ಗುರುವಾರ , ಮೇ 6, 2021
25 °C

ಎಲ್ಲೆಲ್ಲಿ, ಯಾವಾಗ ರಾಬರ್ಟ್‌ ವಿಜಯ ಯಾತ್ರೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ರಾಬರ್ಟ್‌ ಚಿತ್ರವು ಕರ್ನಾಟಕ ಮತ್ತು ನೆರೆ ರಾಜ್ಯವಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ವಿಜಯ ಯಾತ್ರೆಗೆ ಚಿತ್ರತಂಡ ಸಜ್ಜಾಗಿದೆ. 

ಬಾಕ್ಸ್‌ ಆಫೀಸ್‌ನಲ್ಲೂ ದೊಡ್ಡ ಗೆಲುವು ಸಾಧಿಸಿರುವ ಈ ಚಿತ್ರವು ತೆರೆಕಂಡ ಎರಡೇ ವಾರದೊಳಗೆ ಶತಕೋಟಿ ಕ್ಲಬ್‌ ಸೇರುವುದಕ್ಕೆ ಸಜ್ಜಾಗಿದೆ. ವಿಜಯ ಯಾತ್ರೆ ಮಾರ್ಚ್‌ 29ರಂದು ತುಮಕೂರಿನಿಂದ ಆರಂಭವಾಗಲಿದ್ದು, ನಾಲ್ಕು ದಿನಗಳ ಕಾಲ ಚಿತ್ರತಂಡವು ಹಲವು ಜಿಲ್ಲೆಗಳಿಗೆ ಭೇಟಿ ನೀಡಲಿದೆ. 

ಮಾರ್ಚ್‌ 29ರಂದು ತುಮಕೂರು, ಚಿತ್ರದುರ್ಗ, ದಾವಣಗೆರೆಗೆ ಚಿತ್ರತಂಡವು ಭೇಟಿ ನೀಡಲಿದೆ. ಚಿತ್ರದ ಪ್ರಿರಿಲೀಸ್‌ ಕಾರ್ಯಕ್ರಮವು ಅದ್ಧೂರಿಯಾಗಿ ಹುಬ್ಬಳ್ಳಿಯಲ್ಲಿ ನಡೆದಿತ್ತು. ಇದೀಗ ಮತ್ತೊಮ್ಮೆ ಹುಬ್ಬಳ್ಳಿಗೆ ಚಿತ್ರತಂಡವು ಭೇಟಿ ನೀಡಲಿದ್ದು, ಮಾರ್ಚ್‌ 30ರಂದು ಧಾರವಾಡ, ಹುಬ್ಬಳ್ಳಿ ಹಾಗು ಹಾವೇರಿಯಲ್ಲಿ ವಿಜಯ ಯಾತ್ರೆ ಸಾಗಲಿದೆ. ಮಾರ್ಚ್‌ 31ರಂದು ಶಿವಮೊಗ್ಗ, ಹಾಸನ ಹಾಗೂ ತಿಪಟೂರು, ಏ.1ರಂದು ಗುಂಡ್ಲುಪೇಟೆ, ಮೈಸೂರು, ಮಂಡ್ಯ ಮತ್ತು ಮದ್ದೂರಿನಲ್ಲಿ ಚಿತ್ರತಂಡವು ಅಭಿಮಾನಿಗಳನ್ನು ಭೇಟಿಯಾಗಲಿದೆ.

ವಿಜಯ ಯಾತ್ರೆಯಲ್ಲಿ ದರ್ಶನ್‌ ಅವರು ಭಾಗವಹಿಸಲಿದ್ದಾರೆ ಎಂದು ನಿರ್ದೇಶಕ ತರುಣ್‌ ಸುಧೀರ್‌ ಅವರು ಟ್ವೀಟ್‌ ಮೂಲಕ ತಿಳಿಸಿದ್ದು, ಜೊತೆಗೆ ವಿನೋದ್‌ ಪ್ರಭಾಕರ್‌ ಅವರು ಸೇರಿದಂತೆ ಇತರೆ ಕಲಾವಿದರೂ ಇರಲಿದ್ದಾರೆ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು