ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Singham Again | ಖಡಕ್ ಪೊಲೀಸ್‌ ಅಧಿಕಾರಿ ಲುಕ್‌ನಲ್ಲಿ ನಟ ಅಜಯ್ ದೇವಗನ್‌

ಬಾಲಿವುಡ್‌ ನಟ ಅಜಯ್‌ ದೇವಗನ್‌ ನಟಿಸುತ್ತಿರುವ ಸಿಂಗಂ ಸರಣಿಯ 3ನೇ ಚಿತ್ರ ‘ಸಿಂಗಂ ಎಗೇನ್‌’
Published 21 ನವೆಂಬರ್ 2023, 10:31 IST
Last Updated 21 ನವೆಂಬರ್ 2023, 10:31 IST
ಅಕ್ಷರ ಗಾತ್ರ

ಮುಂಬೈ (ಮಹಾರಾಷ್ಟ್ರ): ಸಿಂಗಂ ಸರಣಿಯ 3ನೇ ಸಿನಿಮಾ ‘ಸಿಂಗಂ ಎಗೇನ್‌’ ಚಿತ್ರದಲ್ಲಿ ನಟ ಅಜಯ್ ದೇವಗನ್ ಅವರ ಫಸ್ಟ್ ಲುಕ್ ಅನ್ನು ನಿರ್ದೇಶಕ ರೋಹಿತ್ ಶೆಟ್ಟಿ ಮಂಗಳವಾರ ಅನಾವರಣಗೊಳಿಸಿದ್ದಾರೆ.

ಇನ್‌ಸ್ಟಾಗ್ರಾಮ್‌ ಪೋಸ್ಟರ್‌ನಲ್ಲಿ ಅಜಯ್ ಅವರ ನೋಟವನ್ನು ಹಂಚಿಕೊಂಡಿರುವ ರೋಹಿತ್, ‘ಎಲ್ಲರ ಅಚ್ಚುಮೆಚ್ಚಿನ ಪೋಲೀಸ್, ಬಾಜಿರಾವ್ ಸಿಂಗಂ ಮರಳಿ ಬಂದಿದ್ದಾನೆ. ಅವನು ಪರಾಕ್ರಮಿ. ಅವನು ಮತ್ತೆ ಘರ್ಜಿಸುತ್ತಾನೆ' ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

ರೋಹಿತ್ ಶೆಟ್ಟಿ ನಿರ್ದೇಶನದ ' ಸಿಂಗಮ್ ಎಗೇನ್ ' ಚಿತ್ರದಲ್ಲಿ ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ರಣವೀರ್ ಸಿಂಗ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನಟ ದೇವಗನ್‌ ಅಭಿನಯದ ‘ಸಿಂಗಂ’ ಮೊದಲ ಚಿತ್ರ 2011ರಲ್ಲಿ ಬಿಡುಗಡೆಯಾಗಿತ್ತು. ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ನಂತರ 2ನೇ ಸರಣಿಯ ‘ಸಿಂಗಂ ರಿಟರ್ನ್ಸ್‌’ನಲ್ಲಿ ಕರೀನಾ ಕೂಡ ನಟಿಸಿದ್ದಾರೆ.

ಈ ಚಿತ್ರ 2024ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT