ಶುಕ್ರವಾರ, ಫೆಬ್ರವರಿ 26, 2021
24 °C

ರೂಪಾಯಿ ಟೀಸರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಜುನಾಥ್ ಎಂ. ನಿರ್ಮಿಸುತ್ತಿರುವ ‘ರೂಪಾಯಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿನೋದ್ ನಾಗ್ ಅವರು ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅವರಿಗೆ ನಿರ್ದೇಶಕರಾಗಿ ಇದು ಮೊದಲ ಚಿತ್ರ. ಸಿನಿಮಾ ಚಿತ್ರೀಕರಣವು ಮುಕ್ತಾಯದ ಹಂತದಲ್ಲಿ ಇದೆಯಂತೆ.

ಚಿತ್ರದ ಶೀರ್ಷಿಕೆಯೇ ‘ರೂಪಾಯಿ’ ಎಂದಿರುವ ಕಾರಣ, ಚಿತ್ರದ ಕಥೆ ಇರುವುದು ಹಣದ ಬಗ್ಗೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯ ಇಲ್ಲ. ‘ಚಿತ್ರದ ಕಥೆಯನ್ನು ನಿಜ ಜೀವನಕ್ಕೆ ಹತ್ತಿರವಾಗಿಸಿ, ಮನರಂಜನೆಯನ್ನೇ ಪ್ರಮುಖವಾಗಿಟ್ಟುಕೊಂಡು ಹೆಣೆಯಲಾಗಿದೆ’ ಎನ್ನುತ್ತಾರೆ ವಿನೋದ್ ನಾಗ್. ಅವರು ಚಿತ್ರದ ನಾಯಕನಾಗಿಯೂ ಕಾಣಿಸಿಕೊಳ್ಳಲಿದ್ದಾರೆ.

ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿರುವುದು ಕೂಡ ವಿನೋದ್ ಅವರೇ. ಆನಂದ್ ರಾಜ ವಿಕ್ರಮ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ನಾಗಾರ್ಜುನ್ ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ.

ಕೃಷಿ ತಾಪಂಡ, ಮೈತ್ರಿ ಜಗದೀಶ್, ರಾಮ್ ಚಂದನ್, ಚಂದನ ರಾಘವೇಂದ್ರ, ಅನಿಲ್ ಕುಮಾರ್, ಪ್ರಮೋದ್ ಶೆಟ್ಟಿ, ರಾಕ್‍ಲೈನ್ ಸುಧಾಕರ್, ಮೋಹನ್ ಜುನೇಜ, ಗಿರೀಶ್, ಸವಿತಾ, ರವಿ ಕಲ್ಯಾಣ್, ಸೀತಾರಾಂ, ರಾಮಣ್ಣ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರದ ಅಡಿಶೀರ್ಷಿಕೆಯಾಗಿ ‘ಚಿಲ್ರೆ ವಿಷಯ ಅಲ್ಲಾ ಗುರು’ ಎಂದು ಬರೆಯಲಾಗಿದೆ. ಟೀಸರ್‌ನಲ್ಲಿ ಒಂದಿಷ್ಟು ಆ್ಯಕ್ಷನ್‌ ದೃಶ್ಯಗಳಿದ್ದು, ಸಿನಿಮಾ ಕೂಡ ಆ್ಯಕ್ಷನ್‌ ಆಧರಿಸಿರಲಿದೆ ಎಂಬ ಸೂಚನೆ ನೀಡುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು