‘ಸೇರು ನನ್ನ ತೋಳಲ್ಲಿ’ ಆಲ್ಬಂ ಗೀತೆಯಲ್ಲಿ‘ಲೈಫ್ 360’ ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಕಿಶೋರ್ಚಂದ್ರ ಮತ್ತು ‘ಭಿನ್ನ’ ಚಿತ್ರದ ನಾಯಕಿ ಪಾಯಲ್ ರಾಧಾಕೃಷ್ಣ ಹೆಜ್ಜೆ ಹಾಕಿ, ಮೋಡಿ ಮಾಡಿದ್ದಾರೆ.

ಐದು ನಿಮಿಷದ ಈ ವಿಡಿಯೋ ಆಲ್ಬಂ ಸಾಂಗ್ಗೆ ಗೀತೆ ರಚನೆಯನ್ನು ಅರ್ಜುನ್ ಮಾಡಿದ್ದಾರೆ. ಈ ಆಲ್ಬಂನಲ್ಲಿವೈದ್ಯರಾಗಿ ವಿನಾಯಕ್ ಜೋಷಿ ಕಾಣಿಸಿಕೊಂಡಿದ್ದಾರೆ.ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿರುವ ಈ ಹಾಡಿಗೆ ವೀಕ್ಷಕರಮೆಚ್ಚುಗೆಯೂ ದೊರಕಿದೆ.ರ್ಯಾಪರ್ ಸಿದ್ದ್ ಆಲ್ಬಂ ಅನ್ನು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

‘ಸೇರು ನನ್ನ ತೋಳಲ್ಲಿ, ನನ್ನಾಣೆ ನೀನೇ ನನ್ನ ಉಸಿರಲ್ಲಿ’ ಸಾಹಿತ್ಯವಿರುವ ಗೀತೆಯಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿದ ನಿಜವಾದ ಪ್ರೀತಿ ಹೇಗಿರುತ್ತದೆ ಎಂಬುದನ್ನು ಹೇಳಲಾಗಿದೆ. ಚಿಕ್ಕಮಗಳೂರು, ಬೆಂಗಳೂರಿನ ಸುಂದರ ತಾಣಗಳಲ್ಲಿ ಈ ಗೀತೆಯನ್ನು ಚಿತ್ರೀಕರಿಸಲಾಗಿದೆ.

ಸಂಗೀತ, ಗಾಯನ ಹಾಗೂ ನಿರ್ದೇಶನ ಅದ್ವಿಕ್, ಛಾಯಾಗ್ರಹಣ ಅಭಿಮನ್ಯು ಸದಾನಂದ್ ಅವರದು.ಗಗನ್.ಜೆ.ಗೌಡ- ಸುನಿಲ್ಕುಮಾರ್ ಜಂಟಿಯಾಗಿ ಕ್ರಾಂತಿ ಕ್ರಿಯೇಷನ್ಸ್ ಮೂಲಕ ನಿರ್ಮಾಣ ಮಾಡಿದ್ದಾರೆ.ಸುಮಾರು ₹7 ಲಕ್ಷ ವೆಚ್ಚ ಮಾಡಲಾಗಿದೆಯಂತೆ. ಇತ್ತೀಚೆಗಷ್ಟೆ ಪ್ರಾರಂಭಗೊಂಡಿರುವ ಭಾನುಪ್ರತಾಪ್ ಎಸ್. ಒಡೆತನದ ‘50 ಎಂಎಂ’ ಸ್ಟುಡಿಯೋದಲ್ಲಿ ಈ ಗೀತೆಯ ಚಿತ್ರೀಕರಣೋತ್ತರ ಕೆಲಸಗಳು ನಡೆದಿವೆ. ಕ್ರಾಂತಿ ಕ್ರಿಯೇಶನ್ಸ್ ಹಾಗೂ 50 ಎಂಎಂ ಸ್ಟುಡಿಯೋ ಸೇರಿ ಸಿನಿಮಾ ಮಾಡುವ ಚಿಂತನೆಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.