ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಯಾಗಿ ಆರೇ ದಿನದಲ್ಲಿ ಹಾಕಿದ ಹಣ ವಾಪಸ್ ತಂದ ರಾಜಮೌಳಿ RRR ಸಿನಿಮಾ!

Last Updated 30 ಮಾರ್ಚ್ 2022, 11:07 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌.ಎಸ್. ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌‘ ಚಿತ್ರ ಬಾಕ್ಸ್ ಆಫೀಸ್‌ ಗಳಿಕೆಯಲ್ಲಿ ಭಾರೀ ಯಶಸ್ಸಿನತ್ತ ಮುನ್ನುಗ್ಗುತ್ತಿದೆ.

ಆರಂಭದ ದಿನವೇ ಚಿತ್ರ ₹236 ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗಿತ್ತು. ಇದೀಗ ಚಿತ್ರದ ನಿರ್ಮಾಪಕರು ಖಚಿತಪಡಿಸಿರುವಂತೆ ಸಿನಿಮಾ ಜಾಗತಿಕವಾಗಿ ಬಿಡುಗಡೆಯಾಗಿ ಆರು ದಿನಕ್ಕೆ ₹611 ಕೋಟಿ ಗಳಿಕೆ ಕಂಡಿದೆ ಎಂದು ಪಿಟಿಐ ವರದಿ ಮಾಡಿದೆ.

ಐದೂ ಭಾಷೆಗಳಲ್ಲಿನ ಗಳಿಕೆ ಸೇರಿ ಸುಮಾರು ₹474 ಕೋಟಿ ದಾಖಲಾದರೆ, ಸುಮಾರು ₹137 ಕೋಟಿ ವಿದೇಶಗಳಿಂದ ಬಂದ ಗಳಿಕೆಯಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಇನ್ನು ಈ ಚಿತ್ರ ಒಟಿಟಿ, ಸೆಟ್‌ಲೈಟ್ ಹಕ್ಕು, ಟಿವಿ ಹಕ್ಕು, ಮ್ಯೂಸಿಕ್ ಹಕ್ಕುಗಳು ಸೇರಿ ಬಿಡುಗಡೆಗೂ ಮುನ್ನವೇ ಸುಮಾರು ₹500 ಕೋಟಿ ಗಳಿಸಿದೆ.

ಸಿನಿಮಾ ನಿರ್ಮಾಣಕ್ಕೆ ₹500 ಕೋಟಿ ಖರ್ಚಾಗಿತ್ತು ಎನ್ನಲಾಗಿದೆ. ಈ ಚಿತ್ರದ ಬಜೆಟ್ ಭಾರತೀಯ ಚಿತ್ರರಂಗದಲ್ಲೇ ಅಧಿಕ ಎಂದು ಹೇಳಲಾಗುತ್ತಿದೆ.

ಜ್ಯೂ. ಎನ್‌ಟಿಆರ್, ರಾಮ್‌ ಚರಣ್, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಅವರ ತಾರಾಗಣವನ್ನು ಒಳಗೊಂಡ ಆರ್‌ಆರ್‌ಆರ್‌ ಚಿತ್ರ, ಕನ್ನಡದಲ್ಲಿಯೂ ಬಿಡುಗಡೆಯಾಗಿದೆ.ಜತೆಗೆ, 'ಬಾಹುಬಲಿ: ದಿ ಕನ್‌ಕ್ಲೂಶನ್' ಚಿತ್ರದ ಬಜೆಟ್‌ಗಿಂತಲೂ ₹100 ಕೋಟಿ ಹೆಚ್ಚಿನ ಮೊತ್ತವನ್ನು ಆರ್‌ಆರ್‌ಆರ್‌ ಚಿತ್ರಕ್ಕಾಗಿ ವ್ಯಯಿಸಲಾಗಿದೆ.

ಆರ್‌ಆರ್‌ಆರ್‌ ಚಿತ್ರದ ಕುರಿತು ಉತ್ತಮ ವಿಮರ್ಶೆಯನ್ನು ಕೂಡ ನೋಡುಗರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT