ಬೆಂಗಳೂರು: ಬಾಲಿವುಡ್ ನಟಿ ಕರೀನಾ ಕಪೂರ್ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿ ಇದೀಗ ಎರಡು ಮಕ್ಕಳ ತಾಯಿಯಾಗಿದ್ದರೂ ಚಿತ್ರರಂಗದಲ್ಲಿ ಕ್ರಿಯಾಶೀಲರಾಗಿದ್ದಾರೆ.

ನಟ ಸೈಫ್ ಅಲಿಖಾನ್ ಅವರ ಎರಡನೇ ಪತ್ನಿಯಾಗಿರುವ ಕರೀನಾ ತಮ್ಮ ಅಭಿಮಾನಿಗಳಿಂದ ಆಗಾಗ ಟ್ರೋಲ್‌ಗೆ ಒಳಗಾಗುತ್ತಿರುತ್ತಾರೆ. ಅವರ ಅಭಿಮಾನಿಗಳು ಅವರನ್ನು ಛೇಡಿಸುತ್ತಿರುತ್ತಾರೆ.

ಇದಕ್ಕೆ ತಲೆ ಕೆಡಿಸಿಕೊಳ್ಳದ ಕರೀನಾ ಅಷ್ಟೇ ಚುರುಕಾಗಿ ಅಭಿಮಾನಿಗಳ ಕಾಲೆಳೆಯಲು ಸಿದ್ದ ಹಸ್ತರು. ಹೀಗೆ ಇತ್ತೀಚೆಗೆ ತಮ್ಮ ಫೋಟೊಗಳಿಗೆ "ಏನ್ರಿ ಕರೀನಾ ನೀವು ಮತ್ತೆ ಗರ್ಭಿಣಿ ಆದ್ರಾ?" ಎಂದು ಕೇಳಿದ್ದರು.

ಇದನ್ನು ಗಂಭಿರವಾಗಿ ತೆಗೆದುಕೊಂಡ ಕರೀನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಾಸ್ಯಭರಿತವಾಗಿ ಉತ್ತರ ಕೊಟ್ಟಿದ್ದಾರೆ. ‘ಹೇ ಸುಮ್ಮನೇ ಇರಿ, ನಾನು ಗರ್ಭಿಣಿ ಆಗಿಲ್ಲ, ಈಗಾಗಲೇ ನನ್ನ ಗಂಡ ಸೈಫ್ ಈ ದೇಶದ ಜನಸಂಖ್ಯೆಗೆ ತುಂಬಾ ದೊಡ್ಡ ಕೊಡುಗೆ ಕೊಟ್ಟಿದ್ದಾರೆ’ಎಂದು ತಮಾಷೆ ಮಾಡಿದ್ದಾರೆ. ಈ ಮೂಲಕ ಕರೀನಾ ತಮ್ಮ ಪ್ರಗ್ನನ್ಸಿ ರೂಮರ್‌ಗಳಿಗೆ ತೆರೆ ಎಳೆದಿದ್ದಾರೆ.

ಕರೀನಾ ಕಪೂರ್ ಹಾಗೂ ಸೈಫ್ ಅಲಿಖಾನ್ 2012 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಈಗಾಗಲೇ ತೈಮೂರ್ ಅಲಿಖಾನ್ ಹಾಗೂ ಜಹಾಂಗೀರ್ ಅಲಿಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಇದಕ್ಕೂ ಮುನ್ನ ಸೈಫ್ ಅಲಿಖಾನ್ ಅವರು 1991 ರಲ್ಲಿ ನಟಿ ಅಮೃತಾ ಸಿಂಗ್ ಅವರನ್ನು ಮದುವೆಯಾಗಿದ್ದರು. 2014 ರಲ್ಲಿ ಸೈಫ್ ಅಮೃತಾ ಅವರಿಗೆ ವಿಚ್ಛೇಧನ ನೀಡಿದ್ದರು. ಇವರಿಗೆ ಸಾರಾ ಅಲಿಖಾನ್ ಹಾಗೂ ಇಬ್ರಾಹಿಂ ಅಲಿಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ಎಕ್ಸ್ ಜೊತೆ ಸೆಕ್ಸ್ ಮಾಡಿದ್ರಾ..? ಕರಣ್ ಜೋಹರ್ಗೆ ಜಾಹ್ನವಿ ಕೊಟ್ಟ ಉತ್ತರ ಏನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.