ಶನಿವಾರ, ಜನವರಿ 25, 2020
22 °C

ಮಾಸ್‌ ಸಿನಿಮಾಗಳ ಕೇರಾಫ್‌ ಅಡ್ರೆಸ್‌ ಬಾಲಯ್ಯ ಈಗ 'ರೂಲರ್‌'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ತೆಲುಗಿನಲ್ಲಿ ಮಾಸ್‌ ಸಿನಿಮಾಗಳಿಗೆ ಕೇರಾಫ್‌ ಅಡ್ರಸ್‌ ಅಂದ್ರೆ ಬಾಲಯ್ಯ ಅಲಿಯಾಸ್‌ ನಂದಮೂರಿ ಬಾಲಕೃಷ್ಣ. ಈ ಬಾಲಯ್ಯ ಮತ್ತೊಂದು ಮಾಸ್‌ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.

ಬಾಲಯ್ಯ 'ರೂಲರ್‌' ಆಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರೂಲರ್‌ ಸಿನಿಮಾದ ಟ್ರೇಲರ್‌ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದ ಟ್ರೇಲರ್‌ 25 ಲಕ್ಷಕ್ಕೂ ಹೆಚ್ಚು ವ್ಯೂಗಳನ್ನು ಪಡೆದಿದೆ. ಗ್ರಾಮೀಣ ಪ್ರದೇಶದ ಕಥಾ ಹಂದರ ಇರುವ ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಕೆ.ಎಸ್‌.ರವಿಕುಮಾರ್‌ ನಿರ್ದೇಶನ ಮಾಡಿದ್ದಾರೆ. 

ಈ ಹಿಂದೆ ಬಾಲಯ್ಯ ಮತ್ತು ರವಿಕುಮಾರ್‌ ಜೋಡಿಯ ಜೈಸಿಂಹ ಚಿತ್ರ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ವಿಯಾಗಿತ್ತು. ಇದೀಗ ರೂಲರ್‌ ಆಗಿ ಬೆಳ್ಳಿ ತೆರೆ ಆವರಿಸಿಕೊಳ್ಳಲ್ಲಿರುವ ಬಾಲಯ್ಯ ಅವರನ್ನು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಬಹುದು ಎಂಬುದನ್ನು ಟ್ರೇಲರ್‌ ನೋಡಿದವರಿಗೆ ಅನ್ನಿಸಿದೆ ಇರದು. ರೈತರ ಕಷ್ಟು ಸುಖಗಳಿಗೆ ಸ್ಪಂದಿಸುವ, ರೈತರ ಜಮೀನುಗಳನ್ನು ಕಾರ್ಪೋರೆಟ್‌ ದಲ್ಲಾಳಿಗಳಿಂದ ರಕ್ಷಣೆ ಮಾಡುವ ಒಂದು ಪಾತ್ರ, ಪೊಲೀಸ್‌ ಅಧಿಕಾರಿಯಾಗಿ ಮತ್ತೊಂದು ಪಾತ್ರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ.  

ಸಿ.ಕಲ್ಯಾಣ್‌ ಅವರು ಹ್ಯಾಪಿ ಮೂವೀಸ್‌ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿರಂತನ್‌ ಭಟ್‌ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಹುದೊಡ್ಡ ತಾರಾಬಳಗ ಇರುವ ಈ ಸಿನಿಮಾದಲ್ಲಿ ಬಾಲಕೃಷ್ಣಗೆ ಜೋಡಿಯಾಗಿ ವೇದಿಕಾ ಮತ್ತು ಸೋನಾಲ್‌ ಚೌಹಾಣ್‌ ನಟಿಸಿದ್ದಾರೆ. ಮಾಸ್‌ ಪ್ರೇಕ್ಷಕರಿಗಾಗಿ ಕೌಟುಂಬಿಕ ಎಳೆಯೊಂದನ್ನು ಇಟ್ಟುಕೊಂಡು ಸಾಮಾಜಿಕವಾಗಿ ರೈತರನ್ನು ಕೇಂದ್ರವಾಗಿಟ್ಟುಕೊಂಡು ರವಿಕುಮಾರ್‌ ಕಥೆ ಎಣೆದಿದ್ದಾರೆ ಎನ್ನಲಾಗಿದೆ.

ಮಾಸ್‌ ಹಿರೋ ಆಗಿ ಬಾಲಯ್ಯ ಹೊಸ ಅವತಾರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ ಎಂದು ಚಿತ್ರತಂಡ ಹೇಳಿಕೊಂಡಿದೆ. ಇದುವರೆಗೂ ಬಿಡುಗಡೆಯಾಗಿರುವ ಫಸ್ಟ್‌ಲುಕ್‌, ಟೀಸರ್‌ ಸಾಕಷ್ಟು ಹಿಟ್‌ ನೀಡಿದ್ದವು. ಇದೀಗ ಟ್ರೇಲರ್‌ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಾಲಯ್ಯ ಅವರ 105ನೇ ಚಿತ್ರ ಇದಾಗಿದೆ. 

ಪ್ರಕಾಶ್‌ ರೈ, ಸಯ್ಯಾಜಿ ಶಿಂಧೆ, ಜಯಸುಧಾ, ಭೂಮಿಕಾ, ಪರಾಗ್‌ ತ್ಯಾಗಿ , ರಘಬಾಬು ಸೇರಿದಂತೆ ದೊಡ್ಡ ತಾರಬಳಗವೇ ಈ ಚಿತ್ರದಲ್ಲಿದೆ. ಹಾಸ್ಯನಟ ಸಪ್ತಗಿರಿ ಪ್ರೇಕ್ಷಕರಿಗೆ ಕಚಗುಳಿ ಕೊಡುವುದದಂತೂ ಸತ್ಯ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಓಡಿಶಾ ಸೇರಿದಂತೆ ವಿಶ್ವದಾದ್ಯಂತ ಈ ಸಿನಿಮಾ ಡಿಸೆಂಬರ್‌ 20ರಂದು ತೆರೆ ಕಾಣಲಿದೆ. 

ಈ ಸಿನಿಮಾ ಬಿಡುಗಡೆಯಾದ ಬಳಿಕ ಮತ್ತೊಂದು ಮಸಾಲೆಯುಕ್ತ ಮಾಸ್‌ ಸಿನಿಮಾದಲ್ಲಿ ನಟಿಸಲು ಬಾಲಯ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾವನ್ನು ಬಾಯಪಾಟಿ ಸೀನು ನಿರ್ದೇಶನ ಮಾಡಲಿದ್ದಾರೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು