ಪ್ರಭಾಸ್‌ ನಟನೆಯ ’ಸಾಹೋ’ದ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ

ಗುರುವಾರ , ಜೂನ್ 27, 2019
29 °C

ಪ್ರಭಾಸ್‌ ನಟನೆಯ ’ಸಾಹೋ’ದ ಪೋಸ್ಟರ್‌ಗೆ ಅಭಿಮಾನಿಗಳು ಫಿದಾ

Published:
Updated:

ಹೈದರಾಬಾದ್‌: ನಿರೀಕ್ಷೆ ಹುಟ್ಟುಹಾಕಿರುವ ತೆಲುಗಿನ ಸಾಹೋ ಸಿನಿಮಾದ ಪೊಸ್ಟರ್‌ ಬಿಡುಗಡೆಯಾಗಿದ್ದು ನಟ ಪ್ರಭಾಸ್ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 

’ನನ್ನ ಮುಂದಿನ ಸಾಹೋ ಚಿತ್ರದ ಪೊಸ್ಟರ್‌ ಬಿಡುಗಡೆಯಾಗಿದ್ದು ಈ ಸಿನಿಮಾ ಆಗಸ್ಟ್‌ 15ರಂದು ಬಿಡುಗಡೆಯಾಗಲಿದೆ ಎಂದು ಪ್ರಭಾಸ್‌ ಟ್ವೀಟ್‌ ಮಾಡಿದ್ದಾರೆ. 

ಯುವಿ ಕ್ರಿಯೇಷನ್‌ ನಿರ್ಮಾಣದ ಸಾಹೋ ಚಿತ್ರ ₹300 ಕೋಟಿ ವೆಚ್ಚದಲ್ಲಿ ತಯಾರುಗುತ್ತಿದೆ. ಸುಜೀತ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಪ್ರಭಾಸ್‌ಗೆ ಜೋಡಿಯಾಗಿ ಬಾಲಿವುಡ್‌ನ ಶ್ರದ್ಧಾ ಕಪೂರ್ ನಟಿಸಿದ್ದಾರೆ.  ಅರುಣ್ ವಿಜಯ್, ಮಂದಿರಾ ಬೇಡಿ, ಜಾಕಿ ಶ್ರಾಫ್, ಮುರಳಿ ಶರ್ಮಾ, ಆದಿತ್ಯ ಶ್ರೀವಾತ್ಸವ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇರುವ ಸಾಹೋ ಚಿತ್ರ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ನಿರೀಕ್ಷೆ ಹುಟ್ಟು ಹಾಕಿದೆ. 

‘ಬಾಹುಬಲಿ’ ಸಿನಿಮಾದ ಬಳಿಕ ಪ್ರಭಾಸ್‌ ಮಾಸ್‌ ಲುಕ್‌ನಲ್ಲಿ ಮಿಂಚಿದ್ದಾರೆ. ಕನ್ನಡಕ ಹಾಕಿಕೊಂಡು ಖಡಕ್‌ ಲುಕ್‌ನಲ್ಲಿ  ಪ್ರಭಾಸ್‌ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಬರುವ ಆಗಸ್ಟ್ 15ರಂದು ಸಾಹೋ ಸಿನಿಮಾ ಬಿಡುಗಡೆಯಾಗಲಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !