ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 10ರಂದು ತೆರೆ ಮೇಲೆ ‘ರೂಪಾಯಿ’

Last Updated 18 ಜನವರಿ 2023, 8:54 IST
ಅಕ್ಷರ ಗಾತ್ರ

ವಿಜಯ್ ಜಗದಾಲ್ ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ ‘ರೂಪಾಯಿ’ ಚಿತ್ರ ಫೆಬ್ರವರಿ 10ರಂದು ಬಿಡುಗಡೆಯಾಗಲಿದೆ. ಖ್ಯಾತ ನಟ ಡಾಲಿ ಧನಂಜಯ ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದರು.

ಈಗಾಗಲೇ ಆನಂದ್ ಆಡಿಯೋ ಮೂಲಕ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ, ಜನರ ಮೆಚ್ಚುಗೆ ಪಡೆದುಕೊಂಡಿದೆ.

‘ರೂಪಾಯಿ’ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದೆ. ಐದು ಪ್ರಮುಖ ಪಾತ್ರಗಳ ಸುತ್ತ ಈ ಕಥೆ ಸಾಗುತ್ತದೆ. ವಿಜಯ್ ಜಗದಾಲ್, ಕೃಷಿ ತಾಪಂಡ, ಯಶ್ವಿಕ್, ಚಂದನ ರಾಘವೇಂದ್ರ, ರಾಮ ಚಂದನ್, ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ., ಹರೀಶ್ ಬಿ.ಕೆ. ಮತ್ತು ವಿನೋದ್ ಎನ್. ಈ ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಮೋದ್ ಶೆಟ್ಟಿ, ಮೋಹನ್ ಜುನೇಜ, ರಾಕ್‌ಲೈನ್‌ ಸುಧಾಕರ್, ಅನಿಲ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಆರ್.ಡಿ. ನಾಗಾರ್ಜುನ ಛಾಯಾಗ್ರಹಣ, ಆನಂದ್ ರಾಜವಿಕ್ರಮ್ ಸಂಗೀತ ನಿರ್ದೇಶನ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT