿತ್ರದ ನಿರ್ಮಾಪ‍ಕರು ನಿರ್ಧರಿಸಿದ್ದರು. ಆದರೆ, ಕೊರೊನಾ ಸೋಂಕಿನ ಭೀತಿಯಿಂದ ಈ ಸಿನಿಮಾಗಳ ಹಾಡುಗಳ ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಹಾಗಾಗಿ, ಈ ಸಿನಿಮಾಗಳ ಬಿಡುಗಡೆ ಎರಡು– ಮೂರು ತಿಂಗಳು ಮುಂದಕ್ಕೆ ಹೋದರೂ ಅಚ್ಚರಿಯಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.